ಬಿಗ್ ಬಾಸ್ ಮನೆಯಲ್ಲಿ ಸ್ಟಾರ್‌ಗಳ ಜಾತಕ ಬಿಚ್ಚಿಡ್ತಾರಾ ವೇಣು ಸ್ವಾಮಿ..?
ವೇಣು ಸ್ವಾಮಿ ಗೊತ್ತಲ್ಲವಾ..? ಪಕ್ಕದ ಮನೆ ಆಂಧ್ರದ ಸ್ಟಾರ್ ಜ್ಯೋತಿಷಿ. ಕಲಾವಿದರಿಂದ ಹಿಡಿದು ರಾಜಕಾರಣಿಗಳವರೆಗೆ ಮುಂದಿನ ಜೀವನ ಹೀಗೀಗೇ ಅಂತ ನಿಖರವಾಗಿ ನಾನು ಹೇಳಬಲ್ಲೆ ಎಂದು ಹೇಳಿಕೊಳ್ಳುವ ವೇಣು ಸ್ವಾಮಿ ಈಗ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಆಂಧ್ರದಲ್ಲಿ ಗುಲ್ಲಾಗಿದೆ.
ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ಈ ಕಾರ್ಯಕ್ರಮ ಇನ್ನೇನು ಕೆಲವೇ ದಿನದಲ್ಲಿ ಆರಂಭವಾಗಲಿದೆ. ಹೀಗಿರುವಾಗ ಮನೆಗೆ ಈ ಬಾರಿ ಯಾರೆಲ್ಲ ಬರಲಿದ್ದಾರೆ ಅನ್ನುವ ಕುತೂಹಲ ಗರಿಗೇದರಿದೆ. ಇನ್ನೂ.. ಕಳೆದ ಬಾರಿ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಗೆದ್ದಿದ್ದರು. ಗೆದ್ದ ನಂತರ ಪೊಲೀಸರ ಆತಿಥ್ಯವನ್ನೂ ಸ್ವೀಕರಿಸಿದ್ದರು. ಈ ಕಾರಣಕ್ಕೆ.. ಈ ಸಲದ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಸದ್ದು ಮಾಡುತ್ತಿದೆ. ಇದರ ನಡುವೆ ವೇಣು ಸ್ವಾಮಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಸುದ್ದಿ, ವ್ಯಾಪಕವಾದ ಚರ್ಚೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ .. ವೇಣು ಸ್ವಾಮಿ ಹೇಳಿ ಕೇಳಿ ಸ್ಟಾರ್ ಜ್ಯೋತಿಷಿ. ಇಂಥ ಜ್ಯೋತಿಷಿ ಬಿಗ್ ಬಾಸ್ ಮನೆಗೆ ತೆರಳಿದರೆ ದಿನ ನಿತ್ಯ ಪಂಚಾಂಗ ಪುಸ್ತಕ ತೆರೆದು ಕೂರುವುದರಲ್ಲಿ ಅನುಮಾನ ಇಲ್ಲ. ಇನ್ನೂ ಸಮಂತಾ ಅವರಿಂದ ಹಿಡಿದು ಪ್ರಭಾಸ್‌ವರೆಗೆ ಭವಿಷ್ಯ ಹೇಳಿರುವ ಹೆಗ್ಗಳಿಕೆ ಇವರದ್ದು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ತಾರೆಯರ ಕೆಲ ವಿಚಾರಗಳನ್ನೂ ವೇಣು ಸ್ವಾಮಿ ಬಯಲು ಮಾಡಿದರು ಮಾಡಬಹುದು.

