'ದೇವರ' ಚಿತ್ರಕ್ಕಾಗಿ ತಾರಕ್, ಜಾನ್ವಿ, ಸೈಫ್ ಪಡೆದ ಸಂಭಾವನೆ ಎಷ್ಟು?

ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಬಹುಕೋಟಿ ವೆಚ್ಚದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಜ್ಯೂ. ಎನ್‌ಟಿಆರ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಹಳ ದಿನಗಳಿಂದ 'ದೇವರ' ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಕೋವಿಡ್ ಸಮಸ್ಯೆಯಿಂದ ತಾರಕ್ ನಟಿಸಿದ ಸಿನಿಮಾಗಳು ತೆರೆಗೆ ಬರುವುದು ತಡವಾಗಿತ್ತು. 'ಆರ್‌ಆರ್‌ಆರ್‌' ಬಂದು ಎರಡೂವರೆ ವರ್ಷಗಳ ಬಳಿಕ 'ದೇವರ' ಬಂದಿದ್ದಾನೆ. ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎಂದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು.

Devara cast remuneration Here s how much jr ntr saif janhvi got paid for action thriller

ನಾಯಕಿಯಾಗಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಹಾಗೂ ಬಾಲಿವುಡ್ ನಟ ಸೈಫ್ ಅಲಿಖಾನ್ 'ದೇವರ' ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿತ್ತು. ಕೊರಟಾಲ ಶಿವ ನಿರ್ದೇಶನದ ಹಿಂದಿನ ಸಿನಿಮಾ 'ಆಚಾರ್ಯ' ಸೋತಿರಬಹುದು. ಆದರೆ ಅದಕ್ಕಿಂತ ಮುಂಚೆ 'ಮಿರ್ಚಿ', 'ಶ್ರೀಮಂತುಡು', 'ಜನತಾ ಗ್ಯಾರೇಜ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಹಾಗಾಗಿ 'ದೇವರ' ಬಗ್ಗೆಯೂ ನಿರೀಕ್ಷೆ ಗರಿಗೆದರಿತ್ತು.

ಯುವಸುಧಾ ಆರ್ಟ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ 'ದೇವರ' ಸಿನಿಮಾ ನಿರ್ಮಿಸಿವೆ. ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮೂಡಿ ಬಂದಿದೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಸ್ಟಾರ್ ಕಲಾವಿದರು, ತಂತ್ರಜ್ಞರು ತಂಡದಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಜೆಟ್ ಹೆಚ್ಚಾಗಿತ್ತು. ಸಿನಿಮಾ ತಡವಾದರೂ ಎಲ್ಲರಿಗೂ ಭರ್ಜರಿ ಸಂಭಾವನೆಯೇ ಸಿಕ್ಕಿದೆ.

ಸ್ಟಾರ್ ಕಲಾವಿದರು, ತಂತ್ರಜ್ಞರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿಬರುತ್ತಲೇ ಇರುತ್ತದೆ. ಒಂದು ಸಿನಿಮಾ ಮಾಡುವ ಅವಧಿಯಲ್ಲಿ ಎರಡು ಸಿನಿಮಾ ಮಾಡಬಹುದಲ್ಲ ಎನ್ನುವ ಸಲಹೆ ಕೂಡ ಸಿಗುತ್ತದೆ. ಆದರೆ ದೊಡ್ಡದಾಗಿ ಪ್ಲ್ಯಾನ್ ಮಾಡಿ ಒಟ್ಟಿಗೆ ಲಾಭ ಮಾಡುವ ಲೆಕ್ಕಾಚಾರ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸ್ಟಾರ್ ನಟರು ಕೂಡ ಇದಕ್ಕೆ ಸೈ ಎನ್ನುತ್ತಿದ್ದಾರೆ. ತಡವಾದರೂ ಪರವಾಗಿಲ್ಲ ಸಿನಿಮಾ ಗೆಲ್ಲಬೇಕು, ಹಾಗಂತ ಸಂಭಾವನೆ ವಿಚಾರದಲ್ಲೂ ರಾಜಿ ಆಗುವುದಿಲ್ಲ.

