ರಾಧೇಶ್ಯಾಮ್ ಬಗ್ಗೆ ಅಪ್‌ಡೇಟ್: ರಿಲೀಸ್ ಡೇಟ್ ಫಿಕ್ಸ್ ಎಂದ ನಿರ್ದೇಶಕ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಇತ್ತೀಚಿನ ಚಿತ್ರ 'ರಾಧೆ ಶ್ಯಾಮ್'. ಪಿರಿಯಾಡಿಕ್ ಲವ್ ಸ್ಟೋರಿ. ಪೂಜಾ ಹೆಗ್ಡೆ ನಾಯಕಿ. 'ಜಿಲ್' ಖ್ಯಾತಿಯ ರಾಧಾಕೃಷ್ಣ ಕುಮಾರ್ ಅವರು ಯುರೋಪ್‌ನಲ್ಲಿ ನಡೆಯುವ ಈ ಲೈವ್ ಸ್ಟೋರಿಯನ್ನು ನಿರ್ದೇಶಿಸಿದ್ದಾರೆ. ಈ ಈ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕೊರೊನಾ ಮೂರನೇ ಅಲೆಯ ಕಾರಣದಿಂದ ಮುಂದೂಡಲ್ಪಟ್ಟಿದೆ. ಇತ್ತೀಚೆಗಷ್ಟೇ 'ರಾಧೆ ಶ್ಯಾಮ್' ಚಿತ್ರ ಮಾರ್ಚ್ 18ಕ್ಕೆ ಬಿಡುಗಡೆಯಾಗಲಿದೆ ಎಂಬ ಗಾಳಿಸುದ್ದಿ ಕೂಡ ಹರಡಿತ್ತು. ಅದು ಅಲ್ಲದೆ ಅದೇ ದಿನಕ್ಕೆ RRR ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಆದರೆ 'ಆರ್ ಆರ್ ಆರ್' ಕೂಡಾ ದಿನಾಂಕದಲ್ಲಿ ಬಿಡುಗಡೆಯಾಗುವುದು ಅನುಮಾನ.ಅದೇ ಗ್ಯಾಪ್‌ನಲ್ಲಿ 'ರಾಧೆ ಶ್ಯಾಮ್' ಡೈರೆಕ್ಟ್ ಒಟಿಟಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಇದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಸಿನಿಮಾ. OTT ನಲ್ಲಿ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಿರ್ದೇಶಕ ರಾಧಾ ಕೃಷ್ಣಕುಮಾರ್ ಸ್ಪಷ್ಟಪಡಿಸಿದ್ದಾರೆ.

'ರಾಧೆ ಶ್ಯಾಮ್' ಚಿತ್ರಮಂದಿರಕ್ಕೆ ಬರುವುದಾದರೆ ಯಾವಾಗ? ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿತ್ತು. ಈ ಬಗ್ಗೆ ಪ್ರಭಾಸ್ ಮತ್ತು ತಂಡ ಮೌನ ವಹಿಸಿದೆ. ಈ ಹಿನ್ನಲೆಯಲ್ಲಿ 'ರಾಧೆ ಶ್ಯಾಮ್' ರಿಲೀಸ್ ಡೇಟ್ ಬಗ್ಗೆ ಕುತೂಹಲ ಮೂಡಿಸಿದೆ. ಇದೀಗ ದೆಹಲಿ, ತಮಿಳುನಾಡು, ಉತ್ತರದ ರಾಜ್ಯಗಳಲ್ಲಿ ಲಾಕ್‌ಡೌನ್‌ಗಳನ್ನು ತೆಗೆದುಹಾಕುತ್ತಿದೆ. ಥಿಯೇಟರ್ ಆಕ್ಯುಪೆನ್ಸಿ ವಿಚಾರದಲ್ಲೂ ಸಡಿಲಿಕೆ ಶುರುವಾಗಿದೆ. ಇದರೊಂದಿಗೆ, 'ರಾಧೆ ಶ್ಯಾಮ್' ನಿರ್ಮಾಪಕರು ಮಾರ್ಚ್ 4 ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಲಾಕ್‌ಡೌನ್ ಸಡಿಲಿಕೆಯಂತಹ ವಿಷಯಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಇದರೊಂದಿಗೆ ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟತೆ ಮಾತ್ರ ಮೂಡಿಬಂದಿಲ್ಲ. ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ಎಂಬ ಸ್ಪಷ್ಟೀಕರಣ ಮಾತ್ರ ಈಗ ನಿರ್ದೇಶಕರ ಕಡೆಯಿಂದ ಬಂದಿದೆ.

