For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಭಾರಿ ಡಿಮ್ಯಾಂಡ್: ಹಕ್ಕು ಖರೀದಿಗೆ ತೆಲುಗು ನಿರ್ಮಾಪಕರ ಸಾಲು

  |

  ಕೆಜಿಎಫ್ ತೆಲುಗು ಆವೃತ್ತಿ ತೆಲುಗು ಭಾಷಿಕ ಎರಡೂ ರಾಜ್ಯಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಹಾಗಾಗಿ ಕೆಜಿಎಫ್ 2 ನ ತೆಲುಗು ಆವೃತ್ತಿ ಖರೀದಿಸಲು ಸಾಲುಗಟ್ಟಿದ್ದಾರೆ.

  ಪ್ರಭಾಸ್ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ KGF ತಂಡ |Rocking Star Yash|KGF-2 | Prabhas|

  ಕೆಜಿಎಫ್ ತೆಲುಗು ಆವೃತ್ತಿಯಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಹಂಚಿಕೆ ಮಾಡಿದ್ದ ಸಾಯಿ ಕೊರ್ರಪಾಟಿ ಒಳ್ಳೆಯ ಆದಾಯವನ್ನೇ ಕೈಗೆತ್ತಿಕೊಂಡಿದ್ದರು. ಹಾಗಾಗಿ ಈಗ ಮತ್ತೊಮ್ಮೆ ಕೆಜಿಎಫ್‌ 2 ಖರೀದಿಗೆ ಏರ್ಪಟ್ಟಿರುವ ಸಾಲಿನಲ್ಲಿ ಮೊದಲಿನಲ್ಲಿದ್ದಾರೆ.

  'KGF-2' ಸಂಜಯ್ ದತ್ ಲುಕ್ ಸೋರಿಕೆ: ಹೇಗಿದ್ದಾನೆ ಅಧೀರ ನೋಡಿ'KGF-2' ಸಂಜಯ್ ದತ್ ಲುಕ್ ಸೋರಿಕೆ: ಹೇಗಿದ್ದಾನೆ ಅಧೀರ ನೋಡಿ

  ಕೆಜಿಎಫ್ 2 ಕ್ರೇಜ್ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಭರ್ಜರಿಯಾಗಿದೆ. ಇದರ ಅರಿವಿರುವ ನಿರ್ಮಾಪಕರು, ವಿತರಕರು ಈಗಿನಿಂದಲೇ ವಿತರಣೆ ಹಕ್ಕು ಖರೀದಿಗೆ ಲಾಭಿ ಆರಂಭಿಸಿದ್ದಾರೆ.

  ಕಳೆದ ಬಾರಿ ಸಾಯಿ ಕೊರ್ರಪಾಟಿ ಖರೀದಿಸಿದ್ದರು

  ಕಳೆದ ಬಾರಿ ಸಾಯಿ ಕೊರ್ರಪಾಟಿ ಖರೀದಿಸಿದ್ದರು

  ಕಳೆದ ಬಾರಿ ಕೆಜಿಎಫ್ ತೆಲುಗು ಹಕ್ಕು ಖರೀದಿಸಿ ವಿತರಿಸಿದ್ದ ಸಾಯಿ ಕೊರ್ರಪಾಟಿ ಈ ಬಾರಿಯೂ ಹಕ್ಕು ಖರೀದಿಸಲು ಉತ್ಸುಕರಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಹಣ ಖರೀದಿಸಲು ತಯಾರಾಗಿದ್ದಾರೆ. ಅವರು ಸುಮಾರು 20 ಕೋಟಿ ಹಣ ನೀಡಲು ತಯಾರಾಗಿದ್ದಾರೆ ಎನ್ನಲಾಗುತ್ತಿದೆ.

  ಇನ್ನೂ ಹಲವು ನಿರ್ಮಾಪಕರಿದ್ದಾರೆ

  ಇನ್ನೂ ಹಲವು ನಿರ್ಮಾಪಕರಿದ್ದಾರೆ

  ಸಾಯಿ ಕೊರ್ರಪಾಟಿ ಜೊತೆಗೆ ಖ್ಯಾತ ನಿರ್ಮಾಪಕ ದಿಲ್ ರಾಜು, ಏಷಿಯನ್ ಸುನಿಲ್ ಮತ್ತು ಇನ್ನೂ ಕೆಲವರು ಹಕ್ಕು ಖರೀದಿಗೆ ಕೈಯಲ್ಲಿ ಹಣ ಹಿಡಿದು ತಯಾರಾಗಿದ್ದಾರೆ. ಈಗಾಗಲೇ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

  'ಕೆಜಿಎಫ್ 2' ಸ್ಯಾಟಲೈಟ್ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ?'ಕೆಜಿಎಫ್ 2' ಸ್ಯಾಟಲೈಟ್ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ?

  ಕೆಜಿಎಫ್ 2 ನಿರ್ಮಾಪಕರು ಕೇಳುತ್ತಿರುವುದೆಷ್ಟು?

  ಕೆಜಿಎಫ್ 2 ನಿರ್ಮಾಪಕರು ಕೇಳುತ್ತಿರುವುದೆಷ್ಟು?

  ಕೆಜಿಎಫ್ 2 ನಿರ್ಮಾಪಕರು 40-50 ಕೋಟಿ ರೂಪಾಯಿಗೆ ತೆಲುಗು ಹಕ್ಕು ಮಾರಾಟ ಮಾಡಲು ಚಿಂತಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ದೊಡ್ಡ ಮೊತ್ತವೆಂಬ ಅಭಿಪ್ರಾಯ ಸಹ ತೆಲುಗು ಸಿನಿವಲಯದಲ್ಲಿ ಕೇಳಿ ಬರುತ್ತಿದೆಯಂತೆ.

  ತಾವೇ ವಿತರಣೆ ಮಾಡುತ್ತಾರೆಯೇ?

  ತಾವೇ ವಿತರಣೆ ಮಾಡುತ್ತಾರೆಯೇ?

  ಕೆಜಿಎಫ್ 2 ನಿರ್ಮಾಪಕ ವಿಜಯ್ ಕಿರಗಂದೂರು ಅವರು ತೆಲುಗು ಹಕ್ಕನ್ನು ಮಾರುತ್ತಾರೆಯೋ ಅಥವಾ ಸ್ವತಃ ಅವರೇ ತೆಲುಗಿನಲ್ಲೂ ಸಿನಿಮಾ ವಿತರಣೆ ಮಾಡುತ್ತಾರೆಯೋ ಕಾದು ನೋಡಬೇಕಿದೆ.

  English summary
  Telugu producers demanding for KGF 2 movie telugu version rights. There is a huge craze for KGF 2 in Andhra and Telangana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X