twitter
    For Quick Alerts
    ALLOW NOTIFICATIONS  
    For Daily Alerts

    ಪವನ್ ನಟನೆಯ 'ವಕೀಲ್ ಸಾಬ್' ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    |

    ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾದ ಏಪ್ರಿಲ್ 09 ರಂದು ಬಿಡುಗಡೆ ಆಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

    ಪವನ್ ಕಲ್ಯಾಣ್ ನಟರಾಗಿರುವ ಜೊತೆಗೆ ಸಕ್ರಿಯ ರಾಜಕಾರಣಿಯೂ ಆಗಿರುವ ಕಾರಣ 'ವಕೀಲ್ ಸಾಬ್' ಸಿನಿಮಾಕ್ಕೆ ರಾಜಕೀಯ ರೀತಿಯ ಸಮಸ್ಯೆಗಳು ಸಹ ಎದುರಾಗುತ್ತಿವೆ.

    ಆಂಧ್ರ ಸರ್ಕಾರದ ಆದೇಶ ಆಧರಿಸಿ 'ವಕೀಲ್ ಸಾಬ್' ಸಿನಿಮಾದ ವಿಶೇಷ ಪ್ರದರ್ಶನಗಳನ್ನು ರದ್ದು ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಹುನ್ನಾರ ಇದೆ ಎಂದು ಪವನ್ ಕಲ್ಯಾಣ್ ಅಭಿಮಾನಿಗಳು ಈಗಾಗಲೇ ಆರೋಪಿಸಿದ್ದಾರೆ. ಈ ನಡುವೆ ಸಿನಿಮಾದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

     Complaint Given To Election Commission Against Vakeel Saab

    ತಿರುಪತಿ ಲೋಕಸಭಾ ಕ್ಷೇತ್ರದ ಮತದಾನ ಈಗಷ್ಟೆ ಮುಗಿದಿದೆ. ಚುನಾವಣಾ ಫಲಿತಾಂಶ ನಾಳೆ (ಏಪ್ರಿಲ್ 10) ಕ್ಕೆ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಪವನ್ ಕಲ್ಯಾಣ್‌ರ ಸಾರಥ್ಯದ 'ಜನಸೇನಾ' ಪಕ್ಷದ ಅಭ್ಯರ್ಥಿ ಸಹ ಇದ್ದಾರೆ. ಚುನಾವಣೆ ಮುಗಿಯುವ ಮುನ್ನವೇ ವಕೀಲ್ ಸಾಬ್ ಸಿನಿಮಾ ಬಿಡುಗಡೆ ಮಾಡಿರುವುದು ಚುನಾವಣಾ ನೀತಿ ಉಲ್ಲಂಘನೆ ಎಂದು ಆರೋಪಿಸಿ ನಲ್ಲೂರು ಜಿಲ್ಲೆ ವೆಂಕಟಗಿರಿಯ ನರೇಂದ್ರ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಆದರೆ ನರೇಂದ್ರ ನೀಡಿರುವ ದೂರನ್ನು ತಳ್ಳಿ ಹಾಕಿದೆ ಚುನಾವಣಾ ಆಯೊಗ. ತಿರುಪತಿ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಜನಸೇನಾ, ಬಿಜೆಪಿ ಸಹಯೋಗದೊಂದಿಗೆ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ. ತಿರುಪತಿಯಲ್ಲಿ ಪವನ್ ಕಲ್ಯಾಣ್ ಪ್ರಚಾರ ಸಹ ಮಾಡಿದ್ದರು.

    English summary
    Complaint given to election commission against Pawan Kalyan's Vakeel Saab movie.
    Friday, April 9, 2021, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X