'ಕಲ್ಕಿ 2898 AD' ಸೀಕ್ವೆಲ್‌ನಿಂದ ದೀಪಿಕಾ ಪಡುಕೋಣೆಗೆ ಗೇಟ್ ಪಾಸ್ ಕೊಟ್ಟ ನಿರ್ಮಾಪಕರು

ಯಾವುದೇ ಸಿನಿಮಾದಲ್ಲಿ ನಟಿಸೋಕೆ ಆಯ್ಕೆ ಆಗಿದ್ದ ನಟ, ನಟಿಯರು ಬದಲಾಗುವುದು ಹೊಸದೇನು ಅಲ್ಲ. ಯಾರೋ ನಟಿಸಬೇಕಿದ್ದ ಚಿತ್ರದಲ್ಲಿ ಮತ್ಯಾರೋ ನಟಿಸಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಹೀಗೆ ಬದಲಾಗಲು ಕಾರಣ ಏನು, ಇದ್ದಕ್ಕಿದಂತೆ ಒಬ್ಬರನ್ನು ಕೈಬಿಟ್ಟು ಬೇರೊಬ್ಬರಿಗೆ ಅವಕಾಶ ಕೊಡೋದು ಯಾಕೆ ಎನ್ನುವುದು ಕೆಲವೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕುತ್ತದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಬೇಕಿತ್ತು. ಆಕೆಯ ಜೊತೆ ಮಾತುಕತೆ ಕೂಡ ನಡೆದಿತ್ತು. ಬಳಿಕ ಆಕೆಯ ಷರತ್ತುಗಳಿಗೆ ನಿರ್ದೇಶಕರು ಒಪ್ಪಲಿಲ್ಲ. ಅದೇ ಕಾರಣಕ್ಕೆ ಆಕೆಯ ಬದಲು ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಇದೀಗ 'ಕಲ್ಕಿ 2898 AD' ಸೀಕ್ವೆಲ್‌ ಚಿತ್ರದಿಂದಲೂ ದೀಪಿಕಾ ಹೊರ ಬಂದಿದ್ದಾರೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ.

Deepika Padukone Exits Kalki 2898 AD Sequel Replacement Speculation Begins

ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಹಿಟ್ ಆಗಿತ್ತು. ಪ್ರಭಾಸ್ ಜೊತೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಟಿಸಿದ್ದರು. ಈ ಪೌರಾಣಿಕ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಸುಮತಿ ಆಗಿ ಡಿಪ್ಪಿ ಗಮನ ಸೆಳೆದಿದ್ದರು. ಹೆಚ್ಚು ಹೊತ್ತು ತೆರೆಮೇಲೆ ಕಾಣಿಸದೇ ಇದ್ದರೂ ಇದ್ದಷ್ಟು ಹೊತ್ತು ಮೋಡಿ ಮಾಡಿದ್ದರು. ಗರ್ಭಿಣಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಕೂಡ ಗರ್ಭಿಣಿಯಾಗಿದ್ದ ದೀಪಿಕಾ ಸಿನಿಮಾ ಪ್ರಚಾರದಲ್ಲಿ ಕೂಡ ಭಾಗಿ ಆಗಿದ್ದರು.

