twitter
    For Quick Alerts
    ALLOW NOTIFICATIONS  
    For Daily Alerts

    ಮದ್ವೆ ಸಂಭ್ರಮದ ನಂತರ ಭಾರಿ ನಷ್ಟದ ಭೀತಿಯಲ್ಲಿ ದಿಲ್ ರಾಜು

    By ಜೇಮ್ಸ್ ಮಾರ್ಟಿನ್
    |

    ತೆಲುಗು ಚಿತ್ರರಂಗದ ಟಾಪ್ ನಿರ್ಮಾಪಕ ದಿಲ್ ರಾಜು ಇತ್ತೀಚಿಗೆ ಎರಡನೇ ಮದುವೆಯಾಗಿದ್ದು ಗೊತ್ತಿರಬೇಕಲ್ಲ. ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ವಿಧಿಸಿದ್ದರ ನಡುವೆಯೂ ಹಸೆಮಣೆ ಏರಿದ್ದರು. ಮೊದಲ ಪತ್ನಿ ಕಳೆದುಕೊಂಡು 3 ವರ್ಷಗಳ ನಂತರ ಮದುವೆಯಾದ ದಿಲ್ ರಾಜುಗೆ ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದರು. ಮದುವೆ ಸಂಭ್ರಮ, ಸಡಗರ ಎಲ್ಲವೂ ಮುಗಿದಿದ್ದು ಈಗ ದಿಲ್ ರಾಜುಗೆ ವ್ಯವಹಾರ ಚಿಂತೆ ಶುರುವಾಗಿದೆ.

    Recommended Video

    ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹವಾದ ನಟಿ ಮಯೂರಿ |Mayuri Kyatari weds Arun | FILMIBEAT KANNADA

    ದಿಲ್ ರಾಜು ಮೊದಲ ಪತ್ನಿ ಅನಿತಾ 2017ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅನಿತಾ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದರು. ಪತ್ನಿಯನ್ನು ಕಳೆದುಕೊಂಡು 3 ವರ್ಷದ ನಂತರ ಈಗ ಎರಡನೇ ಮದುವೆಯಾಗುವ ಮೂಲಕ ಸಂತೋಷದ ಜೀವನಕ್ಕೆ ಕಾಲಿಟ್ಟಿದ್ದರು. ದಿಲ್ ರಾಜು ಪುತ್ರಿ ಹನ್ಷಿತಾ ಮುಂದೆ ನಿಂತು ಅಪ್ಪನ ಮದುವೆ ಮಾಡಿಸಿದ್ದು ವಿಶೇಷವಾಗಿತ್ತು.

    2ನೇ ಮದುವೆಯಾದ ಖ್ಯಾತ ನಿರ್ಮಾಪಕ: ಅಪ್ಪನಿಗೆ ಮಗಳ ಹೃದಯಸ್ಪರ್ಶಿ ಸಂದೇಶ2ನೇ ಮದುವೆಯಾದ ಖ್ಯಾತ ನಿರ್ಮಾಪಕ: ಅಪ್ಪನಿಗೆ ಮಗಳ ಹೃದಯಸ್ಪರ್ಶಿ ಸಂದೇಶ

    ಮಗಳು ಹನ್ಷಿತಾ ಮದುವೆಯಾಗಿ ಗಂಡನ ಮನೆ ಸೇರಿದ್ದಳು, ಪತ್ನಿಯೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಳು, ಯಾರು ಇಲ್ಲದೆ ದಿಲ್ ರಾಜು ಒಬ್ಬೊಂಟಿಯಾಗಿ ಜೀವನ ನಡೆಸುತ್ತಿದ್ದರು. ಯಾರ ಬೆಂಬಲವಿಲ್ಲದೆ ಅಪ್ಪ ಪಡುತ್ತಿದ್ದ ಕಷ್ಟ ನೋಡಿ ಅಪ್ಪನಿಗೆ ಎರಡನೇ ಮದುವೆ ಮಾಡಿಸಿದ್ದಾಳೆ ಮಗಳು. ತೇಜಸ್ವಿನಿಯನ್ನು ಹುಡುಕಿ ಮಗಳೇ ಮುಂದೆ ನಿಂತು ದಿಲ್ ರಾಜುಗೆ ಮದುವೆ ಮಾಡಿಸಿದ್ದಾರೆ.

    ಕೋಟ್ಯಂತರ ರುಪಾಯಿ ನಷ್ಟದ ಸುಳಿವು

    ಕೋಟ್ಯಂತರ ರುಪಾಯಿ ನಷ್ಟದ ಸುಳಿವು

    ದಿಲ್ ರಾಜು ತೆಲುಗಿನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನು ನೀಡಿರುವ ದಿಲ್ ರಾಜು ಬಳಿ ಸಾಕಷ್ಟು ಸಿನಿಮಾಗಳಿವೆ. ಸದ್ಯ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾಗೆ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಇದು ಬಾಲಿವುಡ್ ನ ಪಿಂಕ್ ಸಿನಿಮಾದ ರಿಮೇಕ್ ಆಗಿದೆ ಎಂಬುದರ ಬಗ್ಗೆ ಈಗಾಗಲೆ ಫಿಲ್ಮಿಬೀಟ್ ನಲ್ಲಿ ಓದಿರುತ್ತೀರಿ. ಆದರೆ, ದಿಲ್ ರಾಜುಗೆ ಈಗ ಶೂಟಿಂಗ್ ಶುರುವಾಗದೆ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.

