For Quick Alerts
  ALLOW NOTIFICATIONS  
  For Daily Alerts

  ಟ್ರಂಪ್ ಸಹಿ ಬಳಿಕ ವೈರಲ್ ಆದ ಬಾಲಕೃಷ್ಣ ಸಿಗ್ನೇಚರ್: ಫೋರ್ಜರಿ ಮಾಡಲು ಅಸಾಧ್ಯ.!

  |

  ಎರಡು ದಿನಗಳ ಪ್ರವಾಸಕ್ಕಾಗಿ ನಿನ್ನೆ (ಸೋಮವಾರ, ಫೆಬ್ರವರಿ 24) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿಳಿದರು. ಪತ್ನಿ ಮೆಲಾನಿಯಾ, ಮಗಳು ಇವಾಂಕ ಟ್ರಂಪ್ ಮತ್ತು ಅಳಿಯ ಜಾರೆಡ್ ಕುಶ್ನರ್ ಜೊತೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದು, ನಿನ್ನೆ ಗುಜರಾತ್ ನ ಸಬರಮತಿ ಆಶ್ರಮ, ಮೊಟೆರಾ ಕ್ರೀಡಾಂಗಣ, ಆಗ್ರಾದ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಭೇಟಿ ನೀಡಿದ್ದರು.

  ನಿನ್ನೆ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಚರಕವನ್ನು ಸುತ್ತಿ ನೂಲು ತೆಗೆದು, ''ಟು ಮೈ ಗ್ರೇಟ್ ಫ್ರೆಂಡ್ ಪ್ರೈಮ್ ಮಿನಿಸ್ಟರ್ ಮೋದಿ, ಥಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್'' ಎಂದು ಸಂದರ್ಶಕರ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದರು. ಟ್ರಂಪ್ ರವರ ಹಸ್ತಾಕ್ಷರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಟ್ರಂಪ್ ಹಸ್ತಾಕ್ಷರ ಇಸಿಜಿ ಅಲೆಯಂತೆ ಕಾಣುತ್ತಿದೆ ಎಂದ ಟ್ವಿಟ್ಟಿಗರು

  ಇಸಿಜಿಯಂತೆ ಕಾಣುವ ಟ್ರಂಪ್ ರವರ ಸಹಿ ವೈರಲ್ ಆಗುತ್ತಿದ್ದಂತೆಯೇ, ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ರವರ ಸಿಗ್ನೇಚರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  ಟ್ರಂಪ್ ಮತ್ತು ಬಾಲಯ್ಯನ ಸಿಗ್ನೇಚರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಟ್ರಂಪ್ ಸಹಿ ಹಾಗೂ ಬಾಲಯ್ಯನ ಸಿಗ್ನೇಚರ್ ನ ನಕಲಿ ಅಥವಾ ಫೋರ್ಜರಿ ಮಾಡುವುದು ಅಸಾಧ್ಯ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  English summary
  Comparison between Balakrishna and Donald Trump Signature.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X