For Quick Alerts
  ALLOW NOTIFICATIONS  
  For Daily Alerts

  ನರೇಶ್- ಪವಿತ್ರಾ ಲೋಕೇಶ್ ವಿವಾದ: ತೆಲುಗು ನಟನ ಮೂವರು ಪತ್ನಿಯರ ಹಿನ್ನೆಲೆ ಏನು?

  |

  ಕಳೆದ ಮೂರು ವಾರಗಳಿಂದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅಫೇರ್ ಹಾಟ್ ಟಾಪಿಕ್ ಆಗಿದೆ. ಆರಂಭದಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಬಳಿಕ ಮದುವೆ ಆಗೇ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈಗ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.

  ಮೂರನೇ ಪತ್ನಿ ರಮ್ಯಾ ರಘುಪತಿ ಮೈಸೂರಿನ ಹೋಟೆಲ್‌ನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರನ್ನು ರೆಡ್ ಹ್ಯಾಂಡ್‌ ಆಗಿ ಹಿಡಿದಿದ್ದರು. ಈ ವೇಳೆ ಹೋಟೆಲ್‌ನಲ್ಲಿಯೇ ರಮ್ಯಾ ರಂಪಾಟ ಮಾಡಿದ್ದರು.

  ಪವಿತ್ರಾ ಲೋಕೇಶ್ ಮತ್ತು ನರೇಶ್ ಮೇಲೆ ಕಿಡಿಕಾರಿದ ತೆಲುಗು ನಟಿ ಶ್ರೀರೆಡ್ಡಿ!ಪವಿತ್ರಾ ಲೋಕೇಶ್ ಮತ್ತು ನರೇಶ್ ಮೇಲೆ ಕಿಡಿಕಾರಿದ ತೆಲುಗು ನಟಿ ಶ್ರೀರೆಡ್ಡಿ!

  ಈ ವೇಳೆ ನರೇಶ್‌ ಮೊದಲ ಇಬ್ಬರು ಪತ್ನಿಯರು? ಅವರ ಹಿನ್ನೆಲೆ ಏನು? ಎಂಬ ಚರ್ಚೆಯೂ ನಡೆಯುತ್ತಿದೆ. ಟಾಲಿವುಡ್‌ನಲ್ಲಿ ತೆಲುಗು ನಟ ನರೇಶ್ ಮೂವರು ಪತ್ನಿಯ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ದರೆ, ನರೇಶ್ ಮೂವರು ಪತ್ನಿಯರು ಯಾರು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಮೊದಲ ಪತ್ನಿ ಯಾರು?

  ಮೊದಲ ಪತ್ನಿ ಯಾರು?

  ನರೇಶ್ 1972 ರಲ್ಲಿ 'ಪಂಡಂತಿ ಕಾಪುರಂ' ಸಿನಿಮಾ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 1982ರಲ್ಲಿ ಸುಮಾರು 10 ವರ್ಷಗಳ ಬಳಿಕ ವಿಜಯ ನಿರ್ಮಲಾ ಅವರೇ 'ಪ್ರೇಮ ಸಂಕೆಲ್ಲ' ಸಿನಿಮಾವನ್ನು ನಿರ್ದೇಶಿಸಿದ್ದರು. ಚಿತ್ರರಂಗದಲ್ಲಿ ನಾಯಕನಾಗಿ ಪರಿಚಯವಾದ ಕೂಡಲೇ ಡ್ಯಾನ್ಸ್ ಮಾಸ್ಟರ್ ಮಗಳೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ನವೀನ್ ವಿಜಯ್ ಕೃಷ್ಣ ಎಂಬ ಪುತ್ರ ಇದ್ದಾನೆ. ಮಗ ಹುಟ್ಟಿದ ಸಮಯದಲ್ಲೇ ನರೇಶ್ ಮೊದಲ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಕಾರಣಕ್ಕೆ ನರೇಶ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು ಎಂದು ವರದಿಯಾಗಿದೆ.

  ಬೆಸ್ಟ್ ಫ್ರೆಂಡ್ಸ್ ಅಂದ್ಕೊಂಡು ಒಂದೇ ರೂಮಿನಲ್ಲಿದ್ರು: ನನ್ನ ಶೀಲದ ಬಗ್ಗೆ ಮಾತಾಡೋಕೆ ಇವರು ಯಾರು?ಬೆಸ್ಟ್ ಫ್ರೆಂಡ್ಸ್ ಅಂದ್ಕೊಂಡು ಒಂದೇ ರೂಮಿನಲ್ಲಿದ್ರು: ನನ್ನ ಶೀಲದ ಬಗ್ಗೆ ಮಾತಾಡೋಕೆ ಇವರು ಯಾರು?