ತಾರಕ್ ಸಂಭಾವನೆ

'ದೇವರ' ಚಿತ್ರದಲ್ಲಿ ತಂದೆ ಮಗನಾಗಿ ದ್ವಿಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸಿದ್ದಾರೆ. ಇನ್ನು ಚಿತ್ರವನ್ನು ಎರಡು ಭಾಗಗಳಾಗಿ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗಾಗಿ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ವರದಿಗಳ ಪ್ರಕಾರ ಜ್ಯೂ. ಎನ್‌ಟಿಆರ್ 60 ಕೋಟಿ ರೂ. ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗ್ತಿದೆ. 'ಆರ್‌ಆರ್‌ಆರ್' ಚರಣ್ ಹಾಗೂ ತಾರಕ್ ತಲಾ 45 ಕೋಟಿ ರೂ. ಪಡೆದಿದ್ದರು ಎನ್ನಲಾಗಿತ್ತು. ಸಹೋದರನೇ ನಿರ್ಮಾಪಕ ಆಗಿರುವುದರಿಂದ ಸಂಭಾವನೆ ವಿಚಾರದಲ್ಲಿ ಕೊಂಚ ರಾಜಿ ಮಾಡಿಕೊಂಡಿರಬಹುದು ಎನ್ನುವ ವಾದವೂ ಇದೆ.

ಜಾನ್ವಿ ಕಪೂರ್‌ ಪಡೆದಿದ್ದೆಷ್ಟು?

ಬಾಲಿವುಡ್ ಬ್ಯೂಟಿ ಜಾನ್ವಿ ಇದೀಗ ದಕ್ಷಿಣದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಬಿಟೌನ್‌ನಲ್ಲಿ ಆಕೆಗೆ ಸಕ್ಸಸ್ ಸಿಕ್ಕಿರಲಿಲ್ಲ. 'ದೇವರ' ಚಿತ್ರದಲ್ಲಿ ಆಕೆಗೆ ಹೆಚ್ಚು ಅವಕಾಶವೂ ಸಿಕ್ಕಿಲ್ಲ. ಚಿತ್ರಕ್ಕಾಗಿ ಶ್ರೀದೇವಿ ಪುತ್ರಿ 3ರಿಂದ 4 ಕೋಟಿ ರೂ. ಸಂಭಾವನೆ ಪಡೆದಿರುವ ಅಂದಾಜಿದೆ.

ಸೈಫ್ ಜೇಬಿಗಿಳಿಸಿದ್ದೆಷ್ಟು?

ಚಿತ್ರದಲ್ಲಿ ವಿಲನ್ ಭೈರವ ಆಗಿ ಸೈಫ್ ಅಲಿಖಾನ್ ಅಬ್ಬರಿಸಿದ್ದಾರೆ. 'ದೇವರ'ನಿಗೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದ್ಕಾಲದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿ ಗೆದ್ದ ಸೈಫ್ ಇದೀಗ ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. 'ದೇವರ' ಚಿತ್ರಕ್ಕಾಗಿ 10 ರಿಂದ 15 ಕೋಟಿ ರೂ.ವರೆಗೆ ಸಂಬಳ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನುಳಿದಂತೆ ನಿರ್ದೇಶಕ ಕೊರಟಾಲ ಶಿವ ಹಾಗೂ ಖ್ಯಾತ ನಟ ಪ್ರಕಾಶ್‌ ರಾಜ್ ಕೂಡ ಒಳ್ಳೆ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದ್ದು ಮುಂದಿನ ದಿನಗಳಲ್ಲಿ ಚಿತ್ರದ ಭವಿಷ್ಯ ಗೊತ್ತಾಗಲಿದೆ.

More from Filmibeat

English summary
Jr NTR, Janhvi Kapoor, Saif Ali Khan salary for devara;
Read more about: ntr tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X