twitter
    For Quick Alerts
    ALLOW NOTIFICATIONS  
    For Daily Alerts

    ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ಕೋರ್ಟ್: ವಿಚಾರಣೆಗೆ ಹಾಜರಾಗಲು ಸೂಚನೆ!

    |

    ಪ್ರೇಮಂ ಬೆಡಗಿ ಸಾಯಿ ಪಲ್ಲವಿ ತನ್ನ ಸಿನಿಮಾ 'ವಿರಾಟ ಪರ್ವಂ' ಬಿಡುಗಡೆ ವೇಳೆ ಕೆಲವು ಹೇಳಿಕೆ ಗಳನ್ನು ನೀಡಿದ್ದರು. 'ವಿರಾಟ ಪರ್ವಂ' ಸಿನಿಮಾ ಪ್ರಚಾರದ ವೇಳೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ' ದಿ ಕಾಶ್ಮೀರ್ ಫೈಲ್ಸ್' ಹಾಗೂ ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಿರ್ಭೀತಿಯಿಂದ ಮಾತನಾಡಿದ್ದಾರೆ. ಅದೇ ನಟಿಗೆ ತಲೆ ನೋವಾಗಿ ಪರಿಣಮಿಸಿದೆ.

    ಆ ಸಂದರ್ಶನದಲ್ಲಿ ಸಾಯಿ ಪಲ್ಲವಿ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತಾಡಿದ್ದರು. "ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂತು ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂದು ತೋರಿಸಲಾಗಿದೆ. ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಕಾಣಿಸುತ್ತಿಲ್ಲ." ಎಂದು ಸಾಯಿ ಪಲ್ಲವಿ ಹೇಳಿದ್ದರು.

    'ನನ್ನ ಮಾತುಗಳನ್ನು ಬೇರೆ ರೀತಿ ಅರ್ಥೈಸಿದ್ದು ಬೇಸರ ತರಸಿದೆ': ವಿವಾದ ಬಗ್ಗೆ ಸಾಯಿ ಪಲ್ಲವಿ ಸ್ಪಷ್ಟನೆ!'ನನ್ನ ಮಾತುಗಳನ್ನು ಬೇರೆ ರೀತಿ ಅರ್ಥೈಸಿದ್ದು ಬೇಸರ ತರಸಿದೆ': ವಿವಾದ ಬಗ್ಗೆ ಸಾಯಿ ಪಲ್ಲವಿ ಸ್ಪಷ್ಟನೆ!

    ಕಾಶ್ಮೀರಿ ಪಂಡಿತರು ಹಾಗೂ ಗೋ ಹತ್ಯೆ ಬಗ್ಗೆ ಸಾಯಿ ಪಲ್ಲವಿ ಹೀಗೆ ಹೇಳಿಕೆಯನ್ನು ನೀಡುತ್ತಿದ್ದಂತೆ ಹಲವರನ್ನು ಕೆರಳಿಸಿತ್ತು. ಕೆಲವರು ಇದೇ ವಿಚಾರಕ್ಕೆ ದೂರುಗಳನ್ನು ನೀಡಿದ್ದರು. ಆ ದೂರುಗಳನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿ ಕೋರ್ಟ್ ಮೆಟ್ಟಿಲೇರಿದ್ದರು. ಅದನ್ನು ಈಗ ತಿರಸ್ಕರಿಸಲಾಗಿದೆ.

