For Quick Alerts
  ALLOW NOTIFICATIONS  
  For Daily Alerts

  'ಇಷ್ಟೊಂದು ಹೈಪ್ ಬೇಕಾ'? 'ಲೈಗರ್' ಸಿನಿಮಾ ನೋಡಿ ಶ್ರೀರೆಡ್ಡಿ ಗರಂ!

  |

  ಕಳೆದೊಂದು ತಿಂಗಳಿನಿಂದ 'ಲೈಗರ್' ಸಿನಿಮಾದ್ದೇ ಸದ್ದು. ಟಾಲಿವುಡ್‌ನ ಡೇರಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡುತ್ತೆ ಅಂತಲೇ ಭಾವಿಸಲಾಗಿತ್ತು. ಅದರಲ್ಲೂ ಪುರಿ ಜಗನ್ನಾಥ್ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಹೀಗಾಗಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತೆ ಅನ್ನೋ ನಿರೀಕ್ಷೆ ಇತ್ತು.

  'ಲೈಗರ್' ಮೂವಿಯನ್ನು ಕರಣ್‌ ಜೋಹರ್ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಜಗನ್ನಾಥ್ ಪುರಿ ಕನೆಕ್ಟ್ ಸಂಸ್ಥೆ ಜಂಟಿಯಾಗಿ ನಿರ್ಮಿಸಿದೆ. ಪುರಿ ಜಗನ್ನಾಥ್ ಜೊತೆ ಚಾರ್ಮಿ ಕೂಡ ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ 'ಲೈಗರ್' ಒಂದು ಮಿಕ್ಸ್ ಮಾರ್ಷಲ್ ಆರ್ಟ್ಸ್ ಹಿನ್ನೆಲೆಯುಳ್ಳ ಸಿನಿಮಾ. ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗಬಹುದು.

  'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!

  'ಅರ್ಜುನ್ ರೆಡ್ಡಿ' ಮೂಲಕ ಟಾಲಿವುಡ್‌ನಲ್ಲಿ ವಿಶೇಷ ಇಮೇಜ್ ಗಳಿಸಿರೋ ವಿಜಯ್ ದೇವರಕೊಂಡ ಅಂದ್ಮೇಲೆ ಸಖತ್ ಪವರ್‌ಫುಲ್ ಆಗಿರುತ್ತೆ ಅನ್ನೋದು ನಂಬಿಕೆ. ನಿರೀಕ್ಷೆಯೊಂದಿಗೆ ಇವರಿಬ್ಬರ ಕಾಂಬಿನೇಷನ್‌ನ ಮೊದಲ ಚಿತ್ರ 'ಲೈಗರ್' ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆಗಸ್ಟ್ 25 ರಂದು ಈ ಸಿನಿಮಾ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಟಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ನಟಿ ಶ್ರೀರೆಡ್ಡಿ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

  ರಿಲೀಸ್‌ಗೂ 'ಲೈಗರ್‌'ಗೆ ಕ್ರೇಜ್

  ರಿಲೀಸ್‌ಗೂ 'ಲೈಗರ್‌'ಗೆ ಕ್ರೇಜ್

  'ಲೈಗರ್' ಬಿಡುಗಡೆಗೂ ಮುನ್ನ ದೇಶಾದ್ಯಂತ ಸಾಕಷ್ಟು ಕ್ರೇಜ್ ಹುಟ್ಟಾಕಿತ್ತು. ಸಿನಿಮಾ ಪೋಸ್ಟರ್‌ನಿಂದ ಹಿಡಿದು ಟೀಸರ್, ಹಾಡುಗಳು ಮತ್ತು ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ದೇಶದ ಉದ್ದಗಲಕ್ಕೂ ಅಲೆದಾಡಿದ್ದ ಚಿತ್ರತಂಡಕ್ಕೆ ಜನರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು.

  ನೋ ಕನ್ನಡ.. ನೋ ಬ್ಯುಸಿಸೆಸ್: ಕರ್ನಾಟಕದಲ್ಲೂ 'ಲೈಗರ್‌'ಗೆ ಬಾಯ್‌ಕಾಟ್ ಬಿಸಿ!ನೋ ಕನ್ನಡ.. ನೋ ಬ್ಯುಸಿಸೆಸ್: ಕರ್ನಾಟಕದಲ್ಲೂ 'ಲೈಗರ್‌'ಗೆ ಬಾಯ್‌ಕಾಟ್ ಬಿಸಿ!

