twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ಅವರಿಂದಾಗಿ ಸಾವಿರಾರು ಜೀವ ಉಳಿಯಿತು: 'ಎನ್‌ಕೌಂಟರ್' ವಿಶ್ವನಾಥ್ ಸಿ ಸಜ್ಜನರ್

    |

    ವಿಶ್ವನಾಥ್ ಸಿ ಸಜ್ಜನರ್ ಹೆಸರು ಬಹಳ ಮಂದಿ ಮರೆತಿರಲಿಕ್ಕಿಲ್ಲ. ತೆಲಂಗಾಣ ಯುವತಿಯೊಬ್ಬರನ್ನು ಅತ್ಯಾಚಾರ ಮಾಡಿದ ಮೂವರನ್ನು ಅತ್ಯಾಚಾರ ನಡೆದ ಸ್ಥಳದಲ್ಲಿಯೇ ಗುಂಡು ಹೊಡೆದು ಕೊಂದ ಕರ್ನಾಟಕ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಿ ಸಜ್ಜನರ್.

    Recommended Video

    ಚಿರಂಜೀವಿಯಿಂದ ಸಾವಿರ ಜನರು ದಾನಿಗಳು ಸಿಕ್ಕಿದ್ರು | Vishwanath C Sajjanar | Chiranjeevi

    ಸೈಬರಾಬಾದ್ ನ ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಜ್ಜನರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಮನಸಾರೆ ಹೊಗಳಿದ್ದಾರೆ. ಚಿರಂಜೀವಿ ಅವರಿಂದಾಗಿ ಸಾವಿರಾರು ಮಂದಿಯ ಜೀವ ಉಳಿಯುವಂತಾಯಿತು ಎಂದಿದ್ದಾರೆ ವಿಶ್ವನಾಥ್ ಸಿ ಸಜ್ಜನರ್.

    ಸೈಬರಾಬಾದ್ ಪೊಲೀಸ್ ಕ್ರೀಡಾಕೂಟ ಸಂದರ್ಭದಲ್ಲಿ ಮಾತನಾಡಿದ ವಿಸಿ ಸಜ್ಜನರ್, 'ಚಿರಂಜೀವಿ ಅವರು ನೀಡಿದ ಕರೆಯಿಂದಾಗಿ ಹೆಚ್ಚು ಹೆಚ್ಚು ಮಂದಿ ಪ್ಲಾಸ್ಮಾ ದಾನ ಮಾಡಿದರು. ಸೈಬರಾಬಾದ್ ಪೊಲೀಸರು ಸಹ ಪ್ಲಾಸ್ಮಾ ದಾನ ಮಾಡುವ ಜೊತೆಗೆ, ಪ್ಲಾಸ್ಮಾ ದಾನಿಗಳಿಂದ ವ್ಯವಸ್ಥಿತವಾಗಿ ಪ್ಲಾಸ್ಮಾ ಪಡೆಯಲು ವೈದ್ಯಕೀಯ ಸಿಬ್ಬಂದಿಗೆ ನೆರವಾದರು' ಎಂದರು.

    ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಯಿತು: ಸಜ್ಜನರ್

    ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಯಿತು: ಸಜ್ಜನರ್

    'ಚಿರಂಜೀವಿ ಅವರು ಮಾಡಿದ ಮನವಿಯಿಂದಾಗಿ ಎಂಟು ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದರು. ಅದರಿಂದಾಗಿ ಸಾವಿರಾರು ಮಂದಿಯ ಜೀವ ಉಳಿಸಲು ಸಾಧ್ಯವಾಯಿತು' ಎಂದಿದ್ದಾರೆ ವಿಸಿ ಸಜ್ಜನರ್.

    ಚಿರಂಜೀವಿ ಸಹೋದರ ಸಹ ದಾನ ಮಾಡಿದ್ದರು

    ಚಿರಂಜೀವಿ ಸಹೋದರ ಸಹ ದಾನ ಮಾಡಿದ್ದರು

    ಕೊರೊನಾ ಹೆಚ್ಚಿಗಿದ್ದ ಸಮಯದಲ್ಲಿ ನಟ ಚಿರಂಜೀವಿ ಅವರು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದ್ದರು. ಅಂತೆಯೇ ಹಲವಾರು ಮಂದಿ ಪ್ಲಾಸ್ಮಾ ದಾನ ಮಾಡಿದ್ದರು. ಚಿರಂಜೀವಿ ಸಹೋದರ ನಾಗಬಾಬು ಹಾಗೂ ಕುಟುಂಬದವರು ಸಹ ಪ್ಲಾಸ್ಮಾ ದಾನ ಮಾಡಿದ್ದರು. ರಾಜಮೌಳಿ ಸಹ ಪ್ಲಾಸ್ಮಾ ದಾನ ಮಾಡಿದ್ದರು.

    'ಪೊಲೀಸರಿಗಾಗಿ ಅಲ್ಲೂರಿ ಸೀತಾರಾಮ ರಾಜು ಪಾತ್ರ'

    'ಪೊಲೀಸರಿಗಾಗಿ ಅಲ್ಲೂರಿ ಸೀತಾರಾಮ ರಾಜು ಪಾತ್ರ'

    ಇದೇ ಕ್ರೀಡಾಕೂಟದ ಕಾರ್ಯಕ್ರಮದ ಮತ್ತೊಂದು ಕಾರ್ಯಕ್ರಮದಲ್ಲಿ ನಟ ರಾಮ್ ಚರಣ್ ತೇಜ ಸಹ ಭಾಗವಹಿಸಿದ್ದರು. ಪೊಲೀಸರಿಗಾಗಿಯೇ ತಾವು ಆರ್‌ಆರ್‌ಆರ್ ಸಿನಿಮಾದ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದರು.

    ಚಿರಂಜೀವಿ, ರಾಮ್ ಚರಣ್ ಗೆ ಸನ್ಮಾನ

    ಚಿರಂಜೀವಿ, ರಾಮ್ ಚರಣ್ ಗೆ ಸನ್ಮಾನ

    ನಟ ಚಿರಂಜೀವಿ ಅವರಿಗೆ ಸೈದರಾಬಾದ್ ಪೊಲೀಸರ ವತಿಯಿಂದ ಸನ್ಮಾನ ಮಾಡಲಾಯಿತು. ನಟ ರಾಮ್ ಚರಣ್ ತೇಜ ಅವರಿಗೂ ಸನ್ಮಾನ ಮಾಡಲಾಯಿತು. ಅತ್ಯಾಚಾರಿಗಳ ಎನ್‌ಕೌಂಟರ್ ಬಳಿಕ ವಿಶ್ವನಾಥ್ ಸಿ ಸಜ್ಜನರ್ ಅವರಿಗೆ ಬಹು ದೊಡ್ಡ ಜನಪ್ರಿಯತೆ ಪ್ರಾಪ್ತವಾಗಿದೆ.

    English summary
    Cyberabad police commissioner Vishwanath C Sajjanar praised Chiranjeevi. He said due to Chiranjeevi's call more than 8000 people donated Plasma.
    Thursday, February 4, 2021, 14:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X