ರಶ್ಮಿಕಾ ಮಂದಣ್ಣ ಬೆನ್ನು ಬಿಡದ ಕಿರಾತಕರು ; ಮತ್ತೊಂದು ವಿಡಿಯೋ ವೈರಲ್...!

ಕಳೆದ ವರ್ಷದ ಅಂತ್ಯದಲ್ಲಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರ ಮುಖವನ್ನ ಮಾರ್ಫಿಂಗ್ ಮಾಡಿದ ನಕಲಿ ವಿಡಿಯೋ ಅದು. ಈಗ ಅಂಥಹದ್ದೇ ಒಂದು ವಿಡಿಯೋ ಮತ್ತೆ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರ ಅಸಂಖ್ಯಾತ ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ.

ಹೌದು. ಡೀಪ್ ಫೇಕ್ ತಂತ್ರಜ್ಞಾನವನ್ನ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಸಾಕ್ಷಿಯಂತೆ ಇರುವ ಈ ವಿಡಿಯೋದಲ್ಲಿ, ರಶ್ಮಿಕಾ ಅವರ ಮುಖವನ್ನ ಅಂಟಿಸಲಾಗಿದೆ. ಮೇಲ್ನೋಟಕ್ಕೆ ಇದು ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂಬ ಭಾವನೆ ಬರುತ್ತೆ ಕೂಡ. ಅಷ್ಟರ ಮಟ್ಟಿಗೆ ಕೃತಕ ಬುದ್ದಿಮತ್ತೆಯ ಬಳಕೆಯನ್ನ ಇಲ್ಲಿ ಮಾಡಲಾಗಿದೆ.

Concerns arise as a one more deepfake video featuring Rashmika Mandanna in a red bikini goes viral

ಇನ್ನೂ ಕೊಲಂಬಿಯಾದ ಸ್ಯಾಂಟ್ಯಾಂಡರ್ ಮೂಲದ ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಡೇನಿಯಲಾ ವಿಲ್ಲಾರ್ರಿಯಲ್ ಅವರಿಗೆ ಸೇರಿದ ಇನ್‌ಸ್ಟಾಗ್ರಾಮ್ ಖಾತೆಯಿಂದ ವೈರಲ್ ವೀಡಿಯೊವನ್ನು ಪತ್ತೆಹಚ್ಚಲಾಗಿದೆ.

ಏಪ್ರಿಲ್ 19, 2024 ರಂದು ಡೇನಿಯಲಾ ತಮ್ಮ ಬಿಕಿನಿ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಆ ನಂತರ ಆ ವಿಡಿಯೋ ಸೈಬರ್ ಕಿರಾತಕರ ಕಣ್ಣಿಗೆ ಬಿದ್ದಿದೆ. ಡೇನಿಯಲಾ ಅವರ ಮುಖಚಹರೆಯನ್ನ ರಶ್ಮಿಕಾ ಮಂದಣ್ಣ ಅವರ ಮುಖದ ಜೊತೆ ಬದಲಿಸಲಾಗಿದೆ. ಫೇಸ್‌ಬುಕ್ , ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಈ ನಕಲಿ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ .

23 ವರ್ಷದ ಯುವಕನನ್ನ ಬಂಧಿಸಿದ್ದ ಪೊಲೀಸರು..!

ಕಳೆದ ಬಾರಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ, ಆಂಧ್ರದ ಗುಂಟೂರಿನ ಏಮಾನಿ ನವೀನ್​ ನ ಪೊಲೀಸರು ಬಂಧಿಸಿದ್ದರು. ಅಚ್ಚರಿ ಏನೆಂದರೆ, ಬಂಧನಕ್ಕೊಳಾಗಿದ್ದ ಏಮಾನಿ ಕೂಡ ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ

Concerns arise as a one more deepfake video featuring Rashmika Mandanna in a red bikini goes viral

ಕಠಿಣ ಕ್ರಮಕ್ಕೂ ಹೆದರದ ಕಿಡಿಗೇಡಿಗಳು..!

