For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಬಳಿ ಕ್ಷಮೆ ಕೇಳಿದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್‌ ವಾರ್ನರ್‌: ವಿಡಿಯೋ ಫುಲ್ ವೈರಲ್

  |

  ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ವೀವ್ ಆಗಿರ್ತಾರೆ. ಸೆಲೆಬ್ರಿಟಿಗಳ ಫೇಸ್‌ಗಳನ್ನು ತನ್ನ ಫೇಸ್‌ನಿಂದ ಮಾರ್ಫಿಂಗ್ ಮಾಡಿ ಇನ್‌ಸ್ಟಾ ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಡ್ಯಾನ್ಸ್ ವಿಡಿಯೋಗೆ ತಮ್ಮ ಮುಖ ಸೇರಿಸಿ ಕೊನೆಗೆ ಕ್ಷಮೆ ಕೇಳಿದ್ದಾರೆ.

  ಮೊದಲಿಗೆ ಬಾಲಿವುಡ್ ನಟರ ಸೂಪರ್ ಹಿಟ್ ಸಿನಿಮಾ ಡೈಲಾಗ್‌ಗಳನ್ನು, ಡ್ಯಾನ್ಸ್ ವಿಡಿಯೋಗಳನ್ನು ಮಾರ್ಫಿಂಗ್ ಮಾಡಿ ವಾರ್ನರ್ ಶೇರ್ ಮಾಡುತ್ತಿದ್ದರು. ನಂತರ ನಿಧಾನವಾಗಿ ಸೌತ್ ಸಿನಿಮಾಗಳ ವಿಡಿಯೋಗಳಿಗೆ ಕೈ ಹಾಕಿದ್ದರು. 'ಪುಷ್ಪ'ರಾಜ್ ಅಲ್ಲು ಅರ್ಜುನ್, KGF ರಾಕಿಭಾಯ್ ಸ್ಟೈಲ್‌ನಲ್ಲಿ ಡೈಲಾಗ್ ಹೇಗಿ ನೆಟ್ಟಿಗರನ್ನು ರಂಜಿಸಿದ್ದರು. ಇದೀಗ ನಾಯಕಿಯರನ್ನು ಅನುಕರಣೆ ಮಾಡಲು ಶುರು ಮಾಡಿದ್ದಾರೆ. ರಶ್ಮಿಕಾ ಮಂದಣ್ಣ , ನಿತಿನ್ ನಟನೆಯ 'ಭೀಷ್ಮ' ಚಿತ್ರದ ಡ್ಯಾನ್ಸ್ ವಿಡಿಯೋದಲ್ಲಿ ರಶ್ಮಿಕಾ ಬದಲು ತಮ್ಮ ಮುಖ ಸೇರಿಸಿ ವಿಡಿಯೋ ತೇಲಿ ಬಿಟ್ಟಿದ್ದಾರೆ.

  ಆಸ್ಪತ್ರೆಗೆ ದೌಡಾಯಿಸಿದ ರಶ್ಮಿಕಾ: ನಟಿಗೆ ಕಾಡುತ್ತಿರುವ ಸಮಸ್ಯೆಯೇನು..?ಆಸ್ಪತ್ರೆಗೆ ದೌಡಾಯಿಸಿದ ರಶ್ಮಿಕಾ: ನಟಿಗೆ ಕಾಡುತ್ತಿರುವ ಸಮಸ್ಯೆಯೇನು..?

  'ವಾಟೇ ಬ್ಯೂಟಿ' ಹಾಡಿನಲ್ಲಿ ಕೊಡಗಿನ ಚೆಲುವೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು. ಈ ವಿಡಿಯೋಗೆ ರೀ ಪೇಸ್ ಆಪ್ ಬಳಸಿ ರಶ್ಮಿಕಾ ಮುಖಕ್ಕೆ ತಮ್ಮ ಮುಖವನ್ನು ಡೇವಿಡ್‌ ವಾರ್ನರ್‌ ಎಡಿಟ್ ಮಾಡಿದ್ದಾರೆ. ಇನ್‌ಸ್ಟಾದಲ್ಲಿ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

  'ಸೋ ಸ್ವಾರಿ' ಎಂದ ಡೇವಿಡ್ ವಾರ್ನರ್

  'ಸೋ ಸ್ವಾರಿ' ಎಂದ ಡೇವಿಡ್ ವಾರ್ನರ್

  'ಸೋ ಸ್ವಾರಿ ಫರ್ ದಿಸ್ ಒನ್' ಎಂದು ಬರೆದು ಬಿದ್ದು ಬಿದ್ದು ನಗುವ ಎಮೋಜಿ ಹಾಕಿ ಡೇವಿಡ್ ವಾರ್ನರ್ ಈ ವಿಡಿಯೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಪ್ರತಿಕ್ರಿಯೆ ತಿಳಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಮಂದಣ್ಣ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹಾಗಾಗಿ ಆಕೆ ಈ ಫನ್ನಿ ವಿಡಿಯೋ ಬಗ್ಗೆ ಏನು ಹೇಳುತ್ತಾರೋ ಕಾದು ನೋಡಬೇಕು.