ಅಂದ್ಹಾಗೇ ಸಮಂತಾ ಮತ್ತು ನಾಗಚೈತನ್ಯ ದೂರವಾಗುವುದು ಖಚಿತ ಎನ್ನುವ ಭವಿಷ್ಯವನ್ನೂ ಹೇಳಿದ್ದು ಇದೇ ವೇಣು ಸ್ವಾಮಿ. ಇಷ್ಟೇ ಯಾಕೆ.. ರಕ್ಷಿತ್ ಶೆಟ್ಟಿ ಅವರಿಂದ ದೂರವಾಗುವಂತೆ ರಶ್ಮಿಕಾಗೆ ಸಲಹೆಯನ್ನೂ ನೀಡಿ ರಶ್ಮಿಕಾ ಅವರ ಗಜಕೇಸರಿ ಯೋಗಕ್ಕೆ ಕಾರಣವಾದವರು ಕೂಡ ಇವರೇ. ಇನ್ನೂ.. ಮೊನ್ನೆಯಷ್ಟೇ ನಿಶ್ವಿಕಾ ನಾಯ್ಡು ಇದೇ ವೇಣು ಸ್ವಾಮಿ ಅವರ ಆಶೀರ್ವಾದ ಪಡೆದು ವಿಶೇಷ ಪೂಜೆಯನ್ನೂ ಮಾಡಿಸಿದ್ದರು. ಇನ್ನೂ.. ತಮ್ಮ ಭವಿಷ್ಯ ಯಾವತ್ತು ಸುಳ್ಳಾಗಲ್ಲ ಎಂದು ವೇಣು ಸ್ವಾಮಿ ಹೇಳಿಕೊಂಡರು, ಜಗನ್ ವಿಚಾರದಲ್ಲಿ ಈ ವ್ಯಕ್ತಿ ನುಡಿದಿದ್ದ ಭವಿಷ್ಯ ಸುಳ್ಳಾಗಿದೆ. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಜಗನ್ ಮೋಹನ್ ರೆಡ್ಡಿ ಗೆದ್ದೇ ಗೆಲ್ಲುತ್ತಾರೆ, ಮತ್ತೆ ಸಿಎಂ ಆಗುತ್ತಾರೆ ಎಂದು ಭಾರಿ ಭವರಸೆಯ ಮಾತುಗಳನ್ನಾಡಿದ್ದರು ವೇಣು. ಆದರೆ ಅದು ನಿಜವಾಗಲಿಲ್ಲ.
ಇನ್ನೂ ಪ್ರಭಾಸ್ ಅವರ ಬೆಲೆ ಪಾತಾಳಕ್ಕೆ ಕುಸಿಯುತ್ತೆ ಎಂದು ಕೂಡ ಹಿಂದೆ ವೇಣು ಸ್ವಾಮಿ ಹೇಳಿದ್ದರು. ಒಂದು ಹಂತಕ್ಕೆ ವೇಣು ಸ್ವಾಮಿ ಹೇಳಿದಂತೆಯೇ ಒಂದಾದ ಮೇಲೊಂದು ಸೋಲುಗಳನ್ನು ಪ್ರಭಾಸ್ ನೋಡಿದರು. ಆದರೆ ಈಗ ಕಲ್ಕಿ ಮೂಲಕ ಪ್ರಭಾಸ್ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಉಳಿದಂತೆ ನಯನತಾರಾ ದಾಂಪತ್ಯದಲ್ಲಿ ಬಿರುಕು ಮೂಡಲಿದೆ ಎಂದು ಕೂಡ ಹೇಳಿರುವ ವೇಣು ಸ್ವಾಮಿ ಪ್ರಭಾಸ್ ಗೆ ಮದ್ವೆ ಯೋಗ ಇಲ್ಲ ಎಂದಿದ್ಧಾರೆ. ಜೂ ಎನ್‌ಟಿಆರ್ ಆಂಧ್ರ ಪ್ರದೇಶದ ಸಿಎಂ ಆಗ್ತಾರೆ, ಮೂರನೇ ಹೆಂಡತಿಗೂ ಪವನ್ ಕಲ್ಯಾಣ್ ವಿಚ್ಛೇದನ ಕೊಡ್ತಾರೆ.. ಎಂಬ ಭವಿಷ್ಯವನ್ನೂ ಹೇಳಿದ್ದಾರೆ.

ಇನ್ನೂ ಬಿಗ್ ಬಾಸ್ ತೆಲುಗು -8 ನಲ್ಲಿ ಸ್ಪರ್ಧಿಯನ್ನಾಗಿ ಭಾಗಿಯಾಗಲು ವೇಣುಸ್ವಾಮಿ ಅವರಿಗೆ ಆಫರ್ ನೀಡಲಾಗಿದ್ದು, ಇದಕ್ಕೆ ವೇಣುಸ್ವಾಮಿ ಆಯೋಜಕರಿಂದ ಭಾರೀ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಆಯೋಜಕರು ಇದಕ್ಕೆ ಒಪ್ಪಿದರೆ ಇದುವರೆಗೆ ಯಾರೂ ಪಡೆಯದೆ ಇರುವಷ್ಟು ದೊಡ್ಡ ಸಂಭಾವನೆಯನ್ನು ವೇಣುಸ್ವಾಮಿ ಪಡೆಯಲಿದ್ದಾರೆ ಎಂದು ʼಹಿಂದೂಸ್ತಾನ್ ಟೈಮ್ಸ್ ತೆಲುಗುʼ ದಲ್ಲಿ ಉಲ್ಲೇಖವಾಗಿದೆ.
ವೇಣು ಸ್ವಾಮಿ ಅವರನ್ನು ಹೊರತು ಪಡಿಸಿದರೆ ಖ್ಯಾತ ಯೂಟ್ಯೂಬರ್ ಬಾಂಚಿಕ್ ಬಬ್ಲು,ನಟ ರಾಜ್ ತರುಣ್, ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ನಟಿ ಹೇಮಾ ,ರಸ್ತೆಬದಿ ಹೊಟೇಲ್ ಹೊಂದಿರುವ ಜನಪ್ರಿಯ ಕುಮಾರಿ ಆಂಟಿ ಸೇರಿದಂತೆ ಹಲವರು ಹೆಸರು ಸ್ಪರ್ಧಿಗಳ ಲಿಸ್ಟ್ ನಲ್ಲಿ ಕೇಳಿ ಬರುತ್ತಿದೆ. 2024ರ ಸೆಪ್ಟೆಂಬರ್‌ನಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 8 ಆರಂಭವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.


Click it and Unblock the Notifications