ಡೀಪ್ ಫೇಕ್ ಎಂಬ ಡಿಜಿಟಲ್ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸುತ್ತಾನೇ ಬಂದಿದೆ. ಆದರೆ ಇದಕ್ಕೆ ಕಡಿವಾಣ ಮಾತ್ರ ಬೀಳುತ್ತಿಲ್ಲ.
ಕಿಡಿಗೇಡಿಗಳು ಹೆದರುತ್ತಿಲ್ಲ. ಇನ್ನೂ ಡಿಜಿಟಲ್ ಪ್ಲಾಟ್‌ ಫಾರ್ಮ್‌ ನಲ್ಲಿ ಸಂಬಂಧಪಟ್ಟವರು ರಿಪೋರ್ಟ್‌ ಮಾಡಿದರೆ ಅದನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬಹುದು. ಈ ನಿಯಮವನ್ನು ಸೋಶಿಯಲ್‌ ಮೀಡಿಯಾಗಳು ಕಟ್ಟನಿಟ್ಟಾಗಿ ಪಾಲಿಸುತ್ತಿಲ್ಲ. ಪರಿಣಾಮ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ.

ಡೀಪ್ ಫೇಕ್ ಎಂದರೇನು..?

ಡೀಪ್‌ ಫೇಕ್‌ ಟೆಕ್ನಾಲಜಿ ಕೃತಕ ಬುದ್ಧಿಮತ್ತೆಯ ಒಂದು ಭಾಗ. ಅಲ್ಗಾರಿದಮ್‌ಗಳ ಮೂಲಕ ಇನ್ನೊಬ್ಬರ ಮುಖಭಾವಗಳನ್ನು ಆಳಪದರಗಳಲ್ಲಿ ವಿಶ್ಲೇಷಿಸಿ, ನಕಲಿ ರಚನೆಗಳನ್ನು ಇದು ಮುಂದಿಡುತ್ತದೆ. ವ್ಯಕ್ತಿಯ ಮೂಲ ಮುಖ ಮತ್ತು ಧ್ವನಿಯನ್ನು ಬದಲಿಸಿ, ನೈಜ ಎಂಬಂಥ ವಿಡಿಯೋ ಮತ್ತು ಆಡಿಯೋಗಳನ್ನು ರಚಿಸುವ ಸಾಮರ್ಥ್ಯ ಇದಕ್ಕಿದೆ. ಮನರಂಜನೆ ಮತ್ತು ವಿಡಂಬನಾತ್ಮಕ ವಿಷಯ ರಚನೆಗಳಿಗೆ ಹುಟ್ಟಿಕೊಂಡ ಡೀಪ್‌ ಫೇಕ್‌, ಈಗ ತಪ್ಪು ಮಾಹಿತಿ ರವಾನೆ, ಚಾರಿತ್ರ್ಯ ಹರಣ, ರಾಜಕೀಯ ಅಪಪ್ರಚಾರ, ಬ್ಲ್ಯಾಕ್‌ಮೇಲ್‌ ವಿಚಾರಗಳಿಗೆ ದುರ್ಬಳಕೆಯಾಗುತ್ತಿದೆ.

ಮಹಿಳೆಯರೇ ಟಾರ್ಗೆಟ್..!

ಡೀಪ್‌ ಫೇಕ್‌ಗಳನ್ನು ಹೆಚ್ಚಾಗಿ ಅಶ್ಲೀಲ ವಿಷಯವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಮಹಿಳೆಯರನ್ನು ಡಿಜಿಟಲ್ ಆಗಿ ವಿವಸ್ತ್ರಗೊಳಿಸಿ ಕಾಣಿಸುವ ಫೋಟೋ ಅಪ್ಲಿಕೇಶನ್‌ಗಳು ಯುರೋಪ್ ಮತ್ತು ಯುಎಸ್ ಸೇರಿದಂತೆ ಪ್ರಪಂಚದಾದ್ಯಂತ "ಸೆಕ್ಸ್‌ಟಾರ್ಶನ್" ರಾಕೆಟ್‌ಗಳನ್ನು ಉತ್ತೇಜಿಸಿವೆ. ಈ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರು ಇತರರನ್ನು ಡಿಜಿಟಲ್‌ ಆಗಿ ನಗ್ನಗೊಳಿಸುವುದು, ಅಥವಾ ಲೈಂಗಿಕವಾಗಿ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನುಸುವುದು ಸಾಧ್ಯವಿದೆ. ಮಹಿಳೆಯರೇ ಈ ಆಧುನಿಕ ಕುಖ್ಯಾತ AI ಪರಿಕರಗಳು ಮತ್ತು ಅಪ್ಲಿಕೇಶನ್‌ಗಳ ಗುರಿಯಾಗಿದ್ದಾರೆ.

More from Filmibeat

English summary
Another Rashmika Mandanna deepfake video goes viral, prompting concerns about the ineffectiveness of previous arrests.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X