Viral Video: ಕ್ರಿಕೆಟರ್ ಡೇವಿಡ್ ವಾರ್ನರ್ ಮಕ್ಕಳ 'ಸಾಮಿ ಸಾಮಿ' ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ!

ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಕೂಡ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫೀಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಬ್ರೇಕ್​ ಮಾಡಿಕೊಂಡು ಬಂದಿತ್ತು. ಇದೀಗ ಒಟಿಟಿಯಲ್ಲೂ ಸಿನಿಮಾ ಸಖತ್​ ಸೌಂಡ್ ಮಾಡುತ್ತಿದೆ. 'ಪುಷ್ಪ' ಚಿತ್ರದಲ್ಲಿರುವ ಹಾಡುಗಳು ಕೂಡ ಸಖತ್​ ಸೌಂಡ್ ಮಾಡಿತ್ತು. ಊ ಅಂಟಾವಾ ಮಾವ.. ಸಾಂಗ್​ ಅಂತು ಯೂಟ್ಯೂಬ್​ನಲ್ಲಿ ನಂಬರ್​ ಒನ್​ ಸ್ಥಾನ ಪಡೆದುಕೊಂಡಿದೆ.

ಇನ್ನು ಸಾಮಿ ಸಾಮಿ ಹಾಡು ಕೂಡ ಫುಲ್​ ಫೇಮಸ್​ ಆಗಿತ್ತು. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿಬಂದ ಈಗ ಹಾಡು ಸೂಪರ್​ ಹಿಟ್​ ಆಗಿದೆ. ಎಲ್ಲೇ ಹೋದರು ಈ ಸಾಂಗ್​ ಅಂತೂ ಇದ್ದೆ ಇರುತ್ತೆ. ಎಲ್ಲರ ಬಾಯಲ್ಲೂ ಇದೇ ಹಾಡಿನ ಸಾಲುಗಳು. ಇದೀಗ ಈ ಹಾಡಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಹಾಡನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದು, ರಿಲೀಸ್ ಆದ ಕೆಲವೇ ದಿನಗಳಲ್ಲಿ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ.

ಸದ್ಯ ಸಾಮಿ ಸಾಮಿ ಹಾಡನ್ನು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮಕ್ಕಳು ಕೂಡ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾಮಿ ಸಾಮಿ ಹಾಡಿಗೆ ಇನ್ಸ್‌ಗ್ರಾಮ್‌ನಲ್ಲಿ ರೀಲ್ಸ್ ಕೂಡ ಮಾಡಿದ್ದು, ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ಮಕ್ಕಳ ಈ ಡ್ಯಾನ್ಸಿಗೆ ಡೇವಿಡ್ ವಾರ್ನರ್ "ಮಮ್ಮಿ ಡ್ಯಾಡಿಗು ಮೊದಲೇ ಮಕ್ಕಳು ಸಾಮಿ ಸಾಮಿ ಹಾಡನ್ನು ಟ್ರೈ ಮಾಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಡೇವಿಡ್ ವಾರ್ನರ್ ಮಕ್ಕಳ ಈ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಶೇರ್ ಕೂಡ ಮಾಡುತ್ತಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಡೇವಿಡ್ ವಾರ್ನರ್ ಕೂಡ ಶ್ರೀವಲ್ಲಿ ಹಾಡಿನ ಕನ್ನಡ ಅವತರಣಿಕೆಗೆ ಡೇವಿಡ್​ ವಾರ್ನರ್​ ಹೆಜ್ಜೆ ಹಾಕಿದ್ದರು. ಅಲ್ಲು ಅರ್ಜುನ್​ ಮಾಡಿದ ಸ್ಟೆಪ್​ಅನ್ನು ಎಲ್ಲರೂ ಇದೀಗ ಅನುಕರಿಸುತ್ತಿದ್ದಾರೆ. ಅದರಂತೆ ಕ್ರಿಕೆಟರ್ ಡೇವಿಡ್ ವಾರ್ನರ್ ಕೂಡ ಈಗ ರಿ ಕ್ರೀಯೆಟ್ ಮಾಡಿದ್ದಾರೆ. ಈ ವಿಡಿಯೋ​ ಡೇವಿಡ್ ವಾರ್ನರ್ ಅವರು ಇನ್​ಸ್ಟ್ರಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್​ ಮಾಡಿದ ಎರಡು ಗಂಟೆಗಳಲ್ಲಿ ಈ ವಿಡಿಯೋ 25 ಲಕ್ಷ ಬಾರಿ ವೀಕ್ಷಣೆ ಕಂಡಿತ್ತು. 7.14 ಲಕ್ಷ ಲೈಕ್ಸ್​ ಪಡೆದುಕೊಂಡಿತ್ತು.

ಡೇವಿಡ್ ಅವರ ಈ ಕನ್ನಡ ರೀಲ್ಸ್‌ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಹೀಗೆ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಪದೇ ಪದೇ ವೀಡಿಯೋಗಳನ್ನು ಹಾಕಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅಭಿಮಾನಿಗಳಿಗೂ ಇದು ಹಿಡಿಸಿದ್ದು, ಡೇವಿಡ್ ವಾರ್ನರ್ ಅವರ ಪ್ರತೀ ವೀಡಿಯೋವನ್ನು ನೋಡಲು ಕಾಯುತ್ತಿರುತ್ತಾರೆ.

ಇನ್ನು ಪುಷ್ಟ ಸಿನಿಮಾ ಕೂಡ ರಿಲೀಸ್ ಆಗಿ ಉತ್ತಮ ಪ್ರತಿಕ್ರೀಯೆ ಪಡೆದುಕೊಳ್ಳುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆದ ಪುಷ್ಪ ಚಿತ್ರ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಜೋಡಿ ಮೂರನೇ ಬಾರಿಗೆ ಒಂದಾಗಿದ್ದರು. ಈ ಹಿಂದೆ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ ಆರ್ಯ, ಮತ್ತು ಆರ್ಯ 2, ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ಇಡೀ ಟಾಲಿವುಡ್‍ ನಲ್ಲಿ ಈ ಜೋಡಿ ಕಮಾಲ್ ಮಾಡಿತ್ತು.ಮತ್ತೆ ಪುಷ್ಪ ಸಿನಿಮಾದಿಂದ ಬಾಕ್ಸ್ ಆಫೀಸ್ ಶೇಕ್ ಮಾಡಿದೆ ಈ ಜೋಡಿ.

Cricketer David Warner Childerns Dance for Saami Saami Telugu Song

ಪುಷ್ಪ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಇದ್ದು, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಮಲಯಾಳಂ ನಟ ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಮ್ಸೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ.

More from Filmibeat

English summary
Cricketer David Warner childerns dance for Pushpa movie famous telugu song.video goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X