For Quick Alerts
  ALLOW NOTIFICATIONS  
  For Daily Alerts

  'ಜೆರ್ಸಿ' ಸಿನಿಮಾ ನಟನ ವಿರುದ್ಧ ವಂಚನೆ ಪ್ರಕರಣ ದಾಖಲು

  |

  ತೆಲುಗಿನ 'ಜೆರ್ಸಿ' ಸಿನಿಮಾದ ನಟನ ವಿರುದ್ಧ ಪ್ರಕರಣ ದಾಖಲಾಗಿದೆ. ನಟ ವಿಶ್ವನಾಥ ದುದ್ದಂಪುಡಿ ಮೇಲೆ ಹೈದರಾಬಾದ್ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

  ನಾನಿ, ಶ್ರದ್ಧಾ ಕಪೂರ್ ನಟಿಸಿದ್ದ ಹಿಟ್ ಸಿನಿಮಾ 'ಜೆರ್ಸಿ' ನಲ್ಲಿ ನಟಿಸಿದ್ದ ವಿಶ್ವನಾಥ ದುದ್ದಂಪುಡಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿಶ್ವನಾಥ ವಿರುದ್ಧ ಹಲವಾರು ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

  ನಟ ವಿಶ್ವನಾಥ ದುದ್ದುಂಪುಡಿ ಹಲವಾರು ಮಂದಿಯಿಂದ ಹಣ ಪಡೆದು ಅವರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವುದಾಗಿ ಹೇಳಿದ್ದ ಆದರೆ ಹಣ ಪಡೆದ ನಂತರ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಲಿಲ್ಲ. ಕಾದು-ಕಾದು ಸುಸ್ತಾದ ಜನರು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಿಶ್ವನಾಥ್ ವಿರುದ್ಧ ದೂರು ನೀಡಿದ್ದಾರೆ. ನಟ ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿಲ್ಲ.

  ನಟ ವಿಶ್ವನಾಥ್ 2015 ರಲ್ಲಿ ಕೇರಿಂತೆ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದರು. 2016 ರಲ್ಲಿ ಮೋಹನ್‌ಲಾಲ್ ಜೊತೆಗೆ ಮನಮಂತಾ ಸಿನಿಮಾದಲ್ಲಿ ನಟಿಸಿದ್ದಾರೆ. ಆ ನಂತರ ಕ್ರೇಜಿ ಕ್ರೇಜಿ ಫೀಲಿಂಗ್ಸ್, ತೊಲು ಬೊಮ್ಮಲಾಟ, ಒ ಪಿಟ್ಟ ಕತಾ, ಜೆರ್ಸಿ ಸಿನಿಮಾಗಳಲ್ಲಿ ನಟಿಸಿದರು.

  ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

  ವಿಶ್ವನಾಥ ಪ್ರಸ್ತುತ ಬಾಯ್‌ಫ್ರೆಂಡ್ ಟು ಹೈರ್ ಹಾಗೂ ಕಾದಲ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ವಿಶ್ವನಾಥ ಗೆ ಹಲವಾರು ಅಭಿಮಾನಿಗಳು ಸಹ ಇದ್ದಾರೆ. ಆದರೆ ಈ ವಂಚನೆ ಪ್ರಕರಣ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

  Read more about: telugu
  English summary
  Complaint filed against Telugu actor Vishwanath Duddumpudi for taking money from people and cheating them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X