ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟ ದೇವರಾಜ್ ಪುತ್ರ ಪ್ರಣಾಮ್
'ಕುಮಾರಿ 21 ಎಫ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದ ನಟ ದೇವರಾಜ್ ಅವರ ಪುತ್ರ ಪ್ರಣಾಮ್ ದೇವರಾಜ್ ತಮ್ಮ ಚೊಚ್ಚಲ ಚಿತ್ರದಲ್ಲಿ ಭರವಸೆ ಮೂಡಿಸಿದರು. ಈಗ ಎರಡನೇ ಸಿನಿಮಾ ಯಾವುದು ಎಂದು ಯೋಚನೆ ಮಾಡುವಷ್ಟಲ್ಲಿ ಸರ್ಪ್ರೈಸ್ ಸುದ್ದಿಯೊಂದು ಕೊಟ್ಟಿದ್ದಾರೆ.
ಹೌದು, ಪ್ರಣಾಮ್ ತಮ್ಮ ಎರಡನೇ ಸಿನಿಮಾ ಆರಂಭಿಸಿದ್ದಾರೆ. ಆದ್ರೆ, ಕನ್ನಡದಲ್ಲಿ ಅಲ್ಲ, ತೆಲುಗು ಇಂಡಸ್ಟ್ರಿಯಲ್ಲಿ ಅನ್ನೋದು ತುಂಬಾ ವಿಶೇಷ. ಒಂದೇ ಸಿನಿಮಾ ಮಾಡಿದರೂ, ಪರಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಪ್ರಣಾಮ್ ಬಹುಭಾಷಾ ನಟನಾಗಿ ಮಿಂಚಲಿದ್ದಾರೆ.
ಈ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ದೇವರಾಜ್ ಪುತ್ರನ ಸಿನಿ ಪಯಣ ಶುರುವಾಗಿದೆ. ಅಂದ್ಹಾಗೆ, ಪ್ರಣಾಮ್ ಅಭಿನಯಿಸುತ್ತಿರುವ ಚೊಚ್ಚಲ ತೆಲುಗು ಸಿನಿಮಾ ಮುಹೂರ್ತ ಮಾಡಿಕೊಂಡಿದ್ದು, ಮೋಷನ್ ಪೊಸ್ಟರ್ ಕೂಡ ಬಿಡುಗಡೆ ಮಾಡಿದೆ. ಅಷ್ಟಕ್ಕೂ, ದೇವರಾಜ್ ಪುತ್ರನ ಮೊದಲ ತೆಲಗು ಸಿನಿಮಾ ಯಾವುದು.? ಮುಂದೆ ಓದಿ......

ಚೊಚ್ಚಲ ತೆಲುಗು ಚಿತ್ರದ ಮುಹೂರ್ತ
ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ದೇವರಾಜ್ ಅಭಿನಯದ ಚೊಚ್ಚಲ ತೆಲುಗು ಸಿನಿಮಾ 'ವೈರಂ' ಸೆಟ್ಟೇರಿದೆ. ಸಾಯಿ ಶಿವಾನಿ ಎಂಬುವವರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ಜೆಎಂಕೆ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಪೋಸ್ಟರ್ ರಿಲೀಸ್ ಮಾಡಿದ ಕಾರ್ತಿಕೇಯ
'ಆರ್ ಎಕ್ಸ್ 100' ಚಿತ್ರದ ನಟ ಕಾರ್ತಿಕೇಯ ಅವರು ಪ್ರಣಾಮ್ ದೇವರಾಜ್ ಅಭಿನಯದ 'ವೈರಂ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿ, ಚಿತ್ರಕ್ಕೆ ಶುಭ ಕೋರಿದರು.

ಆಕ್ಷನ್ ಕಮ್ ಲವ್ ಸ್ಟೋರಿ
'ವೈರಂ' ಸಿನಿಮಾ ಆಕ್ಷನ್ ಕಮ್ ಲವ್ ಸ್ಟೋರಿ. ಅದಕ್ಕೆ ತಕ್ಕಂತೆ ಪ್ರಣಾಮ್ ದೇವರಾಜ್ ಅವರ ಲುಕ್, ಗೆಟಪ್ ಎಲ್ಲವೂ ಮಾಡಿಕೊಮಡಿದ್ದು, ಸಕಲ ಸಿದ್ಧತೆಗಳೊಂದಿಗೆ ಟಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. 'ಕುಮಾರಿ 21 ಎಫ್' ಚಿತ್ರಕ್ಕೆ ಸಂಗೀತ ನೀಡಿದ್ದ ಸಾಗರ್ ಮಹಾಥಿ ಅವರೇ ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.

ಕನ್ನಡ-ತೆಲುಗು ಭಾಷೆಯಲ್ಲಿ ಬರ್ತಿದೆ
'ವೈರಂ' ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲ, ಈ ಸಿನಿಮಾ ಕನ್ನಡದಲ್ಲೂ ಮೂಡಿ ಬರ್ತಿದೆ. ಹೈದ್ರಾಬಾದ್ ಮತ್ತು ಕರ್ನಾಟಕದ ವಿವಿಧ ಕಡೆಯಲ್ಲಿ ಚಿತ್ರೀಕರಣ ನಡೆಯಲಿದ್ದು, ಸೆಪ್ಟಂಬರ್ ಮೊದಲ ವಾರದಲ್ಲಿ ಶುರುವಾಗಲಿದೆ.


Click it and Unblock the Notifications











