ರಶ್ಮಿಕಾ ಮಂದಣ್ಣ ಫೋಟೋಗೆ ಅಸಭ್ಯ ಕಮೆಂಟ್: ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ
ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ ಮಂದಣ್ಣ ರಶ್ಮಿಕಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋವನ್ನು ಅಪ್ ಲೋಡ್ ಮಾಡಿದ್ದರು. ಈ ಫೋಟೋಗೆ ಜಿಲ್ಲಾಧಿಕಾರಿ ಅಸಭ್ಯವಾಗಿ ಕಮೆಂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಇತ್ತೀಚಿಗೆ ರಶ್ಮಿಕಾ ಮಂದಣ್ಣ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ಸಮಾರಂಭಕ್ಕೆ ಕಿರಿಕ್ ಸುಂದರಿ ಹಸಿರು ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ನಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಸುತ್ತಿದ್ದರು. ಆ ಡ್ರೆಸ್ ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ರಶ್ಮಿಕಾ ಅವರ ಪೋಸ್ಟ್ ಗೆ ತೆಲಂಗಾಣ ಜಗಿತ್ಯಾಲ ಜಿಲ್ಲಾಧಿಕಾರಿ ರವಿ 'ಚಿಂಚಾವೋ ಪೋ' (ಹರಿದಾಕಿದೆ ಹೋಗು ರಶ್ಮಿಕಾ) ಎಂದು ಕಮೆಂಟ್ ಮಾಡಿದ್ದಾರೆ. ಇದನ್ನ ನೋಡಿದ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ದೊಡ್ಡ ಹುದ್ದೆಯಲ್ಲಿ ಇರುವ ನೀವೆ ಈ ರೀತಿ ಕಮೆಂಟ್ ಮಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಷಯ ದೊಡ್ಡದಾಗುತ್ತಿದಂತೆ ಜಿಲ್ಲಾಧಿಕಾರಿ ರವಿ ಸ್ಪಷ್ಟನೆ ನೀಡಿದ್ದಾರೆ. "ನಾನು ಈ ರೀತಿ ಕಮೆಂಟ್ ಮಾಡಿಲ್ಲ. ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ. ಯಾರೋ ಕಿಡಿಗೇಡಿಗಳು ಈ ರೀತಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೇನೆ"ಎಂದು ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಸದ್ಯ್ತೆಲುಗಿನ ಬಹುನಿರೀಕ್ಷೆಯ ಭೀಷ್ಮ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ನಟ ನಿತಿನ್ ಜೊತೆ ನಾಯಕಿಯಾಗಿ ಮಿಂಚಿದ್ದಾರೆ. ಈ ಸಿನಿಮಾ ನಾಳೆ ತೆರೆಗೆ ಬರುತ್ತಿದೆ.


Click it and Unblock the Notifications