  ಎರಡನೇ ಪತ್ನಿ ಯಾರು?

  ಎರಡನೇ ಪತ್ನಿ ಯಾರು?

  ಮೊದಲನೇ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ನರೇಶ್ ತೆಲುಗಿನ ಖ್ಯಾತ ಲೇಖಕ ದೇವುಲಪಲ್ಲಿ ಕೃಷ್ಣ ಶಾಸ್ತ್ರಿ ಅವರ ಮೊಮ್ಮಗಳು ರೇಖಾ ಸುಪ್ರಿಯಾರನ್ನು ಎರಡನೇ ವಿವಾಹವಾದರು. ಗುರು ಹಿರಿಯರು ಒಪ್ಪಿಗೆ ಮೇರೆಗೆ 2ನೇ ಮದುವೆ ಆಗಿತ್ತು. ಇವರಿಗೂ ಒಬ್ಬ ಮಗ ಹುಟ್ಟಿದ. ಆದರೆ ಈ ಮದುವೆ ಕೂಡ ಹೆಚ್ಚು ಉಳಿಯಲಿಲ್ಲ. ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ಬೇರೆ ಬೇರೆಯಾಗಿದ್ದರೂ, ಇನ್ನೂ ಎನ್‌ಜಿಒಗಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ.

  3ನೇ ಹೆಂಡತಿ ಯಾರು?

  3ನೇ ಹೆಂಡತಿ ಯಾರು?

  ನರೇಶ್ ತಾಯಿ ವಿಜಯ ನಿರ್ಮಲಾ ಅವ್ರೊಂದಿಗೆ ಕರ್ನಾಟಕ ಮೂಲದ ರಮ್ಯಾ ರಘುಪತಿ ಸಹಾಯರಾಗಿ ಸೇರಿಕೊಂಡಿದ್ದರು. ಈ ವೇಳೆ ನರೇಶ್‌ ಹಾಗೂ ರಮ್ಯಾ ರಘುಪತಿಯವರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ. ನರೇಶ್‌ಗೆ ಆಗ ಸುಮಾರು 50 ವರ್ಷ. ರಮ್ಯಾಗೆ 30 ವರ್ಷದ ಆಸು-ಪಾಸಿನಲ್ಲಿದ್ದರು. ರಮ್ಯಾ ಮನೆಯಲ್ಲಿ ವಿರೋಧವಿದ್ದರೂ, ನರೇಶ್ ಅವರನ್ನು ವಿವಾಹವಾದರು ಎನ್ನಲಾಗಿತ್ತು. ಇವರಿಗೂ ಒಬ್ಬ ಮಗನಿದ್ದಾನೆ.

  HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?

  ಈಗ ಏನಿದು ವಿವಾದ ?

  ಈಗ ಏನಿದು ವಿವಾದ ?

  ನರೇಶ್ ಹಾಗೂ ರಮ್ಯಾ ಇಬ್ಬರೂ ಎರಡು ವರ್ಷಕ್ಕಿಂತ ಹೆಚ್ಚು ಕಾಲ ನೆಮ್ಮದಿಯಾಗಿ ಸಂಸಾರ ನಡೆಸಿಲ್ಲ ಎಂದು ವರದಿಯಾಗಿದೆ. ಇಬ್ಬರೂ ಬೇರೆ ಬೇರೆ ಜೀವನ ನಡೆಸುತ್ತಿದ್ದು, ಮಗನ ಲಾಲನೆ-ಪಾಲನೆಗೆ ರಮ್ಯಾ ಅವರಿಗೆ 70 ಸಾವಿರ ರೂ. ನೀಡುತ್ತಿದ್ದಾರೆ. ಆದರೆ, ಕೆಲವು ತಿಂಗಳ ಹಿಂದೆ ರಮ್ಯಾ ರಘುಪತಿ ಕೆಲವರಿಂದ ಹಣ ಪಡೆದು ವಂಚನೆ ಮಾಡಿದ್ದು, ಈ ವಿವಾದದ ಬಳಿಕೆ ನೋಟಿಸ್‌ ಕಳುಹಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಮ್ಯಾ ಈ ಆರೋಪವನ್ನು ಅಲ್ಲಗೆಳೆದಿದ್ದು, ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಸಂಬಂಧವನ್ನು ಬೀದಿಗೆ ತಂದಿದ್ದಾರೆ ಎನ್ನಲಾಗುತ್ತಿದೆ.

  English summary
  VK Naresh Pavithra Lokesh Affair: Everything You Need To Know About His 3 Marriages, Know More.
  Tuesday, July 5, 2022, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X