ರಾಬರ್ಟ್ ತೆಲುಗು ಟೀಸರ್: ರಾಮನೋ-ರಾವಣನೋ ಈ ರಾಬರ್ಟ್?
ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ತೆಲುಗು ಟೀಸರ್ ಇಂದು (ಫೆಬ್ರವರಿ 03) ಬಿಡುಗಡೆ ಆಗಿದೆ.
ಈ ಹಿಂದೆ ಕನ್ನಡದಲ್ಲಿ ಬಿಡುಗಡೆ ಆಗಿದ್ದ ಟೀಸರ್ ಅನ್ನೇ ತೆಲುಗಿನಲ್ಲಿ ಬಿಡುಗಡೆ ಮಾಡಲಾಗಿದೆ. ಅಚ್ಚರಿಯ ವಿಷಯವೆಂದರೆ ಟೀಸರ್‌ನಲ್ಲಿ ದರ್ಶನ್ ಧ್ವನಿ ಇಲ್ಲ.
'ರಾಬರ್ಟ್' ಸಿನಿಮಾದ ತೆಲುಗು ಅವತರಣಿಕೆಗೆ ಸ್ವತಃ ದರ್ಶನ್ ಅವರೇ ಧ್ವನಿ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಿಡುಗಡೆ ಆಗಿರುವ ಟೀಸರ್ ನಲ್ಲಿ ದರ್ಶನ್ ಅವರ ಧ್ವನಿ ಇಲ್ಲ. ಬದಲಿಗೆ ಬೇರೆಯವರಿಂದ ಧ್ವನಿ ಕೊಡಿಸಲಾಗಿದೆ.

ಈ ಹಿಂದೆ ಕನ್ನಡದಲ್ಲಿ ಬಿಡುಗಡೆ ಆಗಿದ್ದ ಅದೇ ಟೀಸರ್ ಗೆ ತೆಲುಗು ಧ್ವನಿ ನೀಡಿ ಇದೀಗ ತೆಲುಗಿನಲ್ಲಿ ಬಿಡುಗಡೆ ಮಾಡಲಾಗಿದೆ. ತೆಲುಗು ಟೀಸರ್ ಬಿಡುಗಡೆ ಆಗಿ ಕೇವಲ 3 ಗಂಟೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ಅನ್ನು ನೋಡಿದ್ದಾರೆ.
ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಇನ್ನೂ ಹಲವರು ನಟನೆಯ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದು, ತರುಣ್ ಸುಧೀರ್ ನಿರ್ದೇಶಿಸಿದ್ದಾರೆ.
Recommended Video
ಕೆಲವು ದಿನಗಳ ಹಿಂದಷ್ಟೆ 'ರಾಬರ್ಟ್' ಸಿನಿಮಾದ ತೆಲುಗು ಅವತರಣಿಕೆ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಪಡಿಸಿತ್ತು. ನಟ ದರ್ಶನ್ ಅವರು ಫಿಲಂ ಚೇಂಬರ್ ಗೆ ದೂರು ನೀಡಿದ ಬಳಿಕ ಆ ಸಮಸ್ಯೆ ಬಗೆಹರಿಯಿತು. ಮಾರ್ಚ್ 11 ರಂದು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರಾಬರ್ಟ್' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











