ರಾಜಶೇಖರ್ ಹಾಗೂ ಪತ್ನಿ ಜೀವಿತಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು

ತೆಲುಗಿನ ಜನಪ್ರಿಯ ನಟ ರಾಜಶೇಖರ್ ಹಾಗೂ ಅವರ ಪತ್ನಿ ಜೀವಿತಾ ವಿರುದ್ಧ ನಿರ್ಮಾಣ ಸಂಸ್ಥೆಯೊಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಒಂದು ಕಾಲದಲ್ಲಿ ಟಾಪ್ ಹೀರೋಗಳಲ್ಲಿ ಒಬ್ಬರಾಗಿದ್ದ ರಾಜಶೇಖರ್ ಇತ್ತೀಚಿನ ಕೆಲ ವರ್ಷಗಳಿಂದ ಸತತ ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದು, 2017 ರಲ್ಲಿ 'ಗರುಡ ವೇಗ' ಹೆಸರಿನ ಸಿನಿಮಾ ನಿರ್ಮಾಣ ಮಾಡಿ, ನಟಿಸಿ ಯಶಸ್ಸು ಪಡೆದಿದ್ದರು. ಈಗ ಅದೇ ಸಿನಿಮಾದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ ನಟ ರಾಜಶೇಖರ್.

ಜೋಸ್ಟರ್ ಸಿನಿಮಾ ಸರ್ವೀಸ್ ಸಂಸ್ಥೆಯು ರಾಜಶೇಖರ್ ಹಾಗೂ ಜೀವಿತಾ ವಿರುದ್ಧ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ವಂಚನೆ ಮೊಕದ್ದಮೆ ದಾಖಲಿಸಿದ್ದು. ಚೆಕ್ ಬೌನ್ಸ್ ಪ್ರಕರಣವನ್ನೂ ದಾಖಲಿಸಿದೆ.

Criminal Case Against Actor Rajshekhar And His Wife Jeevitha

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜೋಸ್ಟರ್ ಸಿನಿಮಾ ಸರ್ವೀಸ್ ಸಂಸ್ಥೆಯ ಮಾಲೀಕ ರಾಜು, ರಾಜಶೇಖರ್ ಸತತ ಸೋಲುಗಳಿಂದ ಕಂಗೆಟ್ಟು ಡಿಪ್ರೆಶನ್‌ನಲ್ಲಿದ್ದರು. ಆಗ ನನಗೆ ಪರಿಚಿತರಾಗಿದ್ದ ಅವರ ತಂದೆಯವರು, ಮಗನಿಗೆ ಸಹಾಯ ಮಾಡುವಂತೆ ಹೇಳಿದರು. ಅಂತೆಯೇ ರಾಜಶೇಖರ್ ಸಹ ನನ್ನ ಬಳಿ ಬಂದು ಭಾವುಕವಾಗಿ ಸಹಾಯ ಕೇಳಿದರು'' ಎಂದು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

'ಗರುಡ ವೇಗ' ಸಿನಿಮಾ ತೆಗೆಯಲು ಕೆಲವು ಆಸ್ತಿಗಳನ್ನು ಅಡವಿಟ್ಟು 26 ಕೋಟಿ ರುಪಾಯಿ ಸಾಲವನ್ನು ನನ್ನಿಂದ ಪಡೆದುಕೊಂಡಿದ್ದರು. ಆದರೆ ಮೂರು ವರ್ಷಗಳಾದರೂ ಸಾಲವನ್ನು ತೀರಿಸಿಲ್ಲ. ಅಲ್ಲದೆ, ಅವರು ಅಡ ಇಟ್ಟಿದ್ದ ಆಸ್ತಿಗಳೆಲ್ಲ ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳು. ಈಗ ಹಣ ಕೇಳಿದರೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ.

ರಾಜಶೇಖರ್ ಪತ್ನಿ ಜೀವಿತಾ ಬಗ್ಗೆಯೂ ಮಾತನಾಡಿರುವ ಜೋಸ್ಟರ್ ಸಂಸ್ಥೆಯ ನಿರ್ಮಾಪಕ, ''ಜೀವಿತಾ ಬಹಳ ಡೇಂಜರಸ್ ವ್ಯಕ್ತಿ. ಆಕೆ ರಾಜಶೇಖರ್‌ಗಿಂತಲೂ ಡೇಂಜರಸ್, ನಮಗೆ ಮೋಸ ಮಾಡುವ ಐಡಿಯಾ ಆಕೆಯದ್ದೇ, ಈಗ ಹಣ ವಾಪಸ್ಸು ಕೇಳಿದಾಗ ರೌಡಿಯಂತೆ ವರ್ತಿಸುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ ನಿರ್ಮಾಪಕ.

''ಈ ಸಂಬಂಧ ತಮಿಳುನಾಡಿನಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ಆಂಧ್ರ ಪ್ರದೇಶದ ನಗರಿ ಕೋರ್ಟ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದೇವೆ. ನಗರಿ ನ್ಯಾಯಾಲಯವು ರಾಜಶೇಖರ್ ಹಾಗೂ ಜೀವಿತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇಬ್ಬರ ಬಂಧನ ಶೀಘ್ರದಲ್ಲಿಯೇ ಆಗಲಿದೆ'' ಎಂದಿದ್ದಾರೆ.

ರಾಜಶೇಖರ್ 'ಶೇಖರ್' ಹೆಸರಿನ ಹೊಸ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಕ್ಕೆ ಪತ್ನಿ ಜೀವಿತಾರದ್ದೇ ನಿರ್ದೇಶನ. ನಿರ್ಮಾಣ ಮಾಡಿರುವುದು ಸಹ ಇವರೇ. ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

More from Filmibeat

English summary
Criminal case filed against actor Rajshekhar and wife Jeevitha by Joster film service. They accused that Rajshekhar took 26 crore rs loan and did not re-pay it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X