ನಟ ಪ್ರಭಾಸ್‌ ಕಂಡು ಹೆದರಿದ್ದೇಕೆ ದೀಪಿಕಾ ಪಡುಕೋಣೆ?

ಟಾಲಿವುಡ್ ನಟ ಪ್ರಭಾಸ್ ಮತ್ತು ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಒಟ್ಟಿಗೆ ತೆರೆ ಮೇಲೆ ಬರ್ತಿದ್ದಾರೆ.

ಈ ಸೂಪರ್‌ ಸ್ಟಾರ್ ಜೋಡಿ ಈಗ ಬಿಗ್ ಸ್ಕ್ರೀನ್‌ ಮೇಲೆ ಒಂದಾಗುತ್ತಿದೆ. ಮುಂದಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಈ ಜೋಡಿ ಒಂದಾಗುತ್ತಿದೆ.

ಸದ್ಯ ಈ ಚಿತ್ರದ ಬಗ್ಗೆ ನಟಿ ದೀಪಿಕಾ ಪಡುಕೋಣೆ ಮಾತಾಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ದೀಪಿಕಾ ಪಡುಕೋಣೆ ಚಿತ್ರದ ನಿರ್ದೇಶಕ ಅಶ್ವಿನ್ ನಾಗ್ ಮತ್ತು ನಟ ಪ್ರಭಾಸ್ ಬಗ್ಗೆ ದೀಪಿಕಾ ಮಾತನಾಡಿದ್ದಾರೆ.

ಇಬ್ಬರ ಅಭಿಮಾನಿಗಳು ಸಹಜವಾಗಿಯೇ ಪ್ರಭಾಸ್ ಮತ್ತು ದೀಪಿಕಾ ನಡುವಿನ ಕೆಮಿಸ್ಟ್ರಿಯನ್ನು ತೆರೆ ಮೇಲೆ ನೋಡಲು ಕುತೂಹಲ ಇದ್ದೇ ಇರುತ್ತದೆ. ಆದರೆ ದೀಪಿಕಾ ಪ್ರಭಾಸ್ ಅವರನ್ನು ನೋಡಿ ಹೆದರಿದ್ದೆ ಎಂದಿದ್ದಾರೆ.

ಮೊದಲು ಪ್ರಭಾಸ್ ನೋಡಿ ನರ್ವಸ್ ಆಗಿದ್ದೆ: ದೀಪಿಕಾ ಪಡುಕೋಣೆ!

ಮೊದಲು ಪ್ರಭಾಸ್ ನೋಡಿ ನರ್ವಸ್ ಆಗಿದ್ದೆ: ದೀಪಿಕಾ ಪಡುಕೋಣೆ!

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಟಿ ದೀಪಿಕಾ ಪಡುಕೋಣೆ ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. "ನಾನು ನಿಜವಾಗಿಯೂ ತುಂಬಾನೇ ನರ್ವಸ್ ಆಗಿದ್ದೇನೆ. ನಾನು ಮೊದಲ ಬಾರಿಗೆ ನಟ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು. ಕ್ಯಾಮೆರಾ ಮುಂದೆ ಸ್ವಲ್ಪ ಸಮಯ ಕಳೆದ ನಂತರ ನನಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬಹುದು" ಎಂದು ಹೇಳಿದರು. ಈ ಮೂಲಕ ಮೊದಲು ಪ್ರಭಾಸ್ ಅವರ ಎದುರು ನರ್ವಸ್ ಆಗಿದ್ದನ್ನು ಬಹಿರಂಗ ಪಡಿಸಿದ್ದಾರೆ.

ಚಿತ್ರೀಕರಣ ಆರಂಭಿಸಿರುವ 'ಪ್ರಾಜೆಕ್ಟ್ ಕೆ' !

ಚಿತ್ರೀಕರಣ ಆರಂಭಿಸಿರುವ 'ಪ್ರಾಜೆಕ್ಟ್ ಕೆ' !

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಚಿತ್ರ ನಾಗ್ ಅಶ್ವಿನ್ ಅವರ 'ಪ್ರಾಜೆಕ್ಟ್ ಕೆ'. ಈ ಚಿತ್ರದ ಶೂಟಿಂಗ್ ಡಿಸೆಂಬರ್ 7 ರಂದು ಈಗಾಗಲೇ ಹೈದರಾಬಾದಿನಲ್ಲಿ ಆರಂಭ ಆಗಿದೆಯಂತೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಮಹಾನಟಿ ಚಿತ್ರದ ಬಳಿಕ ಅಶ್ವಿನ್ ನಾಗ್ ಈ ಚಿತ್ರದ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಾರೆ.

ಅದ್ಧೂರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ!

ಅದ್ಧೂರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ!

ಈಗ ಪ್ರಸ್ತುತ ಹಂತದ ಚಿತ್ರೀಕರಣದ ಮುಗಿಸಿ ಪಠಾಣ್ ಚಿತ್ರದ ಚಿತ್ರೀಕರಣಕ್ಕಾಗಿ ದೀಪಿಕಾ ಮತ್ತೆ ಮುಂಬೈಗೆ ತೆರಳಲಿದ್ದಾರಂತೆ. 'ಪ್ರಾಜೆಕ್ಟ್ ಕೆ' ಚಿತ್ರ ಅಂದಾಜು 450 ರಿಂದ 500 ಕೋಟಿ ರೂಪಾಯಿಯ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಇಲ್ಲಿ ಸೀಮಿತ ಆಗಿಲ್ಲ. ಬದಲಿಗೆ ಮತ್ತಷ್ಟು ಚಿತ್ರದ ಬಜೆಟ್ ಹೆಚ್ಚಾಗಬಹುದು ಎನ್ನಲಾಗುತ್ತಿದೆ.

ಈ ಚಿತ್ರದ ಸದ್ಯ ತಾರ ಬಳಗದಿಂದಲೆ ನಿರೀಕ್ಷೆ ಮೂಡಿಸಿದೆ. ಜೊತೆಗೆ ಭರವಸೆಯ ನಿರ್ದೇಶಕ ಅಶ್ವಿನ್ ನಿರ್ದೇಶನದ ಮೇಲು ನಿರೀಕ್ಷೆ ಇದೆ.

ರಿಲೀಸ್ ಆಗಲಿರುವ ಪ್ರಭಾಸ್ ಮುಂದಿನ ಚಿತ್ರ ರಾಧೆ ಶ್ಯಾಮ್ !

ರಿಲೀಸ್ ಆಗಲಿರುವ ಪ್ರಭಾಸ್ ಮುಂದಿನ ಚಿತ್ರ ರಾಧೆ ಶ್ಯಾಮ್ !

ನಟ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಮೊದಲ ಬಾರಿಗೆ ನಟಿ ಪೂಜಾ ಹೆಗ್ಡೆ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯಿಸುತ್ತಿರುವ 'ರಾಧೆ ಶ್ಯಾಮ್' ಪ್ರಸ್ತುತ ಭಾರತೀಯ ಸಿನಿಮಾದಲ್ಲಿ ಬಿಡುಗಡೆಗಾಗಿ ಕಾಯುತ್ತಿರುವ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಾಹೋ ಬಳಿಕ ತೆರೆಗೆ ಬರ್ತಾ ಇರುವ ಈ ಚಿತ್ರ ಪ್ರಭಾಸ್ ಸಿನಿಮಾ ಪಯಣಕ್ಕೆ ಅತಿ ಮುಖ್ಯ ಆಗಲಿದೆ.

More from Filmibeat

English summary
Deepika Padukone Nervous Because Of Prabhas, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X