ಸೀಕ್ವೆಲ್‌ನಲ್ಲಿ ಸುಮತಿ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆ. ಹಾಗಾಗಿ ದೀಪಿಕಾಗೆ ಇದು ಒಳ್ಳೆ ಅವಕಾಶ ಎಂದೇ ಕೆಲವರು ಭಾವಿಸಿದ್ದರು. ಆದರೆ ದಿಢೀರನೆ ಆಕೆ ಚಿತ್ರದಿಂದ ಹೊರ ನಡೆದಿರುವ ಬಗ್ಗೆ ಮೇಕರ್ಸ್ ಮಾಹಿತಿ ನೀಡಿದ್ದಾರೆ. ವೈಜಯಂತಿ ಮೂವೀಸ್ ಸಂಸ್ಥೆ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ "ಕಲ್ಕಿ 2898AD ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ನಟಿಸುವುದಿಲ್ಲ. ಎಲ್ಲ ವಿಷಯಗಳನ್ನು ಚರ್ಚಿಸಿ ಪರಿಗಣಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇವೆ. ಮೊದಲ ಚಿತ್ರದ ಸುದೀರ್ಘ ಪಯಣದ ನಂತರ ಕೂಡ ಸೀಕ್ವೆಲ್‌ನಲ್ಲಿ ನಾವು ಜೊತೆಗೆ ಇರಲು ಆಗುತ್ತಿಲ್ಲ. 'ಕಲ್ಕಿ 2898 AD' ಸಿನಿಮಾ ಹೆಚ್ಚಿನ ಶ್ರಮ, ಶ್ರದ್ಧೆ ಬೇಡುತ್ತದೆ. ದೀಪಿಕಾಳ ಮುಂದಿನ ಸಿನಿಮಾಗಳಿಗೆ ಒಳ್ಳೆದಾಗಲಿ" ಎಂದು ಪೋಸ್ಟ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಬದ್ಧತೆ ಬಗ್ಗೆ ಚಿತ್ರತಂಡ ಬೊಟ್ಟು ಮಾಡಿ ತೋರಿಸಿದೆ. ಈ ಹಿಂದೆ 'ಸ್ಪಿರಿಟ್' ಚಿತ್ರದ ಬಗ್ಗೆ ಚರ್ಚೆ ವೇಳೆ ತಾವು 8 ಗಂಟೆ ಮಾತ್ರ ಕೆಲಸ ಮಾಡಲು ಸಿದ್ಧ ಎಂದು ದೀಪಿಕಾ ಹೇಳಿದ್ದಾಗ ವರದಿಯಾಗಿತ್ತು. ಈಗ ಪ್ರಭಾಸ್ ಚಿತ್ರದ ವಿಷಯದಲ್ಲೂ ಡಿಪ್ಪಿ ಇದೇ ಷರತ್ತು ಹಾಕಿದ್ರಾ? ಎನ್ನುವ ಚರ್ಚೆ ಶುರುವಾಗಿದೆ. ವರ್ಷದ ಹಿಂದೆ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಗಳ ಲಾಲಾನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಡಿಪ್ಪಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.

ಮಗುವನ್ನು ನೋಡಿಕೊಳ್ಳಬೇಕು ಎನ್ನುವ ಕಾರಣ ಹೇಳಿ ದೀಪಿಕಾ ಚಿತ್ರತಂಡಗಳಿಗೆ ಷರತ್ತುಗಳನ್ನು ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಈಗ ಅವಕಾಶಗಳನ್ನು ಕೈ ಚೆಲ್ಲುವಂತಾಗಿದೆ. 'ಕಲ್ಕಿ 2898 AD' ಹೊಸ ಕಥೆ ಅಲ್ಲ, ಈಗಾಗಲೇ ಒಂದು ಸಿನಿಮಾ ಬಂದಿದೆ. ಅದೇ ಕಥೆಯನ್ನು ಮುಂದುವರೆಸಿ 2ನೇ ಭಾಗ ಕಟ್ಟಿಕೊಡಬೇಕಿದೆ. ಹಾಗಾಗಿ ಈಗಾಗಲೇ ನಟಿಸಿರುವವರೇ ತಮ್ಮ ತಮ್ಮ ಪಾತ್ರಗಳನ್ನು ಮುಂದುವರೆಸಬೇಕಿದೆ. ಹಾಗಾಗಿ ದೀಪಿಕಾ ಪಾತ್ರವನ್ನು ಯಾರು ಮುಂದುವರೆಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.

ದೀಪಿಕಾ ಬದಲು ಆಲಿಯಾ ಭಟ್, ಕಲ್ಯಾಣಿ ಪ್ರಿಯದರ್ಶನ್ ಆ ಪಾತ್ರ ಮಾಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಿದ್ದರೆ ಚಿತ್ರತಂಡ ಯಾರನ್ನು ಆಯ್ಕೆ ಮಾಡುತ್ತೆ? ಸಿನಿಮಾ ನಿಂತೇ ಹೋಗುತ್ತಾ? ಕಾದು ನೋಡಬೇಕಿದೆ.

More from Filmibeat

English summary
Deepika Padukone Steps Away from ‘Kalki 2898 AD’ Sequel, Casting Buzz Starts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X