'ಬುಟ್ಟಾ ಬೊಮ್ಮಾ' ಆಯ್ತು ಈಗ ಬಾಹುಬಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್

ಕ್ರಿಕೆಟಿಗ ಡೇವಿಡ್ ವಾರ್ನರ್ ಲಾಕ್‌ಡೌನ್ ಸಮಯದಲ್ಲಿ ಟಿಕ್‌ ಟಾಕ್‌ನಲ್ಲಿ ಅತಿಯಾಗಿ ಸಕ್ರಿಯರಾಗಿದ್ದಾರೆ. ಟಿಕ್‌ಟಾಕ್‌ ನಲ್ಲಿ ವಿಡಿಯೋಗಳ ಮೇಲೆ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ.

Recommended Video

ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

ವಾರ್ನರ್, ಹೆಂಡತಿ ಮಕ್ಕಳೊಂದಿಗೆ ತಮಾಷೆಯ ವಿಡಿಯೋಗಳನ್ನು ಮಾಡಿ ಟಿಕ್‌ ಟಾಕ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಬಹಳವಾಗಿ ವೈರಲ್ ಆಗುತ್ತಿವೆ.

ವಾರ್ನರ್ ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಸೇರಿ 'ಬುಟ್ಟ ಬೊಮ್ಮಾ' ತೆಲುಗು ಹಾಡಿಗೆ ನರ್ತಿಸಿದ್ದು ಭಾರಿ ವೈರಲ್ ಆಗಿತ್ತು. ಈದ ಅದರ ಬೆನ್ನಲ್ಲೇ 'ಬಾಹುಬಲಿ' ವೇಷ ಧರಿಸಿದ್ದಾರೆ ಡೇವಿಡ್ ವಾರ್ನರ್.

ಹಲವು ತೆಲುಗು ಹಾಡುಗಳಿಗೆ ಟಿಕ್‌ ಟಾಕ್

ಹಲವು ತೆಲುಗು ಹಾಡುಗಳಿಗೆ ಟಿಕ್‌ ಟಾಕ್

ಡೇವಿಡ್ ವಾರ್ನರ್ ಟಿಕ್‌ ಟಾಕ್ ವಿಡಿಯೋಗಳನ್ನು ಬಹಳವಾಗಿಯೇ ಗಂಭೀರವಾಗಿ ಪರಿಗಣಿಸಿದಂತಿದೆ. ಬುಟ್ಟ ಬೊಮ್ಮಾ, ರಾಮುಲೋ ರಾಮುಲಾ ಹಾಡಿನ ಬಳಿಕ ಈ ಬಾಹುಬಲಿ ಡೈಲಾಗ್‌ ನ ಟಿಕ್ ಟಾಕ್ ವಿಡಿಯೋ ಹರಿಬಿಟ್ಟಿದ್ದಾರೆ ವಾರ್ನರ್.

ಬಹುತೇಕ ತೆಲುಗು ಸಿನಿಮಾ ಟಿಕ್‌ಟಾಕ್‌ಗಳೇ ಹೆಚ್ಚು

ಬಹುತೇಕ ತೆಲುಗು ಸಿನಿಮಾ ಟಿಕ್‌ಟಾಕ್‌ಗಳೇ ಹೆಚ್ಚು

ಸನ್‌ ರೈಸಸ್ ಹೈದರಾಬಾದ್ ತಂಡದ ನಾಯಕರೂ ಆಗಿರುವ ವಾರ್ನರ್ ಬಹುತೇಕ ತೆಲುಗು ಹಾಡುಗಳಿಗೆ ಟಿಕ್‌ ಟಾಕ್ ಮಾಡುತ್ತಿದ್ದಾರೆ. ಅದರಲ್ಲಿಯೂ ಅಲ್ಲೂ ಅರ್ಜುನ್ ಅವರ 'ಅಲಾ ವೈಕುಂಟಪುರಂಲೋ' ಸಿನಿಮಾದ ಎರಡು ಹಾಡಿಗೆ ಟಿಕ್‌ ಟಾಕ್ ಮಾಡಿದ್ದಾರೆ. ಪೋಕಿರಿ ಸಿನಿಮಾದ ದೃಶ್ಯದ ಟಿಕ್‌ ಟಾಕ್ ಸಹ ಮಾಡಿದ್ದಾರೆ.

ಬಾಹುಬಲಿ ಸಿನಿಮಾದ ದೃಶ್ಯದ ಟಿಕ್‌ ಟಾಕ್

ಬಾಹುಬಲಿ ಸಿನಿಮಾದ ದೃಶ್ಯದ ಟಿಕ್‌ ಟಾಕ್

ಈಗ ಬಾಹುಬಲಿ ರೀತಿಯ ಕಾಸ್ಟ್ಯೂಮ್ ಹಾಕಿಕೊಂಡು 'ಬಾಹುಬಲಿ' ಸಿನಿಮಾದ ಮಾಸ್ ಸೀನ್‌ಗಳಲ್ಲಿ ಒಂದಾದ ಅಮರೇಂದ್ರ ಬಾಹುಬಲಿ ಸೇನಾಧ್ಯಕ್ಷನಾಗಿ ಪ್ರಮಾಣ ಸ್ವೀಕಾರ ಮಾಡುವ ದೃಶ್ಯದ ಪ್ರಾರಂಭದ ಡೈಲಾಗ್ ಅನ್ನು ಟಿಕ್‌ ಟಾಕ್ ಮಾಡಿದ್ದಾರೆ. ವಾರ್ನರ್ ಮಗಳೂ ಸಹ ವಿಡಿಯೋದಲ್ಲಿದ್ದಾಳೆ.

ವಾರ್ನರ್‌ ಗೆ ಸಿನಿಮಾ ಅವಕಾಶ

ವಾರ್ನರ್‌ ಗೆ ಸಿನಿಮಾ ಅವಕಾಶ

ಡೇವಿಡ್ ವಾರ್ನರ್ ವಿಡಿಯೋಗಳನ್ನು ನೋಡಿ ನಿರ್ದೇಶಕ ಪುರಿ ಜಗನ್ನಾಥ್ ವಾರ್ನರ್ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಜಗನ್ನಾಥ್ ನಿರ್ದೇಶಿಸಿದ್ದ ಸಿನಿಮಾ ಪೋಕಿರಿಯ ಡೈಲಾಗ್‌ ನ ಟಿಕ್ ಟಾಕ್ ಸಹ ವಾರ್ನರ್ ಮಾಡಿದ್ದರು.

More from Filmibeat

English summary
Cricketer David Warner contentiously doing Telugu movie, songs tik tok. Recently he did Bahubali movie scene tik tok video with his daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X