 'ರಾಧೆ ಶ್ಯಾಮ್' ಚಿತ್ರದಲ್ಲಿ ಪ್ರಭಾಸ್

'ರಾಧೆ ಶ್ಯಾಮ್' ಚಿತ್ರದಲ್ಲಿ ಪ್ರಭಾಸ್

ಪ್ರಭಾಸ್ 'ಸಾಹೋ' ಸಿನಿಮಾ ಥಿಯೇಟರ್‌ಗೆ ಬಂದು ಎರಡೂವರೆ ವರ್ಷ ಆಗಿದೆ. ಹೀಗಾಗಿ ಮತ್ತೆ ತಮ್ಮ ಮೆಚ್ಚಿನ ನಾಯಕನನ್ನು ದೊಡ್ಡ ತೆರೆಯ ಮೇಲೆ ನೋಡಲು ಪ್ರಭಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 'ರಾಧೆ ಶ್ಯಾಮ್' ಚಿತ್ರದ ಟೀಸರ್ ಮತ್ತು ಟ್ರೇಲರ್ ಪ್ರೇಕ್ಷಕರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿವೆ. 'ರಾಧೆ ಶ್ಯಾಮ್' ಚಿತ್ರದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಹಸ್ತಸಾಮುದ್ರಿಕ ತಜ್ಞರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇರಣಾ ಎಂಬ ಸಂಗೀತ ಶಿಕ್ಷಕಿಯ ಪಾತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ರೆಬೆಲ್ ಸ್ಟಾರ್ ಕೃಷ್ಣಂರಾಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃಷ್ಣಂರಾಜು ಅವರ ಸಮರ್ಪಣೆಯಲ್ಲಿ ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಂಶಿ, ಪ್ರಮೋದ್ ಮತ್ತು ಪ್ರಸೀದಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 ನಿರ್ದೇಶಕ ರಾಧಾಕೃಷ್ಣ 'ರಾಧೆ ಶ್ಯಾಮ್' ಒಂದೇ ಟ್ವೀಟ್

ನಿರ್ದೇಶಕ ರಾಧಾಕೃಷ್ಣ 'ರಾಧೆ ಶ್ಯಾಮ್' ಒಂದೇ ಟ್ವೀಟ್

ನಿರ್ದೇಶಕ ರಾಧಾಕೃಷ್ಣ 'ರಾಧೆ ಶ್ಯಾಮ್' ಒಂದೇ ಟ್ವೀಟ್ ಮೂಲಕ ಚಿತ್ರದ ಬಿಡುಗಡೆಯ ಸುತ್ತಲಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಪ್ರಭಾಸ್ 'ರಾಧೆ ಶ್ಯಾಮ್' ಸಿನಿಮಾದ OTT ನಲ್ಲಿ ಬಿಡುಗಡೆಯಾಗುವ ಬಗ್ಗೆ ವದಂತಿ ಹಬ್ಬುತ್ತಿದೆ. 'ರಾಧೆ ಶ್ಯಾಮ್' ಚಿತ್ರ ಒಟಿಟಿಗೆ ಬರಲಿದೆ ಎಂಬ ಸುದ್ದಿ ವೈರಲ್ ಆಗಿದೆ. ಇದು OTTನಲ್ಲಿ ಬಿಡುಗಡೆಯಾಗುತ್ತದೆ ಅಥವಾ ನೇರವಾಗಿ ಚಿತ್ರಮಂದಿರಕ್ಕೆ ಬರುತ್ತದೆ ಎಂಬುದರ ಬಗ್ಗೆ ಇದುವರೆಗೂ ನಿರ್ಮಾಪಕರು ಯಾವುದೇ ಕ್ಲಾರಿಟಿ ಕೊಡುತ್ತಿಲ್ಲ. ಇದರ ಬಗ್ಗೆ ಸ್ಪಷ್ಟನೆ ಕೊಡಬೇಕಾದ ನಿರ್ಮಾಪಕರು ಮೌನವಾಗಿದ್ದಾರೆ ಆದರೆ ನಿರ್ದೇಶಕ ರಾಧಾಕೃಷ್ಣ ಕುಮಾರ್ ಮುಂದೆ ಬಂದು ನಿರ್ಮಾಪಕರಿಗಿಂತ ಮೊದಲೇ ಈ ವದಂತಿಗಳಿಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ.