  ರಶ್ಮಿಕಾಳಿಗೆ ಫಲ ತಂದುಕೊಟ್ಟ ರಾಜಶ್ಯಾಮಲಾ ಭಗಳಮುಖಿ ಪೂಜೆ!ರಶ್ಮಿಕಾಳಿಗೆ ಫಲ ತಂದುಕೊಟ್ಟ ರಾಜಶ್ಯಾಮಲಾ ಭಗಳಮುಖಿ ಪೂಜೆ!

  ಅದ್ಭುತ ಬ್ಯಾಟ್ಸ್‌ಮನ್

  ಅದ್ಭುತ ಬ್ಯಾಟ್ಸ್‌ಮನ್

  ಅಂತರಾಷ್ಟ್ರೀಯ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರರಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು. ಮುಂದಿನ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ಹಾಗೂ ಟಿ-20 ವರ್ಲ್ಡ್‌ ಕಪ್‌ಗೆ ಹೆಚ್ಚಿನ ಗಮನ ಹರಿಸುವ ಕಾರಣಕ್ಕೆ ವಾರ್ನರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸುಳಿವು ಸಿಗುತ್ತಿದೆ. ಆಸ್ಟ್ರೇಲಿಯಾ ತಂಡದ ಪರ 96 ಟೆಸ್ಟ್‌ ಪಂದ್ಯಗಳಲ್ಲಿ 46.52ರ ಸರಾಸರಿಯಲ್ಲಿ 7,817 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 24 ಶತಕಗಳು ಹಾಗೂ 35 ಅರ್ಧಶತಕಗಳನ್ನು ಅವರು ಸಿಡಿಸಿದ್ದಾರೆ. ಇನ್ನು ಅಜೇಯ 335 ರನ್‌ ಡೇವಿಡ್‌ ವಾರ್ನರ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

  ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ

  ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ

  ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸಿದ 'ಗುಡ್‌ಬೈ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. 'ಮಿಷನ್ ಮಜ್ನು' ಹಾಗೂ 'ಅನಿಮಲ್' ಎನ್ನುವ ಎರಡು ದೊಡ್ಡ ಬಾಲಿವುಡ್ ಸಿನಿಮಾಗಳಲ್ಲಿ ಸಾನ್ವಿ ನಟಿಸುತ್ತಿದ್ದಾರೆ. ಇನ್ನು ಹಾಟ್ ಹಾಟ್ ಫೋಟೊಶೂಟ್‌ಗಳ ಮೂಲಕ ಚೆಲುವೆ ಮೋಡಿ ಮಾಡಿದ್ದಾರೆ.

  ಟ್ರೋಲ್‌ಗಳ ಬಗ್ಗೆ ರಶ್ಮಿಕಾ ಬೇಸರ

  ಟ್ರೋಲ್‌ಗಳ ಬಗ್ಗೆ ರಶ್ಮಿಕಾ ಬೇಸರ

  ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ನಟಿಸಲಿ, ಬಿಡಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿ ಆಗುತ್ತಿರುತ್ತಾರೆ. ಇತ್ತೀಚೆಗೆ ಈ ವಿಚಾರವಾಗಿ ಆಕೆ ನೋವು ತೋಡಿಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಸುದೀರ್ಘ ಪತ್ರ ಬರೆದಿದ್ದರು. ಕನ್ನಡ ಭಾಷೆ ಮಾತನಾಡುವುದು ಕಷ್ಟ, ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್, ವಿಜಯ್ ದೇವರಕೊಂಡ ಜೊತೆಗಿನ ಲಿಪ್ ಲಾಕ್ ಸೀನ್ ಕೊಡಗಿನ ಚೆಲುವೆ ಪದೇ ಪದೇ ಟ್ರೋಲ್ ಆಗುವುದಕ್ಕೆ ಕಾರಣ ಎಂದು ಹೇಳಲಾಗುತ್ತದೆ.

  English summary
  David Warner's morphed video of Rashmika Mandanna's Bheeshma Song Goes Viral. Australian cricketer David Warner took to Instagram to post a hilarious morphed video of Rashmika Mandanna. Know More.
  Wednesday, November 16, 2022, 9:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X