ಪುಷ್ಪ ಚಿತ್ರದ ಮತ್ತೊಂದು ಪಾತ್ರ ಪರಿಚಯ: ಹೇಗಿದ್ದಾಳೆ ಗೊತ್ತಾ ದಾಕ್ಷಾಯಿಣಿ!

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಡಿಸೆಂಬರ್ 17ಕ್ಕೆ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿದೆ. ಈಗಾಗಲೇ ಪುಷ್ಪ ಫಸ್ಟ್‌ ಲುಕ್‌ನಿಂದ ಹಿಡಿದು, ಸಾಂಗ್ ಟೀಸರ್ ಟ್ರೇಲರ್‌ ಮತ್ತು ಪಾತ್ರಗಳ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇದೀಗ ಪುಷ್ಪ ಸಿನಿಮಾದ ಮತ್ತೊಂದು ಪಾತ್ರ ಪರಿಚಯವನ್ನು ಮಾಡಿಕೊಟ್ಟಿದೆ ಚಿತ್ರ ತಂಡ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಈ ದಾಕ್ಷಾಯಣಿ ಪಾತ್ರ ಕೂಡ ಒಂದು.

ದಾಕ್ಷಾಯಣಿ ಪಾತ್ರದ ಪೋಸ್ಟರ್ ರಿಲೀಸ್‌ ಆಗಿದೆ. ಪೋಸ್ಟರ್‌ ಈ ಪಾತ್ರದ ಬಗ್ಗೆ ಕುತೂಹಲ ಕೆರಳಿಸುತ್ತದೆ. ಸಿನಿಮಾದಲ್ಲಿ ಈ ಪಾತ್ರ ಹೇಗಿರಬಹುದು ಎನ್ನುವ ನಿರೀಕ್ಷೆ ಹುಟ್ಟು ಹಾಕುತ್ತದೆ. ದಾಕ್ಷಾಯಣಿ ಆಗಿ ತೆಲುಗು ಟಿವಿ ನಿರೂಪಕಿ ಮತ್ತು ನಟಿ ಅನಸೂಯ ಪಾತ್ರವನ್ನು ಮಾಡಿದ್ದಾರೆ. ಅನಸೂಯ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಾಕ್ಷಾಯಣಿ ಕುರ್ಚಿ ಮೇಲೆ ಕುಳಿತುಕೊಂಡು ದುಬಾರಿ ಒಡವೆಗಳನ್ನು ತೊಟ್ಟು, ದುಬಾರಿ ಸೀರೆಯುಟ್ಟು ಯಾರನ್ನೋ ದುರುಗುಟ್ಟಿ ನೋಡುತ್ತಾ ಇದ್ದಾಳೆ.

ಈ ಪೋಸ್ಟರ್ ನೋಡಿದರೆ ಪಾತ್ರದ ಬಗ್ಗೆ ಒಂದಷ್ಟು ಸುಳಿವುಗಳು ಸಿಗುತ್ತವೆ. ಇದು ಚಿತ್ರದ ಅತಿ ಮುಖ್ಯ ಪಾತ್ರ ಎಂದು ಗೊತ್ತಾಗುತ್ತದೆ. ಊರ ಗೌಡತಿ ಅಥವಾ ಒಂದು ಊರಿನ ಮುಖ್ಯಸ್ಥರ ಕುಟುಂಬಕ್ಕೆ ಸೇರಿದವಳು ದಾಕ್ಷಾಯಣಿ ಅನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಬಹುಶಃ ಇದು ಸಿನಿಮಾದಲ್ಲಿನ ಖಳರ ಪಾತ್ರಗಳಲ್ಲಿ ಒಂದು ಇರಬಹುದು ಅಂತ ಊಹಿಸ ಬಹುದು. ಯಾಕೆಂದರೆ ಅಲ್ಲು ಅರ್ಜುನ್ ರಕ್ತಚಂದನ ಸಾಗಣೆ ಮಾಡುವ ಸಾಮಾನ್ಯ ಹಳ್ಳಿಗನಂತೆ ಕಾಣಿಸಿ ಕೊಂಡಿದ್ದಾರೆ.

