ಬಿಗ್‌ ಬಾಸ್ ಮನೆ ಪ್ರವೇಶಿಸುತ್ತಿರುವ ದರ್ಶನ್ ಸಿನಿಮಾ ನಾಯಕಿ

ಕೊರೊನಾ ನಡುವೆಯೇ ಕಿರುತೆರೆಯ ಹಲವು ಧಾರಾವಾಹಿಗಳು ಚಿತ್ರೀಕರಣ ಮಾಡಿ ಎಪಿಸೋಡ್‌ಗಳನ್ನು ಪ್ರಸಾರ ಮಾಡುತ್ತಿವೆ. ಇದರ ನಡುವೆ ಬಿಗ್‌ಬಾಸ್ ಕಾರ್ಯಕ್ರಮವನ್ನು ಸಹ ನಡೆಸುವ ನಿರ್ಧಾರ ಮಾಡಲಾಗಿದೆ.

Recommended Video

ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

ಹೌದು, ತೆಲುಗಿನಲ್ಲಿ ಬಿಗ್‌ಬಾಸ್ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ. ನಾಗಾರ್ಜುನ ಈ ಬಾರಿ ಬಿಗ್‌ಬಾಸ್ ನಿರೂಪಕರ ಜವಾಬ್ದಾರಿಯನ್ನು ಹೊರಲಿದ್ದು, ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ತೆಲುಗಿನಲ್ಲಿ ಪ್ರಾರಂಭವಾಗಲಿದೆಯಂತೆ.

ದರ್ಶನ್‌ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡಿದ್ದ ನಟಿ ಸಹ ತೆಲುಗಿನ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಲಿದ್ದಾರೆ. ಈ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿದ್ದು, ನಾಯಕ ನಟಿ ಪಕ್ಕಾ ಬಿಗ್‌ಬಾಸ್ ಮನೆ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ದರ್ಶನ್ ಗೆ ನಾಯಕಿಯಾಗಿ ನಟನೆ

ದರ್ಶನ್ ಗೆ ನಾಯಕಿಯಾಗಿ ನಟನೆ

'ತಂಗಿಗಾಗಿ' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸಿದ್ದ ಪೂನಂ ಬಜ್ವಾ ಈ ಬಾರಿ ತೆಲುಗು ಬಿಗ್‌ಬಾಸ್‌ ರಿಯಾಲಿಟಿ ಶೋನ ಸ್ಪರ್ಧಿ ಆಗಿರಲಿದ್ದಾರೆ. ಈ ಬಾರಿಯ ತೆಲುಗು ಬಿಗ್‌ಬಾಸ್‌ ಮನೆಯ ಪ್ರಮುಖ ಸ್ಪರ್ಧಿ ಇವರೇ ಆಗಿರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

ತಂಗಿಗಾಗಿ ಮಾತ್ರವಲ್ಲದೆ ಇನ್ನೂ ಎರಡು ಕನ್ನಡ ಸಿನಿಮಾದಲ್ಲಿ ಪೂನಂ ಬಜ್ವಾ ನಟಿಸಿದ್ದಾರೆ. ಶಿಕಾರಿ ಮತ್ತು ಮಸ್ತ್ ಮೊಹಬ್ಬತ್ ಎಂಬ ಕನ್ನಡ ಸಿನಿಮಾಗಳಲ್ಲಿ ಪೂನಂ ಬಣ್ಣ ಹಚ್ಚಿದ್ದಾರೆ. ನಾಗಾರ್ಜುನ ಜೊತೆಗೆ ಬಾಸ್, ಅಲ್ಲು ಅರ್ಜುನ್ ಅವರ ಪರುಗು, ಬಾಲಕೃಷ್ಣ ಜೊತೆ ಎನ್‌ಟಿಆರ್ ಕಥಾನಾಯಕುಡು ಸಿನಿಮಾಗಳಲ್ಲಿ ನಟಿಸಿದ್ದಾರೆ ಪೂನಂ.

ನಾಗಾರ್ಜುನ ನಿರೂಪಕರಾಗಿ ಫಿಕ್ಸ್

ನಾಗಾರ್ಜುನ ನಿರೂಪಕರಾಗಿ ಫಿಕ್ಸ್

ತೆಲುಗು ಬಿಗ್‌ಬಾಸ್‌ 4 ನೇ ಸೀಸನ್ ಇದಾಗಿದ್ದು, ನಾಗಾರ್ಜುನ ಅವರೇ ನಿರೂಪಕರಾಗಿ ಬಹುತೇಕ ಫಿಕ್ಸ್ ಆಗಿದ್ದಾರೆ. ಇನ್ನುಳಿದಂತೆ ತೆರೆ ಹಿಂದಿನ ಕೆಲಸಗಳು ವೇಗದಿಂದ ನಡೆಯುತ್ತಿದ್ದು, ಸಂಪೂರ್ಣ ಅನ್‌ಲಾಕ್ ಆಗುವ ಮುನ್ನವೇ ಬಿಗ್‌ಬಾಸ್‌ 4 ಅನ್ನು ಕಿರುತೆರೆಗೆ ತರಲು ಯೋಜನೆ ರೂಪಿಸಲಾಗಿದೆ.

ಗ್ಲಾಮರ್ ತುಂಬುವ ಯತ್ನ

ಗ್ಲಾಮರ್ ತುಂಬುವ ಯತ್ನ

ಪೂನಂ ಹೊರತುಪಡಿಸಿ ಕಾರ್ಯಕ್ರಮಕ್ಕೆ ಗ್ಲಾಮರ್ ತುಂಬುವ ಉದ್ದೇಶದಿಂದ ಯಾಮಿನಿ ಭಾಸ್ಕರ್, ಹಂಸನಂದಿನಿ, ಶ್ರದ್ಧಾ ದಾಸ್ ಸೇರಿ ಇನ್ನೂ ಕೆಲವು ವಿವಾದಾತ್ಮಕ ವ್ಯಕ್ತಿಗಳನ್ನು ಬಿಗ್‌ಬಾಸ್‌ಗೆ ಸೆಳೆಯುವ ಪ್ರಯತ್ನ ನಡೆದಿದೆ. ವರ್ಮಾ ನಿರ್ದೇಶನದ ನಗ್ನಂ ಸಿನಿಮಾ ನಾಯಕಿಯನ್ನು ಸಹ ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ.

More from Filmibeat

English summary
Darshan movie heroine Poonam Bajwa is set to enter telugu BiggBoss house. Nagarjuna will host Biggboss 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X