For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ ಆಡಿಯೋ ವೈರಲ್ ಆಗುತ್ತಿದ್ದಂತೆ ಹೊಸ ಐಡಿ ಕೊಟ್ಟ ಕಾಂಗ್ರೆಸ್ ಪಕ್ಷ!

  |

  ಟಾಲಿವುಡ್‌ ನಟರಿಗೂ ರಾಜಕೀಯಕ್ಕೂ ಬಿಡಲಾರದ ನಂಟು. ಸಿನಿಮಾ ತಾರೆಯರು ರಾಜಕೀಯ ಪ್ರವೇಶ ಮಾಡಿ ಗೆದ್ದ ಉದಾಹರಣೆಗಳಿಗೇನು ಕಮ್ಮಿಯಿಲ್ಲ. ಆದರೆ, ಮೆಗಾಸ್ಟಾರ್ ಚಿರಂಜೀವಿ ವಿಚಾರದಲ್ಲಿ ಈ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿತ್ತು.

  ಮೆಗಾಸ್ಟಾರ್ ಚಿರಂಜೀವಿ 'ಪ್ರಜಾ ರಾಜ್ಯಂ' ಅನ್ನೋ ರಾಜಕೀಯ ಪಕ್ಷ ಕಟ್ಟಿ ಕೈ ಸುಟ್ಟುಕೊಂಡಿದ್ದರು. ತಮ್ಮ ಪಕ್ಷವನ್ನು ಗೆಲ್ಲಿಸಿ ಜನಸೇವೆ ಮಾಡುವ ಆಸೆ ಈಡೇರಲಿಲ್ಲ. ಹೀಗಾಗಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಇದರೊಂದಿಗೆ ಕೆಲವು ವರ್ಷಗಳಿಂದ ಚಿರಂಜೀವಿ ರಾಜಕೀಯದಿಂದಲೂ ದೂರವಿದ್ದರು.

  'ತಾರ್ ಮಾರ್ ಟಕ್ಕರ್ ಮಾರ್' ಎಂದು ಕುಣಿದ ಚಿರು- ಸಲ್ಲು: ಶ್ರೇಯಾ ಘೋಷಾಲ್‌ಗೆ ಜೈಕಾರ!'ತಾರ್ ಮಾರ್ ಟಕ್ಕರ್ ಮಾರ್' ಎಂದು ಕುಣಿದ ಚಿರು- ಸಲ್ಲು: ಶ್ರೇಯಾ ಘೋಷಾಲ್‌ಗೆ ಜೈಕಾರ!

  ಕೆಲವು ದಿನಗಳ ಹಿಂದಷ್ಟೇ ಮೆಗಾಸ್ಟಾರ್ ಆಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಆಡಿಯೋ ಸಿನಿಮಾಗೆ ಸಂಬಂಧ ಪಟ್ಟಿದ್ದಾ? ಇಲ್ಲಾ ರಾಜಕೀಯಕ್ಕೆ ಸಂಬಂಧಿಸಿದ್ದಾ ಅನ್ನೋ ಅನುಮಾನ ಇನ್ನೂ ಅಭಿಮಾನಿಗಳಿಂದ ದೂರ ಆಗಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಚಿರಂಜೀವಿಗೆ ಹೊಸ ಐಡಿ ಕಾರ್ಡ್ ಅನ್ನು ನೀಡಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಅಸಲಿಗೆ ವಿಷಯ ಏನು? ತಿಳಿಯಲು ಮುಂದೆ ಓದಿ.

  ಚಿರಂಜೀವಿ ಆಡಿಯೋದಲ್ಲೇನಿದೆ?

  ಚಿರಂಜೀವಿ ಆಡಿಯೋದಲ್ಲೇನಿದೆ?

  ಕೆಲವೇ ದಿನಗಳ ಹಿಂದೆ ಚಿರಂಜೀವಿ ಹೊರಬಿಟ್ಟ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. "ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ ಹೊರತು ರಾಜಕೀಯ ನನ್ನಿಂದ ದೂರಾಗಿಲ್ಲ." ಎಂಬ ಆಡಿಯೋವನ್ನು ಹಂಚಿಕೊಂಡಿದ್ದರು. ಚಿರಂಜೀವಿ ಹೇಳಿದ ಈ ಡೈಲಾಗ್ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಅದೇನು ಅನಿಸಿತ್ತೋ ದಿಢೀರನೇ ಎಚ್ಚೆತ್ತುಕೊಂಡು ಹೊಸ ಐಡಿಯನ್ನು ರಿಲೀಸ್ ಮಾಡಿದ್ದಾರೆ.

  ಹೇಳಿದ್ದ ದಿನಕ್ಕಿಂತ ಒಂದು ವಾರ ತಡವಾಗಿ ಚಿರು-ಸಲ್ಲು ಹಾಡು ಬಿಡುಗಡೆ; ನಂಬಿಕೆ ಇಲ್ಲ ಎಂದ ಫ್ಯಾನ್ಸ್!ಹೇಳಿದ್ದ ದಿನಕ್ಕಿಂತ ಒಂದು ವಾರ ತಡವಾಗಿ ಚಿರು-ಸಲ್ಲು ಹಾಡು ಬಿಡುಗಡೆ; ನಂಬಿಕೆ ಇಲ್ಲ ಎಂದ ಫ್ಯಾನ್ಸ್!