ಟ್ವೀಟ್ ಮೂಲಕ ಅಲ್ಲಗಳೆದಿದ್ದಾರೆ

ಟ್ವೀಟ್ ಮೂಲಕ ಅಲ್ಲಗಳೆದಿದ್ದಾರೆ

ರಾಧಾಕೃಷ್ಣ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ. ಟ್ವಿಟರ್‌ನಲ್ಲಿ ನೆಟಿಜನ್‌ಗಳಿಗೆ ಉತ್ತರಗಳನ್ನು ನೀಡುತ್ತಾರೆ. ಟ್ರೋಲಿಂಗ್ ಬಂದರೂ ಕೂಲ್ ಆಗಿ ಪ್ರತಿಕ್ರಿಯಿಸುತ್ತಾರೆ. ಆದರೆ, ಇತ್ತೀಚಿನ ಸಿನಿಮಾ ಬಿಡುಗಡೆ ಕುರಿತ ವದಂತಿಗಳನ್ನು ಒಂದೇ ಒಂದು ಟ್ವೀಟ್ ಮೂಲಕ ಅಲ್ಲಗಳೆದಿದ್ದಾರೆ. ಕೊನೆಗೂ ಚಿತ್ರ OTT ನಲ್ಲಿ ಬಿಡುಗಡೆಯಾಗುವ ಬಗ್ಗೆ ಹಬ್ಬಿರುವ ವದಂತಿಗಳಿಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯದಲ್ಲೇ ಚಿತ್ರ ಥಿಯೇಟರ್‌ಗೆ ಬರಲಿದೆ ಎನ್ನುತ್ತಾರೆ 'ರಾಧೆ ಶ್ಯಾಮ್' ಚಿತ್ರದ ನಿರ್ದೇಶಕರು.

 ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸೂಚನೆ

ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸೂಚನೆ

ಹೀಗಾಗಿ ವದಂತಿಗಳಿಗೆ ಪುಲ್ ಸ್ಟಾಪ್ ಬಿದ್ದಿದೆ. ಆದರೂ ಚಿತ್ರ ಒಟಿಟಿಗೆ ಬರುತ್ತಿಲ್ಲ ಎಂದು ತಿಳಿದುಬಂದಿದೆ. ಆದರೆ ಮತ್ತೊಬ್ಬ ನೆಟಿಜನ್ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. 'ಥಿಯೇಟರ್‌ಗೆ ಯಾವಾಗ ಬರುತ್ತೀರಿ?' ಎಂದು. ಪರಿಸ್ಥಿತಿಗಳು ಸರಿ ಇದ್ದಾಗ ಮಾತ್ರ ಬರುತ್ತೆ ಎಂದು ಸ್ಪಷ್ಟನೆ ನೀಡಿದರು. ಒಟ್ಟಿನಲ್ಲಿ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಮಾತ್ರ ಸ್ಪಷ್ಟತೆ ಮೂಡಿಬರುತ್ತಿಲ್ಲ. ಪರೋಕ್ಷವಾಗಿ ಮಾರ್ಚ್ ಕೊನೆ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸೂಚನೆಯನ್ನು ನಿರ್ದೇಶಕರು ಈ ಸಂದರ್ಭದಲ್ಲಿ ನೀಡಿದ್ದಾರೆ. ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಚಿತ್ರದ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ ಅಂತ ರಾಧಾಕೃಷ್ಣ ಕುಮಾರ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಮೂರನೇ ಅಲೆಯ ಎಫೆಕ್ಟ್ ಕಡಿಮೆಯಾದರೆ 'ರಾಧೆ ಶ್ಯಾಮ್' ಥಿಯೇಟರ್‌ಗೆ ಬರುವುದು ಖಚಿತವಾಗಿದ್ದು, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

More from Filmibeat

English summary
Crazy Update on Radheshyam Release: Director confirms the release date. In his tweet director said that As soon as the covid situations and restrictions come down the production house will announce the release date
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X