Dakshayani Character Revealed From The Movie Pushpa

ನಟಿ ರಶ್ಮಿಕಾ ಮಂದಣ್ಣ ಕೊಡ ಹಳ್ಳಿ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಹಳ್ಳಿಯ ಮುಖ್ಯಸ್ಥೆ ಅಥವಾ ಹಳ್ಳಿ ಸಮುದಾಯವನ್ನು ಆಳುವ ಮನೆತನಕ್ಕೆ ಸೇರಿದ ಪಾತ್ರ ದಾಕ್ಷಾಯಣಿ ಎಂದು ಊಹಿಸಬಹುದು. ಆದರೆ ಈ ಪಾತ್ರ ಸಿನಿಮಾದಲ್ಲಿ ಹೇಗೆ ಮೂಡಿ ಬಂದಿದೆ ಎನ್ನುವುದು ಚಿತ್ರ ರಿಲೀಸ್ ಬಳಿಕವೇ ಗೊತ್ತಾಗಲಿದೆ. ಇನ್ನು ಇತ್ತೀಚೆಗೆ ಸುನಿಲ್ ಪಾತ್ರದ ಪೋಸ್ಟರ್ ಕೂಡ ಪುಷ್ಪ ಚಿತ್ರ ತಂಡ ರಿಲೀಸ್ ಮಾಡಿದೆ. ಹಾಸ್ಯ ನಟ ಸುನಿಲ್ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಸುನಿಲ್ ಪಾತ್ರದ ಜೊತೆಗೆ ಈ ದಾಕ್ಷಾಯಣಿ ಪಾತ್ರಕ್ಕೆ ಲಿಂಕ್ ಇರಬಹುದು ಎನ್ನುವ ಸೂಚನೆಗಳು ಕೂಡ ಸಿಕ್ಕಿದೆ.

ಪುಷ್ಪ ಚಿತ್ರಕ್ಕೆ ಮೈತ್ರಿ ಮೂವೀಸ್ ಬಂಡವಾಳ ಹೂಡಿದೆ. ಅದ್ಧೂರಿ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ. ಸಾಕಷ್ಟು ಕಲಾವಿದರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. 2021ರ ಡಿಸೆಂಬರ್ 17ರಂದು ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೇಲರ್, ಟೀಸರ್ ಮತ್ತು ಹಾಡುಗಳು ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆಯನ್ನು ಹುಟ್ಟು ಹಾಕಿವೆ.

"ಅಲಾ ವೈಕುಂಠ ಪುರಮುಲೊ" ಸಿನಿಮಾದ ಬಳಿಕ ಅಲ್ಲು ಅರ್ಜುನ್ ಕೈಗೆತ್ತಿ ಕೊಂಡಿರುವ ಸಿನಿಮಾ "ಪುಷ್ಪ". ಹಾಗಾಗಿ "ಅಲಾ ವೈಕುಂಠ ಪುರಮುಲೊ" ಚಿತ್ರದ ಯಶಸ್ಸನ್ನು ಮೀರಿಸುವಂತಹ ಸಕ್ಸಸ್ ಪಡೆದುಕೊಳ್ಳುವ ಸವಾಲು ಕೂಡ ಅಲ್ಲುಅರ್ಜುನ್ ಮುಂದೆ ಇದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಡಿನಲ್ಲಿ ರಕ್ತಚಂದನ ಕಳ್ಳ ಸಾಗಣೆ ಮಾಡುವ ವ್ಯಕ್ತಿಯ ರೀತಿಯಲ್ಲಿ ಅಲ್ಲು ಅರ್ಜುನ್ ಟೀಸರ್ ನಲ್ಲಿ ಕಾಣಿಸಿ ಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರ ಹೇಗಿರುತ್ತೆ. ರಶ್ಮಿಕಾ ಅಲ್ಲುಅರ್ಜುನ್ ಕಾಂಬಿನೇಷನ್ ಹೇಗೆ ಮೂಡಿ ಬಂದಿದೆ. ಈ ಪಾತ್ರಗಳೊಂದಿದೆ. ಸುನಿಲ್, ಫಹಾದ್‌ ಫಾಸಿಲ್, ಧನಂಜಯ್, ಅನುಸೂಯ ಪಾತ್ರಗಳು ಹೇಗೆ ಬಿಂಬಿತ ಆಗಿವೆ ಅನ್ನುವುದು ಸಿನಿಮಾ ರಿಲೀಸ್ ಬಳಿಕ ಗೊತ್ತಾಗಲಿದೆ.

More from Filmibeat

English summary
Allu Arjun Starerr Pushpa Movie Introduced Dakshayani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X