ತೆಲುಗು ಪೋಷಕ ನಟ ಪೊಸಾನಿ ಕೃಷ್ಣಮುರಳಿ ಬಂಧನ
ಟಾಲಿವುಡ್ ನಟ, ಬರಹಗಾರ ಪೊಸಾನಿ ಕೃಷ್ಣ ಮುರಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಹೈದರಾಬಾದ್‌ನ ಮೈಹೋಮ್ ಭುಜಾ ಅಪಾರ್ಟ್‌ಮೆಂಟ್‌ನಲ್ಲಿರುವ ಪೋಸಾನಿಗೆ ನೋಟಿಸ್ ನೀಡಿ ವಶಕ್ಕೆ ಪಡೆದಿದ್ದರು. ಗುರುವಾರ ಓಬುಲವರಿಪಲ್ಲೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ಓಬುಲವರಿಪಲ್ಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಅವರನ್ನು ವಶಕ್ಕೆ ಪಡೆಯಲಾಗಿದೆ.
ಪೊಸಾನಿ ಕೃಷ್ಣ ಮುರಳಿ ಕನ್ನಡ ಸಿನಿಮಾಗಳಲ್ಲಿ ಕೂಡ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ 'ಬೇಗೂರು ಕಾಲೋನಿ' ಚಿತ್ರದಲ್ಲಿ ಸಹ ಅವರು ಬಣ್ಣ ಹಚ್ಚಿದ್ದರು. ಆಂಧ್ರದಲ್ಲಿ ವೈಸಿಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಟಿಡಿಪಿ ಮತ್ತು ಜನಸೇನಾ ಪಕ್ಷದ ಮುಖಂಡರನ್ನು ಪೊಲೀಸರು ಟೀಕಿಸಿದ್ದರು. ಜನಸೇನಾ ಪಕ್ಷನ ನಾಯಕ ಪವನ್ ಕಲ್ಯಾಣ್ ಕುಟುಂಬವನ್ನು ಟಾರ್ಗೆಟ್ ಮಾಡಿ ಪೊಸಾನಿ ಅಸಭ್ಯಕರವಾಗಿ ಮಾತನಾಡಿದ್ದರು. ಈ ಬಗ್ಗೆ ಮಂಡಲಿ ಜನಸೇನಾ ಮುಖಂಡ ಮಣಿ ಪೊಲೀಸರಿಗೆ ದೂರು ನೀಡಿದ್ದರು.

ಪೋಸಾನಿ ಮಾತನಾಡಿದ್ದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಣಿ ನೀಡಿದ ದೂರಿನ ಅನ್ವಯ ಪೊಸಾನಿ ವಿರುದ್ದ ಹಲವರು ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿತ್ತು. ಆಂಧ್ರದ 11 ಕಡೆಗಳಲ್ಲಿ ಅವರು ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಸಾಕ್ಷಾಧಾರ ಕಲೆ ಹಾಕಿದ್ದರು. ಜಾತಿ ನಿಂದನೆ ಹಾಗೂ ಜನರಲ್ಲಿ ವರ್ಗ ಭೇದಗಳನ್ನು ಸೃಷ್ಟಿಸುವ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196, 353 (2), 111 ಜೊತೆಗೆ 3 (5) ರ ಅಡಿಯಲ್ಲಿ ಪೊಸಾನಿ ವಿರುದ್ಧ ದೂರು ದಾಖಲಿಸಲಾಗಿದೆ.
ಮಣಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪೊಸಾನಿಯವರ ಮಾತುಗಳ ವಿಡಿಯೋ ಮತ್ತು ಆಡಿಯೋ ಟೇಪ್‌ಗಳನ್ನು ಪರಿಶೀಲನೆ ನಡೆಸಿ ಇದೀಗ ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧನದ ವೇಳೆ ಪೊಲೀಸರ ಜೊತೆ ನಟ ವಾಗ್ವಾದ ನಡೆಸಿದ್ದಾರೆ. ನನ್ನನ್ನು ಹೇಗೆ ಬಂಧಿಸ್ತೀರಾ?ಅರ್ಧರಾತ್ರಿ ಮನೆಗೆ ಹೇಗೆ ಬರ್ತೀರಾ? ನನ್ನ ಆರೋಗ್ಯ ಸರಿಯಿಲ್ಲ, ಚಿಕಿತ್ಸೆ ಪಡೆಯುತ್ತಿದ್ದೇನೆ. ನೋಟಿಸ್ ನೀಡಿದ್ದರೂ ಚೇತರಿಸಿಕೊಂಡು ಬಳಿಕ ವಿಚಾರಣೆಗೆ ಬರ್ತೀನಿ ಎಂದಿದ್ದಾರೆ. ಬಂಧನದ ವೇಳೆ ಪೊನಾನಿ ಚಡ್ಡಿ, ಬನಿಯನ್ ಧರಿಸಿದ್ದರು. ಅವರ ಬಂಧನದ ವಿಡಿಯೋ ವೈರಲ್ ಆಗ್ತಿದೆ.
ಬಂಧನದ ವೇಳೆ ಪೊನಾನಿ ಅವರಿಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ. ಅವರು ಸ್ವೀಕರಿಸಲಿಲ್ಲ. ಬಳಿಕ ಅವರ ಪತ್ನಿ ಕೈಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಸಹಿ ಮಾಡಬೇಡ ಎಂದು ಪತ್ನಿಗ ಪೊಸಾನಿ ಹೇಳಿದ್ದರು. ಆದರೂ ನೋಟಿಸ್ ನೀಡಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಅನ್ನಮಯ್ಯ ಜಿಲ್ಲೆ ಕರೆದೊಯ್ದಿದ್ದರು.
ಹಬ್ಬದ ದಿನ ಹೀಗೆ ಪೊಲೀಸರು ನಟನ ಮನೆಗೆ ನುಗ್ಗಿ ಬಂಧಿಸಿರುವುದು ಸರಿಯಲ್ಲ. ಇದು ಟಿಡಿಪಿ, ಜನಸೇನಾ ಮೈತ್ರಿ ಸರ್ಕಾರದ ಅರಾಜಕತೆ ಹಿಡಿದ ಕನ್ನಡಿ ಎಂದು ಎಂದು ವೈಎಸ್‌ಪಿ ನಾಯಕಿ ಶ್ಯಾಮಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಪೊನಾನಿ ಮಡದಿ ಕುಸುಮಲತಾ ಅವರ ಜೊತೆ ಆಂಧ್ರ ಮಾಜಿ ಸಿಎಂ ಜಗನ್ ಮಾತನಾಡಿದ್ದಾರೆ. ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
"ಪೊಸಾನಿ ಕೃಷ್ಣ ಮುರಳಿ ಅಕ್ರಮ ಬಂಧನದಿಂದ ಪೊಲೀಸರ ಪಿತೂರಿ ಬಯಲಾಗಿದೆ. ಬುಧವಾರ ರಾತ್ರಿ ಪೊಸಾನಿಯನ್ನು ಬಂಧಿಸಿ ಕರೆದೊಯ್ಯಲಾಯಿತು. ಆದರೆ, ಅವರ ಕುಟುಂಬ ಸದಸ್ಯರಿಗೆ ನೀಡಲಾದ ನೋಟಿಸ್‌ನಲ್ಲಿ, ಗುರುವಾರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ನಿಯಮಗಳ ಉಲ್ಲಂಘನೆಯಲ್ಲವೇ ಚಂದ್ರಬಾಬು? ಅಂತಹ ಪೊಲೀಸರನ್ನು ಏನು ಮಾಡಬೇಕು?" ವೈಸಿಪಿ ಪಕ್ಷದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಶ್ನಿಸಲಾಗಿದೆ.


Click it and Unblock the Notifications











