ಅಪ್ಪನಿಗೆ ವಿಶೇಷ ಸಂದೇಶ ಬರೆದ ಅಲ್ಲು ಅರ್ಜುನ್ ಪುತ್ರ ಅಯಾನ್

ಇಂದು(ಡಿಸೆಂಬರ್‌ 17) ಪುಷ್ಪ ಸಿನಿಮಾ ವಿಶ್ವಾದ್ಯಂತ ರಿಲೀಸ್‌ ಆಗಿದೆ. ಸದ್ಯ ಪುಷ್ಪ ಸಿನಿಮಾದ ಬಗ್ಗೆಯೇ ಮಾತು. ಕರ್ನಾಟಕದಲ್ಲೂ ಪುಷ್ಪ ಸಿನಿಮಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಪುಷ್ಪ ಕನ್ನಡದಲ್ಲಿ ರಿಲೀಸ್‌ ಆಗಿಲ್ಲ. ಅಂತೆಯೇ ಮಲಯಾಳಂನಲ್ಲೂ ಕೂಡ ತೆರೆಗೆ ಬಂದಿಲ್ಲ. ತೆಲುಗು, ಹಿಂದಿ ಮತ್ತು ತಮಿಳನಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ. ಇದುವೇ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಪುಷ್ಪ ಸಿನಿಮಾದ ಅಬ್ಬರದ ಹಾವಳಿ ನಡುವೆ ನಟ ಅಲ್ಲು ಅರ್ಜುನ್‌ ಪುತ್ರ ಅಯಾನ್‌ ಹೆಸರು ಕೂಡ ಕೇಳಿ ಬರ್ತಿದೆ. ಹಾಗಂತ ಅಯಾನ್‌ ಪುಷ್ಪ ಸಿನಿಮಾದಲ್ಲಿ ನಟಿಸಿಲ್ಲ. ಅಯಾನ್‌ ಅಪ್ಪನಿಗಾಗಿ ಪ್ರೀತಿಯ ಸಂದೇಶವನ್ನು ಬರೆದಿದ್ದಾನೆ. ಅಯಾನ್ ಬರೆದ ಸಂದೇಶ ವೈರಲ್‌ ಆಗಿದೆ.

ಮಗ ಅಯಾನ್‌ ಬರೆದ ಪ್ರೀತಿಯ ಸಂದೇಶವನ್ನು ನಟ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಯಾನ್‌ ಬರೆದ ಆ ಪತ್ರದಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ..

Cute And Special Wishes To Allu Arjun By His Son Ayaan

'ಪುಷ್ಪ' ಚಿತ್ರ ಬರೆದು ಅಪ್ಪನಿಗೆ ಆಲ್‌ ದಿ ಬೆಸ್ಟ್‌ ಹೇಳಿದ ಅಯಾನ್!

ಪುಷ್ಪ ಸಿನಿಮಾ ರಿಲೀಸ್‌ ಆಗ್ತಿರುವ ಬೆನ್ನಲ್ಲೇ ಅಲ್ಲು ಅರ್ಜುನ್‌ ಪುತ್ರ ಅಯಾನ್‌ ಅಪ್ಪನಿಗೆ ಶುಭಾಶಯ ತಿಳಿಸಿದ್ದಾನೆ. ತನ್ನದೇ ಸ್ಟೈಲ್‌ನಲ್ಲಿ ಅಯಾನ್‌ ವಿಶ್‌ ಮಾಡಿದ್ದಾನೆ. ಪೆನ್ಸಿಲ್‌ನಿಂದ ಪುಷ್ಪ ಚಿತ್ರದಲ್ಲಿನ ಅಲ್ಲು ಅರ್ಜುನ್ ಭಾವಚಿತ್ರ ಬರೆದು. ಪುಷ್ಪ ರಿಲೀಸ್‌ '17-12-2021 ಆಲ್‌ ದಿ ಬೆಸ್ಟ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್' ಎಂದು ಬರೆದಿದ್ದಾನೆ. ಇದನ್ನು ಕಂಡು ದಿಲ್ ಖುಷ್ ಆದ ಅಪ್ಪ ಅಲ್ಲು ಅರ್ಜುನ್‌ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ''ಥ್ಯಾಂಕ್ ಯು ಸೋ ಮಚ್ ಮೈ ಚಿನ್ನಿ ಬಾಬು' ಎಂದು ಬರೆದು ಕೊಂಡಿದ್ದಾರೆ. ಅಯಾನ್ ಬರೆದಿರುವ ಈ ಸಂದೇಶಕ್ಕೆ ಎಲ್ಲರೂ ಮನಸೋತಿದ್ದಾರೆ. ಸಿನಿಮಾ ಮಂದಿಯಿಂದ ಹಿಡಿದು ಅವರ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅಲ್ಲು ಅರ್ಜುನ್ ಮಗಳು ಆರ್ಹ ಮತ್ತು ಮಗ ಅಯಾನ್ ಇಬ್ಬರು ಕೂಡ ಈ ಪುಟ್ಟ ವಯಸ್ಸಿನಲ್ಲೇ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಅರ್ಹ ಸಮಂತಾ ಅಭಿನಯದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಇನ್ನು ಅಯಾನ್ ಇತ್ತೀಚೆಗೆ ತೆಲುಗಿನ 'ಗಣಿ' ಸಿನಿಮಾದ ಪ್ರಮೋಷ್‌ನ್ ವೀಡಿಯೋದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ. ಈ ಮಕ್ಕಳ ತುಂಟಾಟದ ಪೋಟೊ ಮತ್ತು ವೀಡಿಯೊಗಳನ್ನು ಅಲ್ಲು ಅರ್ಜುನ್‌ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಹಾಗಾಗಿ ಈ ಮುದ್ದು ಮಕ್ಕಳಿಗೆ ಪ್ರತ್ಯೇಕ ಅಭಿಮಾನಿ ಬಳಗ ಇದೆ.

More from Filmibeat

English summary
Cute And Special Wishes To Allu Arjun By His Son Ayaan, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X