  ಫ್ರೆಶ್ ಐಡಿ ರಿಲೀಸ್

  ಫ್ರೆಶ್ ಐಡಿ ರಿಲೀಸ್

  ಚಿರಂಜೀವಿ ಆಡಿಯೋ ರಿಲೀಸ್ ಮಾಡುತ್ತಿದ್ದಂತೆ ಇದು 'ಗಾಡ್ ಫಾದರ್' ಸಿನಿಮಾದ ಡೈಲಾಗ್ ಇರಬಹುದು ಎಂದು ಅಂದಾಜಿಸಲಾಗಿತ್ತು. ಮೆಗಾಸ್ಟಾರ್‌ಗೆ ರಾಜಕೀಯದಲ್ಲಿ ಮುಂದುವರೆಯುವ ಆಸೆ ಇಲ್ಲ ಎಂದೇ ಹೇಳಾಗುತ್ತಿತ್ತು. ಆದರೆ, ದಿಢೀರನೇ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಫ್ರೆಶ್ ಐಡಿ ಕಾರ್ಡ್‌ ಅನ್ನು ಚಿರಂಜೀವಿಗೆ ನೀಡಿದೆ. ಇದು ಮೆಗಾಸ್ಟಾರ್ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದವರಿಗೆ ತಿರುಗೇಟು ನೀಡಿದಂತಾಗಿದೆ. ಅಂದ್ಹಾಗೆ ಈ ಹೊಸ ಐಡಿಯಲ್ಲಿ ಚಿರಂಜೀವಿಗೆ ಪಿಸಿಸಿ ಡೆಲಿಗೇಟ್ ಅಂತ ಹೇಳಿದೆ.

  ಚಿರುಗೆ ಹೊಸ ಪದವಿ?

  ಚಿರುಗೆ ಹೊಸ ಪದವಿ?

  ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುವುದಕ್ಕೆ ಸಜ್ಜಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಕೆಲವ ಅರೇಂಜ್ಮೆಂಟ್‌ಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿ ಕ್ಷೇತ್ರಕ್ಕೂ ಕಾಂಗ್ರೆಸ್ ಇಬ್ಬರು ಇಬ್ಬರು ಗಣ್ಯರನ್ನು ನೇಮಿಸಿದೆ. ಅದರಲ್ಲಿ ಚಿರಂಜೀವಿಯನ್ನು ಕೊವ್ವೂರು ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿದೆ. ಈ ಮೂಲಕ ಮೆಗಾಸ್ಟಾರ್ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ಆಂಧ್ರ ಕಾಂಗ್ರೆಸ್ ಚಿರಂಜೀವಿಗೆ ಹೊಸ ಜವಾಬ್ದಾರಿಯನ್ನು ನೀಡಿದೆ ಎನ್ನಲಾಗಿದೆ.

  ಅಧ್ಯಕ್ಷ ಚುನಾವಣೆಯಲ್ಲಿ ಭಾಗಿಯಾಗುತ್ತಾರಾ?

  ಅಧ್ಯಕ್ಷ ಚುನಾವಣೆಯಲ್ಲಿ ಭಾಗಿಯಾಗುತ್ತಾರಾ?

  ಮೆಗಾಸ್ಟಾರ್ ಚಿರಂಜೀವಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಭಾಗಿಯಾಗುತ್ತಾರಾ ಅನ್ನೋ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಕೆಲವರು ಮತ್ತೆ ಮೆಗಾಸ್ಟಾರ್ ರಾಜಕೀಯದಲ್ಲಿ ಸಕ್ರೀಯರಾಗಬೇಕು ಎಂದು ಬಯಸಿದ್ದಾರೆ. ಆದರೆ, ಚಿರಂಜೀವಿ ರಾಜಕೀಯದಿಂದ ದೂರ ಉಳಿದಿದ್ದು, ಸಿನಿಮಾಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಸದ್ಯ ಚಿರು ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್‌ನಲ್ಲಿ ಗಾಡ್‌ ಫಾದರ್ ಬಿಡುಗಡೆಗೆ ರೆಡಿಯಾಗಿದೆ. ಆದರೂ, ಕಾಂಗ್ರೆಸ್ ಪಕ್ಷದ ಈ ಫ್ರೆಶ್ ಐಡಿ ಚಿರು ರಾಜಕೀಯ ರೀ-ಎಂಟ್ರಿಗೆ ನಾಂದಿ ಹಾಡುತ್ತಾ ಅನ್ನೋ ಪ್ರಶ್ನೆಯಂತೂ ಎದ್ದಿದೆ.

  English summary
  Congress Issues New ID Card to Megastar Chiranjeevi After His Audio Goes Viral, Know More.
  Wednesday, September 21, 2022, 22:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X