ನಟರೂ ನಾಚುವಂತೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ ಕೀರ್ತಿ ಸುರೇಶ್; ಇಷ್ಟು ಬೇಗ ಈ ವಿಡಿಯೊ ರಿಲೀಸ್ ಮಾಡುವ ಅಗತ್ಯವಿತ್ತಾ?
ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾವೆಂದರೆ ಅದು ದಸರಾ. ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಕಳೆದ ಗುರುವಾರ ಚಿತ್ರಮಂದಿರದ ಅಂಗಳಕ್ಕೆ ಬಂದ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಚಿತ್ರದಲ್ಲಿ ನಾಯಕ ಧರಣಿ ಪಾತ್ರದಲ್ಲಿ ನಾನಿ ಅದ್ಭುತವಾಗಿ ನಟಿಸಿದ್ದು, ಭಯಂಕರ ನಟನೆಗೆ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದರೆ, ದಿಯಾ ಚಿತ್ರದ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಧರಣಿ ಸ್ನೇಹಿತನ ಪಾತ್ರದಲ್ಲಿ ಮಿಂಚಿದ್ದಾರೆ.
ಇನ್ನು ಚಿತ್ರದಲ್ಲಿ ನಾಯಕಿ ವೆನ್ನೆಲಾ ಪಾತ್ರದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಿದ್ದು, ಸಿನಿ ರಸಿಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹಳ್ಳಿಯ ಅಂಗನವಾಡಿ ಶಿಕ್ಷಕಿಯಾಗಿ ಕಾಣಿಸಿಕೊಂಡಿರುವ ಕೀರ್ತಿ ಸುರೇಶ್ ಪಾತ್ರ ಮೊದಲಿಗೆ ಬಿಂದಾಸ್ ಆಗಿದ್ದು ಬಳಿಕ ಎಮೋಷನಲ್ ತಿರುವು ಪಡೆದುಕೊಳ್ಳಲಿದೆ. ಈ ಎರಡೂ ಹಂತಗಳಲ್ಲಿಯೂ ಕೀರ್ತಿ ಸುರೇಶ್ ನಟನೆ ನಿಜಕ್ಕೂ ಅದ್ಭುತ. ಈ ಹಿಂದೆ ಮಹಾನಟಿ ಮೂಲಕವೇ ತಾನೊಬ್ಬಳು ಪ್ರತಿಭಾವಂತ ನಟಿ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದ ಕೀರ್ತಿ ಸುರೇಶ್ ಇದೀಗ ದಸರಾ ಮೂಲಕವೂ ಸಹ ದೊಡ್ಡ ಮಟ್ಟದಲ್ಲಿಯೇ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ಇನ್ನು ಇಂದು ( ಏಪ್ರಿಲ್ 3 ) ದಸರಾ ಚಿತ್ರ ಐದನೇ ದಿನದ ಪ್ರದರ್ಶನವನ್ನು ಕಂಡಿದ್ದು, ಈ ದಿನ ಚಿತ್ರದ ಹೈಲೈಟ್ ದೃಶ್ಯಗಳಲ್ಲಿ ಒಂದಾಗಿರುವ ಕೀರ್ತಿ ಸುರೇಶ್ ಟಪ್ಪಾಂಗುಚ್ಚಿ ಸ್ಟೆಪ್ ವಿಡಿಯೊವನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಹೌದು, ಚಿತ್ರದಲ್ಲಿ ಕೀರ್ತಿ ಸುರೇಶ್ ವಿವಾಹದ ಸಂಭ್ರಮದಲ್ಲಿ ಹಳದಿ ಸೀರೆಯುಟ್ಟು ಥೇಟ್ ಹಳ್ಳಿ ಹುಡುಗಿಯ ಹಾಗೆ ಮಾಸ್ ಟಪ್ಪಾಂಗುಚ್ಚಿ ಹೆಜ್ಜೆ ಹಾಕಿದ್ದಾರೆ. ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ತೆರಳಿದ್ದ ಸಿನಿ ರಸಿಕರಿಗೆ ಈ ದೃಶ್ಯ ಅನಿರೀಕ್ಷಿರವೂ ಸಹ ಹೌದು.
ಇನ್ನು ಈ ದೃಶ್ಯ ಬಂದಾಗ ಸಿನಿ ರಸಿಕರು ಕಿರುಚಿ, ಶಿಳ್ಳೆ ಹಾಕಿದ್ದರು. ಚಿತ್ರ ಮುಗಿದ ನಂತರವೂ ಹಲವಾರು ಮಂದಿ ಈ ದೃಶ್ಯವನ್ನು ವಿಮರ್ಶೆಯ ಸಮಯದಲ್ಲಿ ಉಲ್ಲೇಖಿಸಿದ್ದರು. ಹೀಗೆ ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದ್ದ ಈ ದೃಶ್ಯದ ವಿಡಿಯೊವನ್ನು ಐದನೇ ದಿನಕ್ಕೆ ಬಿಡುಗಡೆಗೊಳಿಸಿದ ಕಾರಣಕ್ಕೆ ಕೆಲ ಸಿನಿ ರಸಿಕರು ಇಷ್ಟು ಬೇಗನೇ ಈ ದೃಶ್ಯವನ್ನು ಬಿಡುಗಡೆಗೊಳಿಸುವ ಅಗತ್ಯವಿತ್ತಾ ಎಂದು ಕಾಮೆಂಟ್ ಮಾಡಿದ್ದಾರೆ.

ಚಿತ್ರ ನೋಡದವರು ಈ ಪುಟ್ಟ ವಿಡಿಯೊ ನೋಡಿ ಏನ್ ಸ್ಟೆಪ್ ಹಾಕಿದ್ದಾರೆ ಕೀರ್ತಿ ಸುರೇಶ್ ಎಂದು ಆಶ್ಚರ್ಯ ಹೊರಹಾಕುತ್ತಿದ್ದರೆ, ಚಿತ್ರ ನೋಡಿರುವವರು ಈ ದೃಶ್ಯಕ್ಕೆ ಚಿತ್ರಮಂದಿರದಲ್ಲಿ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗಿತ್ತು, ಕೀರ್ತಿ ಸುರೇಶ್ ಹೊರತುಪಡಿಸಿ ಬೇರೆ ಯಾರನ್ನೂ ಸಹ ಈ ಪಾತ್ರದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











