For Quick Alerts
  ALLOW NOTIFICATIONS  
  For Daily Alerts

  ವರ್ಮಾ ಫ್ಯಾನ್ಸ್‌ಗೆ ನಿರಾಸೆ: 'ಡಿ ಕಂಪನಿ' ಬಿಡುಗಡೆ ಮುಂದೂಡಿದ ಆರ್‌ಜಿವಿ

  |

  ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಭಾರಿ ನಿರೀಕ್ಷೆಯ ಸಿನಿಮಾ 'ಡಿ ಕಂಪನಿ' ಮಾರ್ಚ್ 26 ರಂದು ತೆರೆಗೆ ಬರಲು ಸಜ್ಜಾಗಿತ್ತು. ಆದರೆ ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆ ಕಾಣುತ್ತಿರುವುದರಿಂದ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ.

  ಡಿ ಕಂಪನಿ ಚಿತ್ರವನ್ನು ಮುಂದೂಡಲಾಗಿದೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ.

  'ಕನ್ನಡ ಇಂಡಸ್ಟ್ರಿಯ ತಾಕತ್ ಜಗತ್ತಿಗೆ ಗೊತ್ತಾಯ್ತು': ರಾಜಮೌಳಿಗೆ ಗುನ್ನ ಕೊಟ್ಟ ವರ್ಮಾ'ಕನ್ನಡ ಇಂಡಸ್ಟ್ರಿಯ ತಾಕತ್ ಜಗತ್ತಿಗೆ ಗೊತ್ತಾಯ್ತು': ರಾಜಮೌಳಿಗೆ ಗುನ್ನ ಕೊಟ್ಟ ವರ್ಮಾ

  ''ದೇಶದ ನಾನಾ ಭಾಗದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆ, ಮತ್ತೆ ಲಾಕ್‌ಡೌನ್ ಆಗುವ ಸೂಚನೆ ಇದಾಗಿರುವುದರಿಂದ ಡಿ ಕಂಪನಿ ಚಿತ್ರದ ಬಿಡುಗಡೆ ಮುಂದೂಡುತ್ತಿದ್ದೇವೆ. ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಿದ್ದೇವೆ'' ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

  ಡಿ ಕಂಪನಿ ಸಿನಿಮಾದ ನೋಡಬೇಕು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಇದು ನಿರಾಸೆ ತಂದಿದೆ. ಅಂದ್ಹಾಗೆ, ಡಿ ಕಂಪನಿ ಸಿನಿಮಾ ಸಂಪೂರ್ಣವಾಗಿ ಅಂಡರ್‌ವರ್ಲ್ಡ್ ಕಥೆ ಹೊಂದಿದ್ದು, ಡಾನ್ ದಾವೂದ್ ಇಬ್ರಾಹಿಂ ಜೀವನ ಕಥೆ ಆಧರಿಸಿ ತಯಾರಾಗಿದೆ.

  ಅಶ್ವತ್ ಕಾಂತ್ ಚಿತ್ರದ ಪ್ರಮುಖ ಪಾತ್ರದಲ್ಲಿ (ದಾವೂದ್ ಇಬ್ರಾಹಿಂ) ನಟಿಸಿದ್ದಾರೆ. ಈ ಹಿಂದೆ ಫಿಲ್ಮಿಬೀಟ್ ಇಂಗ್ಲೀಷ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಆರ್‌ಜಿವಿ ''ಡಿ ಕಂಪನಿ ಕೇವಲ ದಾವೂದ್ ಜೀವನ ಕಥೆ ಮಾತ್ರವಲ್ಲ, ಅವನ ನೆರಳಿನಲ್ಲಿ ಜೀವಿಸಿದ ವ್ಯಕ್ತಿಗಳ ಬದುಕು ಮತ್ತು ಸಾವಿನ ಕಥೆ'' ಎಂದಿದ್ದರು.

  'ದಿಶಾ ಎನ್‌ಕೌಂಟರ್' ಸಿನಿಮಾಕ್ಕೆ ಸೆನ್ಸಾರ್ ನಿರಾಕರಣೆ'ದಿಶಾ ಎನ್‌ಕೌಂಟರ್' ಸಿನಿಮಾಕ್ಕೆ ಸೆನ್ಸಾರ್ ನಿರಾಕರಣೆ

  ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಟಗರು ಪುಟ್ಟಿ | Manvitha Kamath | Filmibeat Kannada

  'ಡಿ ಕಂಪನಿ' ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸ್ಪಾರ್ಕ್ ಪ್ರೊಡಕ್ಷನ್ ಅಡಿಯಲ್ಲಿ ಸಾಗರ್ ಮಚನೂರು ನಿರ್ಮಿಸಿದ್ದಾರೆ. ಪೌಲ್ ಪ್ರವೀಣ್ ಸಂಗೀತ ಒಳಗೊಂಡಿದೆ.

  English summary
  Ram Gopal Varma's D Company movie postponed due to spike in Coronavirus cases.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X