For Quick Alerts
  ALLOW NOTIFICATIONS  
  For Daily Alerts

  'ವಕೀಲ್ ಸಾಬ್' ಸಿನಿಮಾ ವಿರುದ್ಧ ದೂರು ದಾಖಲು

  |

  'ವಕೀಲ್ ಸಾಬ್' ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ನ್ಯಾಯಾಲಯದಲ್ಲಿ ಹೋರಾಡಿ ಹಲವರಿಗೆ ನ್ಯಾಯ ದೊರಕಿಸಿಕೊಡುತ್ತಾರೆ. ಆದರೆ ಈಗ ಆ 'ವಕೀಲ್ ಸಾಬ್' ಸಿನಿಮಾ ವಿರುದ್ಧವೇ ದೂರು ದಾಖಲಾಗಿದೆ.

  ಹೌದು, 'ವಕೀಲ್ ಸಾಬ್' ಸಿನಿಮಾ ವಿರುದ್ಧ ಸುಧಾಕರ್ ಹೆಸರಿನ ಉದ್ಯಮಿಯೊಬ್ಬರು ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  'ವಕೀಲ್ ಸಾಬ್‌' ಸಿನಿಮಾದ ದೃಶ್ಯವೊಂದರಲ್ಲಿ ಉದ್ಯಮಿ ಸುಧಾಕರ್ ಅವರ ಮೊಬೈಲ್ ಸಂಖ್ಯೆಯನ್ನು ಬಳಸಲಾಗಿದೆ. ಇದರಿಂದಾಗಿ ಸುಧಾಕರ್ ಬಹಳ ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರ ಮೊಬೈಲ್‌ಗೆ ಬಿಡುವಿಲ್ಲದೆ ಕರೆಗಳು ಕರೆ ಬರುತ್ತಿದ್ದು, ಕರೆ ಮಾಡಿದವರು ಕೆಟ್ಟದಾಗಿ ಬೈಯುತ್ತಿದ್ದಾರಂತೆ. ಹೀಗಾಗಿ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ಸಿನಿಮಾ ವಿರುದ್ಧ ದೂರು ದಾಖಲಿಸಿದ್ದಾರೆ ಸುಧಾಕರ್.

  ಖಾಸಗಿತನದ ಹಕ್ಕು ಉಲ್ಲಂಘನೆ ಅಡಿಯಲ್ಲಿ ಪ್ರಕರಣ ಸಹ ದಾಖಲಿಸಿಕೊಂಡಿರುವ ಪೊಲೀಸರು 'ವಕೀಲ್ ಸಾಬ್' ಸಿನಿಮಾ ನಿರ್ಮಾಪಕ ದಿಲ್ ರಾಜು, ಸಿರಿಶ್ ಹಾಗೂ ನಿರ್ದೇಶಕ ವೇಣು ಶ್ರೀರಾಮ್‌ಗೆ ನೊಟೀಸ್ ಕಳುಹಿಸಿದ್ದಾರೆ.

  ಸಿನಿಮಾದಲ್ಲಿ ಖಳಪಾತ್ರಧಾರಿಯೊಬ್ಬ ನಾಯಕಿಯ ತೇಜೋವಧೆ ಮಾಡಲು ಆಕೆಯ ಮೊಬೈಲ್ ನಂಬರ್ ಅನ್ನು ವೇಶ್ಯೆಯ ನಂಬರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಾನೆ. ಆ ನಂಬರ್ ಮೂಲದಲ್ಲಿ ಉದ್ಯಮಿ ಸುಧಾಕರ್ ಮೊಬೈಲ್ ನಂಬರ್ ಆಗಿದೆ.

  ಪ್ರತಿದಿನ ಸಾವಿರಾರು ಮಂದಿ ಸುಧಾಕರ್ ಸಂಖ್ಯೆಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡುವುದು, ಬೈಯ್ಯುವುದು ಮಾಡುತ್ತಿದ್ದಾರಂತೆ. 'ನನ್ನ ಅನುಮತಿ ಇಲ್ಲದೆ ನನ್ನ ಮೊಬೈಲ್ ನಂಬರ್ ಅನ್ನು ಸಿನಿಮಾದಲ್ಲಿ ಬಳಸಿ ನನ್ನ ಖಾಸಗಿತನವನ್ನು ಹಾಳು ಮಾಡಿದ್ದಾರೆ' ಎಂದು ಸುಧಾಕರ್ ಆರೋಪಿಸಿದ್ದಾರೆ.

  Corona ರೋಗಿಗಳಿಗೆ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ Kichcha Sudeep ಚಾರಿಟೇಬಲ್ ಸೊಸೈಟಿ

  ಏಪ್ರಿಲ್ 9 ರಂದು 'ವಕೀಲ್ ಸಾಬ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾವು ಚಿತ್ರಮಂದಿರದಲ್ಲಿ ಅದ್ಭುತ ಪ್ರದರ್ಶನ ನೀಡಿ ಬಳಿಕ ಈಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

  English summary
  Complaint lodged against Pawan Kalyan's Vakeel Saab movie by a man called Sudhakar in Panjagutta police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X