Devara box office day 4: ಸೋಮವಾರ ಪರೀಕ್ಷೆ ಗೆದ್ನಾ 'ದೇವರ'? 4 ದಿನಕ್ಕೆ ಗಳಿಸಿದೆಷ್ಟು?

ತೆಲುಗಿನ 'ದೇವರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿದೆ. ಫಸ್ಟ್ ವೀಕೆಂಡ್‌ನಲ್ಲಿ ವಿಶ್ವದಾದ್ಯಂತ 304 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗಿತ್ತು. ಸೋಮವಾರದ ಪರೀಕ್ಷೆಯನ್ನು 'ದೇವರ' ಮುಗಿಸಿದ್ದಾನೆ

ಯಾವುದೇ ದೊಡ್ಡ ಸಿನಿಮಾ ಆಗಿದ್ದರೂ ಫಸ್ಟ್ ವೀಕೆಂಡ್ ಮುಗಿದು ಮೊದಲ ಸೋಮವಾರ ಸಿನಿಮಾ ಕಲೆಕ್ಷನ್ ಹೇಗಿರುತ್ತದೆ ಎನ್ನುವ ಲೆಕ್ಕಾಚಾರ ಇರುತ್ತದೆ. ಯಾಕಂದ್ರೆ ಅದೇ ದಿನ ಚಿತ್ರದ ಸೋಲು ಗೆಲುವಿನ ಬಗ್ಗೆ ದುಕ್ಸೂಚಿ ಸಿಗುತ್ತದೆ. ಮೊದಲ ಮೂರು ದಿನಗಳಲ್ಲಿ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳುತ್ತಾರೆ. ಶನಿವಾರ, ಭಾನುವಾರದ ರಜಾ ದಿನಗಳ ಲಾಭ ಸಿಗುತ್ತದೆ.

Devara Box Office Collection Day 4 Jr NTR s Film Passes Monday Test

ಸೋಮವಾರ ವಾರದ ದಿನ. ಜನ ಕೆಲಸ ಕಾರ್ಯಗಳನ್ನು ಬಿಟ್ಟು ಸಿನಿಮಾ ನೋಡಲು ಬಿಡುವು ಮಾಡಿಕೊಳ್ಳಬೇಕು. ಹಾಗಾಗಿ ಸೋಮವಾರ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವುದು ಸವಾಲಿನ ಕೆಲಸ. 'ದೇವರ' ಈ ವಿಚಾರದಲ್ಲಿ ಭಾಗಶಃ ಗೆದ್ದಿದ್ದಾನೆ. ಸೋಮವಾರವೂ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಜ್ಯೂ. ಎನ್‌ಟಿಆರ್ ನಟನೆ ಹಾಗೂ ಅನಿರುದ್ದ್ ಬಿಜಿಎಂ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಶುಕ್ರವಾರ ತೆರೆಕಂಡ 'ದೇವರ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡು ಸದ್ದು ಮಾಡಿತ್ತು. ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಉತ್ತರ ಭಾರತದಲ್ಲೂ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡ್ತಿದೆ.

ಮೊದಲ 3 ದಿನಕ್ಕೆ 304 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿತ್ತು. ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಗಳಿಕೆ ಕಮ್ಮಿ ಆಗಿದೆ. ಇದು ಸಹಜ ಕೂಡ. ಆದರೂ ಸಿನಿಮಾ ತಕ್ಕಮಟ್ಟಿಗೆ ಗಳಿಕೆ ಕಂಡು 350 ಕೋಟಿ ಕ್ಲಬ್‌ನತ್ತ ದಾಪುಗಾಲು ಇಟ್ಟಿದೆ. ನಾಳೆ (ಅಕ್ಟೋಬರ್ 2) ಗಾಂಧಿ ಜಯಂತಿ ಸಾರ್ವತ್ರಿಕ ರಜೆ ಇದೆ. ಫ್ಯಾಮಿಲಿ ಸಮೇತ ನೋಡಲು ಸದ್ಯ ಚಿತ್ರಮಂದಿರಗಳಲ್ಲಿರುವ ಸಿನಿಮಾ ಅಂದ್ರೆ ಅದು 'ದೇವರ'. ಹಾಗಾಗಿ 6ನೇ ದಿನ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.

ಭಾರತದಲ್ಲಿ 'ದೇವರ' ಹಿಂದಿ ವರ್ಷನ್ ಮಾತ್ರ ಭಾರತದಲ್ಲಿ ಸೋಮವಾರ 4.40 ಕೋಟಿ ರೂ. ಗಳಿಕೆ ಕಂಡಿದೆ. ಶುಕ್ರವಾರ 7.95 ಕೋಟಿ ರೂ, ಶನಿವಾರ 9.50 ಕೋಟಿ ರೂ, ಭಾನುವಾರ 12.07 ಕೋಟಿ ರೂ ಕಲೆಕ್ಷನ್ ಮಾಡಿತ್ತು. ಹಾಗಾಗಿ ಮೊದಲ 4 ದಿನಕ್ಕೆ 'ದೇವರ' ಹಿಂದಿ ಸಿನಿಮಾ ಒಟ್ಟು 33.92 ಕೋಟಿ ರೂ. ದೋಚಿರುವುದಾಗಿ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. 4ನೇ ದಿನ ದಕ್ಷಿಣದಲ್ಲಿ ಸಿನಿಮಾ ಕಲೆಕ್ಷನ್ ಕಮ್ಮಿ ಆಗಿದೆ. ಆದರೆ ನಾಳೆ ಹೆಚ್ಚಾಗುವ ಸಾಧ್ಯತೆಯಿದೆ.

ಒಟ್ಟಾರೆ ಮೊದಲ 4 ದಿನಕ್ಕೆ ವಿಶ್ವದಾದ್ಯಂತ 'ದೇವರ' ಗಳಿಕೆ 320 ಕೋಟಿ ರೂ. ದಾಟಿರುವ ಅಂದಾಜಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಮುಂದಿನ ಸಿನಿಮಾಗಳಲ್ಲಿ ಸಿನಿಮಾ ಗಳಿಕೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ದಸರಾ ಹಬ್ಬದ ರಜೆಗಳು ಕೂಡ ಚಿತ್ರದ ಗಳಿಕೆಗೆ ಪ್ಲಸ್ ಆಗುವ ನಿರೀಕ್ಷೆಯಿದೆ.

'ದೇವರ' ಚಿತ್ರದಲ್ಲಿ ತಂದೆ- ಮಗನಾಗಿ ದ್ವಿಪಾತ್ರದಲ್ಲಿ ತಾರಕ್ ಅಬ್ಬರಿಸಿದ್ದಾರೆ. ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರ್ತಿದ್ದು ಸದ್ಯ ಕಥೆಗೆ ಪೀಠಿಕೆ ಮಾತ್ರ ಹಾಕಿಕೊಳ್ಳಲಾಗಿದೆ. ಒಂದು ದೊಡ್ಡ ಟ್ವಿಸ್ಟ್ ಕೊಟ್ಟು ಎರಡನೇ ಭಾಗಕ್ಕೆ ಲೀಡ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ 'ದೇವರ'-2 ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

English summary
Devara box office day 4: nr ntr starrer nears Rs 350 cr mark
Read more about: ntr tollywood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X