    ಸಾಯಿ ಪಲ್ಲವಿ ವಿರುದ್ದ ದೂರು

    ಸಾಯಿ ಪಲ್ಲವಿ ವಿರುದ್ದ ದೂರು

    ಕಾಶ್ಮೀರ ಪಂಡಿತರ ಹತ್ಯೆಯನ್ನು ಗೋವು ಹತ್ಯೆಯ ಹಂತಕರಿಗೆ ಹೋಲಿಸಿದ್ದ 'ಪ್ರೇಮಂ' ನಟಿ ಸಾಯಿ ಪಲ್ಲವಿಯ ವಿರುದ್ಧ ದೂರು ದಾಖಲಾಗಿತ್ತು. ಹೈದರಾಬಾದ್ ಹಾಗೂ ಹಲವೆಡೆ ಸಾಯಿ ಪಲ್ಲವಿ ವಿರುದ್ಧ ತಿರುಗಿ ಬೀಳುವುದಲ್ಲದೆ ಕೇಸ್ ಕೂಡ ದಾಖಲಿಸಿದ್ದರು. ಈ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಾಯಿ ಪಲ್ಲವಿಗೆ ನೋಟಿಸ್ ನೀಡಲಾಗಿತ್ತು.

    ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡೋದು ಕೆಆರ್‌ಜಿ ಸ್ಟುಡಿಯೋ!ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡೋದು ಕೆಆರ್‌ಜಿ ಸ್ಟುಡಿಯೋ!

    ಮನವಿ ತಿರಸ್ಕರಿಸಿದ ಕೋರ್ಟ್

    ಮನವಿ ತಿರಸ್ಕರಿಸಿದ ಕೋರ್ಟ್

    ಸಾಯಿ ಪಲ್ಲವಿ ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಾಯಿ ಪಲ್ಲವಿ ಮಾಡಿದ ಮನವಿಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿದೆ. ಹೈದರಾಬಾದ್ ಸುಲ್ತಾನ್ ಬಜಾರ್‌ನ ಸರ್ಕಲ್ ಇನ್ಸ್‌ಪೆಕ್ಟರ್ ನೋಟಿಸ್ ನೀಡಿದ್ದರು. ಅದನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿಯ ಮನವಿ ಮಾಡಿದ್ದರು. ಆದರೆ, ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ ಈ ಮನವಿಯನ್ನು ತಿರಸ್ಕರಿಸಿದ್ದಾರೆ.

    ಸಾಯಿ ಪಲ್ಲವಿ ಬಗ್ಗೆ ನ್ಯಾಯಮೂರ್ತಿ ಹೇಳಿದ್ದೇನು?

    ಸಾಯಿ ಪಲ್ಲವಿ ಬಗ್ಗೆ ನ್ಯಾಯಮೂರ್ತಿ ಹೇಳಿದ್ದೇನು?

    ಹೈದರಾಬಾದ್ ಬಜರಂಗದಳದ ಸದಸ್ಯ ಅಖಿಲ್ ಸುಲ್ತಾನ್ ಬಜಾರ್ ಸರ್ಕಲ್ ಇನ್ಸೆಪೆಕ್ಟರ್‌ಗೆ ದೂರು ನೀಡಿದ್ದರು. ಇದರೊಂದಿಗೆ ಹಲವು ದೂರುಗಳು ದಾಖಲಾಗಿದ್ದರು. ಇದೇ ವೇಳೆ ಸಾಯಿ ಪಲ್ಲವಿ ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿಗಳು ತಿರಸ್ಕರಿಸಿದ್ದು, " ಸತ್ಯಾಸತ್ಯತೆ ಅರಿವುದಕ್ಕಾಗಿ ವಿಚಾರಣೆಗೆ ಹಾಜರಾಗಬೇಕು" ಎಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

    'ಗಾರ್ಗಿ' ಸಿನಿಮಾ ರಿಲೀಸ್‌ಗೆ ರೆಡಿ

    'ಗಾರ್ಗಿ' ಸಿನಿಮಾ ರಿಲೀಸ್‌ಗೆ ರೆಡಿ

    ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ತಿಂಗಳು 'ಗಾರ್ಗಿ' ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಜುಲೈ 15ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಸಾಯಿ ಪಲ್ಲವಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆನೇ ಸಾಯಿ ಪಲ್ಲವಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿದ್ದು ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ.

    English summary
    Court Asked Virata Parvam Actress Sai Pallavi To Attend Hearing, Know More.
    Saturday, July 9, 2022, 9:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X