For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಬಳಿಕ ಡಾಲಿಗೆ ತೆಲುಗಿನಿಂದ ಮತ್ತೊಂದು ಅವಕಾಶ

  |

  ನಟ ಡಾಲಿ ಧನಂಜಯ್ ಕನ್ನಡದ ಪ್ರತಿಭಾನ್ವಿತ ನಾಯಕ ನಟರಲ್ಲಿ ಒಬ್ಬರು. ಸಾಲು-ಸಾಲು ಉತ್ತಮ ಸಿನಿಮಾಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಜೊತೆಗೆ ನಟರಾಗಿ ತಾವೂ ಇನ್ನಷ್ಟು-ಮತ್ತಷ್ಟು ಬೆಳೆಯುವ ಯತ್ನದಲ್ಲಿದ್ದಾರೆ.

  ಡಾಲಿ ಧನಂಜಯ್ ಅಭಿನಯ ಪ್ರತಿಭೆಗೆ ಕನ್ನಡ ಸಿನಿಮಾ ಪ್ರೇಕ್ಷಕರು, ನಿರ್ದೇಶಕ ನಿರ್ಮಾಪಕರು ಮಾತ್ರವಲ್ಲ ಪರಭಾಷೆಯ ಸಿನಿಮಾ ಕರ್ಮಿಗಳೂ ಮಾರು ಹೋಗಿದ್ದಾರೆ. ಹಾಗಾಗಿ ಈ ಡಾಲಿಗಾಗಿ ತಮ್ಮ ಸಿನಿಮಾಗಳಲ್ಲಿಯೂ ಪಾತ್ರ ಸೃಷ್ಟಿಸಿ ಅವಕಾಶ ನೀಡುತ್ತಿದ್ದಾರೆ.

  ಇದೀಗ ಹೊಸದೊಂದು ತೆಲುಗು ಸಿನಿಮಾದಿಂದ ಡಾಲಿ ಧನಂಜಯ್‌ಗೆ ಬುಲಾವ್ ಬಂದಿದೆ. ಡಾಲಿ ಧನಂಜಯ್‌ರ 26 ನೇ ಸಿನಿಮಾ ತೆಲುಗಿನ ಸಿನಿಮಾ ಆಗಿರಲಿದೆ. ತೆಲುಗಿನ ಜನಪ್ರಿಯ ನಟ ಸತ್ಯದೇವ್ ಕಂಚರಾನ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  ಸತ್ಯದೇವ್ ಕಂಚನಾರ ಸಹ ತೆಲುಗಿನ ಯುವ ನಾಯಕ ನಟರಾಗಿದ್ದು ಅವರಿಗೂ ಇದು 26ನೇ ಸಿನಿಮಾ ಆಗಿರುವುದು ವಿಶೇಷ. ಸತ್ಯದೇವ್-ಡಾಲಿ ಧನಂಜಯ್ ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಇವರು 'ಪೆಂಗ್ವಿನ್' ಸಿನಿಮಾ ನಿರ್ದೇಶಿಸಿದ್ದರು.

  ಡಾಲಿ ಹಾಗೂ ಸತ್ಯದೇವ್ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಕತೆಯನ್ನು ಒಳಗೊಂಡಿರಲಿದೆ. ಈ ಸಿನಿಮಾದಲ್ಲಿ ಡಾಲಿಯವರದ್ದು ವಿಲನ್ ಪಾತ್ರವೊ ಅಥವಾ ನಾಯಕನ ಪಾತ್ರವೊ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿನಿಮಾದ ಹೆಸರು ಸಹ ಇನ್ನೂ ರಿವೀಲ್ ಮಾಡಲಾಗಿಲ್ಲ. ಶೀಘ್ರದಲ್ಲಿಯೇ ಸಿನಿಮಾದ ಹೆಸರನ್ನು ಸಿನಿಮಾ ತಂಡ ಘೋಷಿಸಲಿದೆ.

  ಡಾಲಿ ಧನಂಜಯ್‌ಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ ಈ ಹಿಂದೆ ತೆಲುಗಿನ 'ಭೈರವ ಗೀತ' ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. ಆ ಬಳಿಕ ಸೂಪರ್ ಹಿಟ್ ಸಿನಿಮಾ 'ಪುಷ್ಪ'ನಲ್ಲಿ ಅಲ್ಲು ಅರ್ಜುನ್ ಎದುರು ವಿಲನ್ ಆಗಿ ನಟಿಸಿದ್ದರು. 'ಪುಷ್ಪ 2' ಸಿನಿಮಾದಲ್ಲಿಯೂ ಡಾಲಿ ನಟಿಸಲಿದ್ದಾರೆ. 'ಪುಷ್ಪ 2' ಸಿನಿಮಾದಲ್ಲಿ ಡಾಲಿ ಧನಂಜಯ್ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇರಲಿದೆ ಎನ್ನಲಾಗುತ್ತಿದೆ.

  ಕನ್ನಡ ಚಿತ್ರರಂಗದಲ್ಲಂತೂ ಡಾಲಿ ಬಹಳ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಡಾಲಿ ನಟನೆಯ 'ಮಾನ್ಸೂನ್ ರಾಗ' ಸಿನಿಮಾ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಗಳಿಸಿಕೊಂಡಿದೆ. ಅದರ ಬೆನ್ನಲ್ಲೆ ಅವರದ್ದೇ ನಿರ್ಮಾಣದ 'ಹೆಡ್ಡು ಬುಷ್' ಸಿನಿಮಾದ ಪ್ರಚಾರ ಆರಂಭಿಸಿದ್ದಾರೆ. ಆ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಕಾರ್ತಿಕ್ ಗೌಡ ನಿರ್ಮಾಣದ 'ಹೊಯ್ಸಳ' ಸಿನಿಮಾದ ಚಿತ್ರೀಕರಣವೂ ಸಾಗಿದೆ. ಇನ್ನೊಂದು ಹೊಸ ಸಿನಿಮಾವನ್ನು ಸಹ ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಡಾಲಿ ಬಹಳ ಬ್ಯುಸಿಯಾಗಿದ್ದಾರೆ.

  English summary
  Kannada actor Daali Dhananjay acting in new Telugu movie which is directing by Eshwar Karthik. Sathya Dev also acting in that movie.
  Wednesday, September 21, 2022, 8:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X