ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ನಟ ವಿಜಯ್ ಸೇತುಪತಿ ವಿರುದ್ಧ ದೂರು ದಾಖಲು
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಈಗ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ನಟ ವಿಜಯ್ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಆರೋಪ ಕೇಳಿ ಬಂದಿದೆ. ವಿಜಯ್ ವಿರುದ್ಧ ಆಲ್ ಇಂಡಿಯ ಹಿಂದೂ ಸಭಾ ತಿರುಚ್ಚಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
Recommended Video
ಇತ್ತೀಚಿಗೆ "ನಮ್ಮ ಊರು ಹೀರೋ" ಎನ್ನುವ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟ ವಿಜಯ್ ಸೇತುಪತಿ "ಚಿಕ್ಕ ಹುಡುಕಿ ತಾತನ ಬಳಿ ಒಂದು ಪ್ರಶ್ನೆ ಕೇಳುತ್ತಿದ್ದಳು, ಯಾಕೆ ತಾತ ದೇವರಿಗೆ ಅಲಂಕಾರ ಮಾಡುವುದನ್ನು ತೋರಿಸುವುದಿಲ್ಲ. ಆದರೆ ದೇವರಿಗೆ ಸ್ನಾನ ಮಾಡುವುದನ್ನು ತೋರಿಸುತ್ತಾರೆ" ಎಂದು ಕಾರ್ಯಕ್ರಮದಲ್ಲಿ ನಟ ವಿಜಯ್ ಹೇಳಿದ್ದಾರೆ.
ವಿಜಯ್ ಅವರ ಈ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿಜಯ್ ಹೇಳಿಕೆ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ. ಇದೂ ಹಿಂದೂ ಧಾರ್ಮಿಕ ಆಚರಣೆಗಳ ಮೇಲಿನ ನೇರ ದಾಳಿಯಾಗಿದೆ. ಎಂದು ವಿಜಯ್ ವಿರುದ್ಧ ಆರೋಪ ಕೇಳಿ ಬರುತ್ತಿದೆ.

ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳಲು ಇವರಿಗೆ ಹಿಂದೂ ಧರ್ಮವೇ ಬೇಕಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ. ವಿಜಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೂ ಸಭಾ, ಪೊಲೀಸ್ ಕಮಿಷನರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