  ಅಬ್ಬರಿಸಿದ್ದರು ವಿಜಯ್ ಫ್ಯಾನ್ಸ್

  ಅಬ್ಬರಿಸಿದ್ದರು ವಿಜಯ್ ಫ್ಯಾನ್ಸ್

  ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ವಿಸಿಟ್ ಹಾಕಿದ್ದಲ್ಲೆಲ್ಲಾ ಜನರು ಕಿಕ್ಕಿರಿದು ಸೇರಿದ್ದರು. ವಿಜಯ್ ಹಿಂದೆಂದೂ ಈ ಮಟ್ಟಿಗೆ ಕ್ರೌಡ್ ನೋಡೇ ಇರ್ಲಿಲ್ಲ. ಆಂಧ್ರ, ತೆಲಂಗಾಣ ಸೇರಿದಂತೆ ಕರ್ನಾಟಕದ ಬೆಂಗಳೂರಿನಲ್ಲಿ ಈ ಪ್ರೀ-ರಿಲೀಸ್ ಈವೆಂಟ್ ಸೂಪರ್‌ ಸಕ್ಸಸ್ ಆಗಿತ್ತು. ಇದೆಲ್ಲವನ್ನೂ ನೋಡಿ ಸಿನಿಮಾ ಹಿಟ್ ಆಗೋದು ಪಕ್ಕಾ ಎನ್ನಲಾಗಿತ್ತು.

  'ಲೈಗರ್‌'ಗೆ ಮಿಕ್ಸ್ ರೆಸ್ಪಾನ್ಸ್

  'ಲೈಗರ್‌'ಗೆ ಮಿಕ್ಸ್ ರೆಸ್ಪಾನ್ಸ್

  ಆಗಸ್ಟ್ 25ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ 'ಲೈಗರ್' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೋಡಿಯಾಗಿ ನಟಿಸಿದ ಸಿನಿಮಾಗೆ ಜನರು ಒಂದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಟಾಲಿವುಡ್‌ನ ವಿವಾದಾತ್ಮಕ ನಟಿ ಶ್ರೀ ರೆಡ್ಡಿ ಕೂಡ 'ಲೈಗರ್' ಕೂಡ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

  ಏನಕ್ಕೆ ಬೇಕು ಹೈಪ್?

  ಏನಕ್ಕೆ ಬೇಕು ಹೈಪ್?

  'ಲೈಗರ್' ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆ ನಂತರ ನಿಮಗೆ ಪ್ರಚಾರ ಬೇಕಿತ್ತಾ? ಕಂಟೆಂಟ್‌ ಚೆನ್ನಾಗಿದ್ದರೆ ಹೈಪ್ ಬೇಕಿಲ್ಲ. 'ಕಾರ್ತಿಕೇಯ 2' ಸಿನಿಮಾ 'ಲೈಗರ್‌'ಗಿಂತ ಅದ್ಭುತವಾಗಿದೆ. 'ಲೈಗರ್' ಚೆನ್ನಾಗಿಲ್ಲ. 'ಕಾರ್ತಿಕೇಯ 2' ಒಂದು ಪವಾಡ ಎಂದು ಶ್ರೀ ರೆಡ್ಡಿ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ.

  ಶ್ರೀರೆಡ್ಡಿ ವಿವಾದಗಳಿಂದಲೇ ಫೇಮಸ್

  ಶ್ರೀರೆಡ್ಡಿ ವಿವಾದಗಳಿಂದಲೇ ಫೇಮಸ್

  ಶ್ರೀರೆಡ್ಡಿ ಟಾಲಿವುಡ್‌ಗೆ ಹೊಸ ಪರಿಚಯವೇನಲ್ಲ. ಮೀಟೂ ಅಭಿಯಾನದ ವೇಳೆ ಕಾಸ್ಟಿಂಗ್ ಕೌಚ್ ಹಾಗೂ ತೆಲುಗು ಚಿತ್ರರಂಗದ ಹಲವು ಸೆಲೆಬ್ರಿಟಿಗಳ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಆ ವೇಳೆ ಇದು ಹಾಟ್ ಟಾಪಿಕ್ ಆಗಿತ್ತು. ಕಾಸ್ಟಿಂಗ್ ಕೌಚ್ ವಿಚಾರವಾಗಿ ವಿವಾದ ಎಬ್ಬಿಸಿದ್ದ ಶ್ರೀರೆಡ್ಡಿ ಹಲವು ವಿಷಯಗಳ ಬಗ್ಗೆ ಕಮೆಂಟ್ ಮಾಡಿದ್ದರು.

  English summary
  Controversy Queen Sri Reddy Comments About Puri Jagannadh And Liger Movie, Know More.
  Friday, August 26, 2022, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X