Devara: 'ದೇವರ'ದಲ್ಲಿ ಭೈರಾ ಆಗಿ ಕಾಣಿಸಿಕೊಂಡ ಆದಿಪುರುಷ್‌ನ ರಾವಣ!
ಬುಧವಾರ (ಆಗಸ್ಟ್ 16) ರಂದು ಸೈಫ್ ಅಲಿ ಖಾನ್ 53 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಜೂನಿಯರ್ ಎನ್‌ಟಿಆರ್ ನಟಿಸಿರುವ ಬಹುನಿರೀಕ್ಷಿತ 'ದೇವರ' ಚಿತ್ರತಂಡ ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದೆ. ಫೋಸ್ಟರ್‌ನಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಬಹುನಿರೀಕ್ಷಿತ 'ದೇವರ' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಸಹ ನಟಿಸಿದ್ದಾರೆ. ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿರ್ಮಾಪಕರು ಮತ್ತು ಜೂನಿಯರ್ ಎನ್‌ಟಿಆರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಭೈರಾ ಪಾತ್ರದಲ್ಲಿ ಸೈಫ್ ಅಲಿ ಖಾನ್
ದೇವರ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಎದುರಾಳಿಯಾಗಿ ನಟಿಸಿರುವ ಸೈಫ್ ಅಲಿ ಖಾನ್, ಫಸ್ಟ್ ಲುಕ್‌ನಲ್ಲಿ ಹಳ್ಳಿಗಾಡಿನ ವ್ಯಕ್ತಿಯ ರೂಪದಲ್ಲಿ ಸೈಫ್ ಅಭಿಮಾನಿಗಳನ್ನು ಕೆಣಕ್ಕಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು 'ಭೈರಾ' ಎಂಬುದು ಕೂಡ ಬಹಿರಂಗವಾಗಿದೆ. ಪೋಸ್ಟರ್‌ನಲ್ಲಿ ಉದ್ದವಾದ, ಅಸ್ಥವ್ಯಸ್ತಗೊಂಡಿರುವ ಗುಂಗುರು ಕೂದಲಿನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು "ಭೈರಾ... ಜನ್ಮದಿನದ ಶುಭಾಶಯಗಳು ಸೈಫ್ ಸರ್... ದೇವರ" ಎಂದು ಬರೆದಿದ್ದಾರೆ.
ದೇವರ ಸಿನಿಮಾ
ದೇವರ ಸೈಫ್ ಅಲಿ ಖಾನ್ ಅವರ ಚೊಚ್ಚಲ ತೆಲುಗು ಚಿತ್ರವಾಗಿದೆ. ಬಾಲಿವುಡ್ ನಟನ ಫಸ್ಟ್ ಲುಕ್‌ಗೆ ಅಭಿಮಾನಿಗಳು ಖುಷ್ ಆಗಿದ್ದು, ಕಾಮೆಂಟ್‌ಗಳನ್ನು ಸುರಿಸಿದ್ದಾರೆ. 'ವಾವ್, ಬೆಂಕಿಯಂತೆ ಕಾಣುತ್ತಿದೆ!' ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. 'ಇದು ದೇವರ V/s ಭೈರಾ!' ಎಂದು ಮತ್ತೊಬ್ಬರು ಉದ್ಗರಿಸಿದ್ದಾರೆ. ಹಲವರು ಫೈರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

2016 ರ ಜನತಾ ಗ್ಯಾರೇಜ್ ನಂತರ ನಟ ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಕೊರಟಾಲ ಶಿವ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ತೆಲುಗು ಚಿತ್ರರಙಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ, ಚಿತ್ರದಲ್ಲಿ ಎನ್‌ಟಿಆರ್ ತಂದೆ ಮತ್ತು ಮಗನ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಜೂನಿಯರ್ ಎನ್ ಟಿಆರ್ ಅವರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ಅದರಲ್ಲಿ ಅವರು ರಕ್ತದಲ್ಲಿ ತೊಯ್ದಿರುವ ಈಟಿ ಹಿಡಿದುಕೊಂಡು ಉಗ್ರರೂಪದಲ್ಲಿ ನಿಂತಿದ್ದಾರೆ.
ಸಿನಿಮಾ ಕುರಿತಂತೆ ಇತ್ತೀಚೆಗೆ, ಜೂನಿಯರ್ ಎನ್‌ಟಿಆರ್ ಅವರು ತಮ್ಮ ಮುಂದಿನ ಯೋಜನೆಗಳ ಕುರಿತು ಪದೇ ಪದೇ ಅಪ್‌ಡೇಟ್ ಕೇಳದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹೀಗೆ ಅಭಿಮಾನಿಗಳು ಕೇಳುವ ಕಾರಣ ಚಿತ್ರತಂಡ ಸೇರಿದಂತೆ ಹಲವರ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಹೇಳಿದ್ದರು. 'ದೇವರ' ಮುಂದಿನ ವರ್ಷ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ.
"ಕೆಲವೊಮ್ಮೆ, ನಾವು ಒಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗ, ಹಂಚಿಕೊಳ್ಳಲು ಹೆಚ್ಚಿನ ಮಾಹಿತಿ ಇರುವುದಿಲ್ಲ. ಪ್ರತಿದಿನ ಅಥವಾ ಗಂಟೆಯ ಆಧಾರದ ಮೇಲೆ ಅಪ್‌ಡೇಟ್ ಕೊಡಲು ಸಾಧ್ಯವಿಲ್ಲ. ನಿಮ್ಮ ಉತ್ಸಾಹವನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಆದರೆ, ಕೆಲವೊಮ್ಮೆ ಇದು ನಿರ್ದೇಶಕರು ಮತ್ತು ಚಲನಚಿತ್ರ ನಿರ್ಮಾಪಕರ ಮೇಲೆ ಸಾಕಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಒತ್ತಡದಿಂದಾಗಿ, ಮೌಲ್ಯವಿಲ್ಲದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಇದು ಅಭಿಮಾನಿಗಳನ್ನು ಇನ್ನಷ್ಟು ಅಸಮಾಧಾನಗೊಳಿಸುತ್ತದೆ" ಎಂದು ಜೂನಿಯರ್ ಎನ್‌ಟಿಆರ್ ಮನವಿ ಮಾಡಿದ್ದರು.
ಆದಿಪುರುಷದಲ್ಲಿ ರಾವಣನಾಗಿದ್ದ ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್ ಕೊನೆಯದಾಗಿ ಈ ವರ್ಷ ಜೂನ್‌ನಲ್ಲಿ ಬಿಡುಗಡೆಯಾಗಿದ್ದ, ಓಂ ರಾವುತ್ ಅವರ ಆದಿಪುರುಷ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ರಾಘವ ಆಗಿ ಪ್ರಭಾಸ್ ಮತ್ತು ಜಾನಕಿಯಾಗಿ ಕೃತಿ ಸನನ್ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಸಂಭಾಷಣೆಗಳು ಮತ್ತು ಕಳಪೆ ವಿಎಫ್‌ಎಕ್ಸ್‌ನಿಂದ ವಿವಾದಗಳನ್ನು ಎದುರಿಸಿತ್ತು.


Click it and Unblock the Notifications











