ವಿಕ್ಟರಿ ವೆಂಕಟೇಶ್- ರಾಣಾ ದಗ್ಗುಬಾಟಿ ಮೇಲೆ ಕ್ರಿಮಿನಲ್ ಕೇಸ್ ದಾಖಲು
ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್‌ಗೆ ತೆಲಂಗಾಣ ನಾಂಪಲ್ಲಿ ಕೋರ್ಟ್ ಶಾಕ್ ನೀಡಿದೆ. ವೆಂಕಟೇಶ್, ಸಹೋದರ ದಗ್ಗುಬಾಟಿ ಸುರೇಶ್ ಬಾಬು, ರಾಣಾ, ಅಭಿರಾಮ್ ಸೇರಿದಂತೆ ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ನಂದಕುಮಾರ್ ಎಂಬ ವ್ಯಕ್ತಿ ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು ನ್ಯಾಯಾಲಯ ಇಂದು(ಜನವರಿ 29) ಕೈಗೆತ್ತಿಕೊಂಡಿತ್ತು.
ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಡೆಕ್ಕನ್ ಕಿಚನ್ ಹೋಟೆಲ್ ಅನ್ನು ನೆಲಸಮ ಮಾಡಲಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಕಟ್ಟಡ ನಾಶವಾಗಿದ್ದು, ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ದಗ್ಗುಬಾಟಿ ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ. ಇನ್ನು ಶಾಸಕರ ಖರೀದಿ ಪ್ರಕರಣದಲ್ಲಿ ನಂದಕುಮಾರ್ ಆರೋಪಿಯಾಗಿದ್ದಾರೆ.

ನಿವೇಶನದ ಗುತ್ತಿಗೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಹೋಟೆಲ್ ಅನ್ನು ಅಮಾನುಷವಾಗಿ ನೆಲಸಮ ಮಾಡಲಾಗಿದೆ ಎಂದು ನಂದಕುಮಾರ್ ಆರೋಪಿಸಿದರು. ಪೊಲೀಸರ ನೆರವಿನಿಂದ ತಮ್ಮ ಹೊಟೇಲ್ ನೆಲಸಮ ಮಾಡಿದ್ದು, ಕೋರ್ಟ್ ಆದೇಶದ ನಡುವೆಯೂ ಜೆಸಿಬಿ ಮೂಲಕ ಅಕ್ರಮ ಕೆಡವಿ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. 60 ಖಾಸಗಿ ಬೌನ್ಸರ್‌ಗಳನ್ನು ಇಟ್ಟುಕೊಂಡು ಅಂದು ಅಕ್ರಮವಾಗಿ ಕಟ್ಟಡ ಕೆಡವಿದ್ದರು ಎಂದು ನಂದಕುಮಾರ್ ದೂರಿದರು. ಇದರಿಂದ ನನಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಅಲವತ್ತುಕೊಂಡಿದ್ದರು.
ಇದಕ್ಕೂ ಮುನ್ನ ಡೆಕ್ಕನ್ ಹೋಟೆಲ್ ಧ್ವಂಸ ಪ್ರಕರಣದಲ್ಲಿ ಜಿಎಚ್‌ಎಂಸಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಇತ್ತೀಚೆಗೆ ನಂದಕುಮಾರ್ ನಾಂಪಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ ಕಟ್ಟಡ ಕೆಡವಲಾಗಿದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ನಿರ್ಮಾಪಕ ಸುರೇಶ್ ಬಾಬು ಸೇರಿದಂತೆ ದಗ್ಗುಬಾಟಿ ಫ್ಯಾಮಿಲಿ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಆದೇಶ ನೀಡಿದೆ.
ತೆಲಂಗಾಣ ಹೈಕೋರ್ಟ್‌ನ ಆದೇಶದಂತೆ ವೆಂಕಟೇಶ್, ರಾಣಾ, ಅಭಿರಾಮ್ ಮತ್ತು ಸುರೇಶ್ ವಿರುದ್ಧ ಐಪಿಸಿ ಸೆಕ್ಷನ್ 448, 452, 380, 506 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಕೂಡ ಆರೋಪ ಎದುರಿಸುತ್ತಿರುವ ದಗ್ಗುಬಾಟಿ ಫ್ಯಾಮಿಲಿ ಸದಸ್ಯರು ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಲಾಗಿತ್ತು.


Click it and Unblock the Notifications