    ಚಿತ್ರೀಕರಣ ಹಂತದ ಪ್ರಾಜೆಕ್ಟಿಗೆ 150 ಕೋಟಿ ರು

    ಚಿತ್ರೀಕರಣ ಹಂತದ ಪ್ರಾಜೆಕ್ಟಿಗೆ 150 ಕೋಟಿ ರು

    ಜನಪ್ರಿಯ ನಿರ್ಮಾಪಕ, ವಿತರಕರಾಗಿರುವ ದಿಲ್ ರಾಜು ಅವರು ಹಲವು ಚಿತ್ರಗಳಿಗೆ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಬಹುತೇಕ ಎಲ್ಲವೂ ಚಿತ್ರೀಕರಣ ಹಂತದಲ್ಲಿವೆ. ಸದ್ಯಕ್ಕೆ ಅನ್ ಲಾಕ್ 1.0 ಶುರುವಾದರೂ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಇಲ್ಲ, ಹಲವು ನಿರ್ಬಂಧಗಳ ನಡುವೆ ಸ್ಟಾರ್ ನಟ, ನಟಿಯರು ಶೂಟಿಂಗಿಗೆ ಇಳಿಯುತ್ತಿಲ್ಲ. ಇಂಡಸ್ಟ್ರೀ ಮೂಲಗಳ ಪ್ರಕಾರ ಪೂರ್ಣ ಪ್ರಮಾಣದ ಶೂಟಿಂಗ್ ನಡೆಯಬೇಕಾದರೆ ಇನ್ನು ಒಂದು ವರ್ಷವಾದರೂ ಬೇಕು ಎಂಬ ಸುದ್ದಿಯಿದೆ. ಸರಿ ಸುಮಾರು 150 ಕೋಟಿ ರು ಇದರಿಂದ ದಿಲ್ ರಾಜುಗೆ ನಷ್ಟವಾಗಲಿದೆ.

    ಪ್ರಮುಖವಾಗಿ ಮೂರು ಚಿತ್ರಗಳಿವೆ

    ಪ್ರಮುಖವಾಗಿ ಮೂರು ಚಿತ್ರಗಳಿವೆ

    ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ''ವಕೀಲ್ ಸಾಬ್", ನಾನಿ ಹಾಗೂ ಸುಧೀರ್ ಬಾಬು ಅಭಿನಯದ ''ವಿ'' ಹಾಗೂ ಜರ್ಸಿ ಚಿತ್ರದ ಬಾಲಿವುಡ್ ರಿಮೇಕ್ ಸದ್ಯ ಶೂಟಿಂಗ್ ಹಂತದಲ್ಲಿತ್ತು. ಮುಂದಿನ ವರ್ಷಕ್ಕೆ ರಿಲೀಸ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಸದ್ಯಕ್ಕೆ ಈ ಮೂರು ಚಿತ್ರಗಳ ಪೈಕಿ ''ವಿ'' ಚಿತ್ರವನ್ನು ಇದೇ ವರ್ಷ ಬಿಡುಗಡೆ ಮಾಡಿ ಸ್ವಲ್ಪ ಮಟ್ಟಿನ ದುಡ್ಡು ಗಳಿಕೆ ಮಾಡಬಹುದು ಅಷ್ಟೇ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕ

    ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕ

    ದಿಲ್, ಆರ್ಯ, ಬೊಮ್ಮರಿಲೋ, ಬೃಂದಾವನಂ, ಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚಿಟ್ಟು, ಫಿದಾ ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ, ವಿತರಣೆ ಮಾಡಿರುವ ದಿಲ್ ರಾಜು ಅವರು ಸದ್ಯ ಯಾವುದೇ ಹೊಸ ಚಿತ್ರಗಳ ನಿರ್ಮಾಣಕ್ಕೆ ಕೈಹಾಕುತ್ತಿಲ್ಲ. ಚಿತ್ರ ವಿತರಣೆಗೂ ಮುಂದಾಗುತ್ತಿಲ್ಲ. ದೊಡ್ಡ ದೊಡ್ಡ ಬ್ಯಾನರ್ ಚಿತ್ರಗಳ ವಿತರಣೆ ಪಡೆದುಕೊಳ್ಳುತ್ತಿಲ್ಲ ದಿಲ್ ರಾಜು ಸದ್ಯ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾರೆ.

    English summary
    Coronavirus crisis: Tollywood producer Dil Raju is worried about his Rs 200 Cr Investment on various projects.
    Friday, June 12, 2020, 17:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X