ಬಾಲನಟನಾಗಿ ಸೀರಿಯಲ್‌ನಲ್ಲಿ ಮಿಂಚಿದ್ದ ವಿಜಯ್ ದೇವರಕೊಂಡ! ಸೀಕ್ರೆಟ್ ರಿವೀಲ್ ಮಾಡಿದ ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ ಅವರ ಅಭಿನಯದ ಅಖಂಡಾ ಸಿನಿಮಾ 150 ಕೋಟಿ ಕ್ಲಬ್ ಸೇರಿರೋ ವಿಚಾರ ಎಲ್ಲರಿಗೂ ತಿಳಿದಿದೆ. ಈ ಸಿನಿಮಾದ ಬೆನ್ನಲ್ಲೇ ನಂದಮೂರಿ ಬಾಲಕೃಷ್ಣ ಅವರು ಅನ್‌ಸ್ಟಾಪೆಬಲ್ ಎಂಬ ಟಾಕ್ ಶೋ ವನ್ನು ನಡೆಸಿಕೊಡುತ್ತಿದ್ದಾರೆ. ಈ ಟಾಕ್ ಶೋ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅಂತೆಯೇ ಪ್ರತಿವಾರ ಈ ಟಾಕ್ ಶೊಗೆ ವಿಶೇಷ ಅತಿಥಿಗಳು ಬರುತ್ತಾರೆ. ಅದರಂತೆ ನಂದಮೂರಿ ಅವರ ಟಾಕ್ ಶೋಗೆ ಲೈಗರ್ ಚಿತ್ರತಂಡ ಆಗಮಿಸಿ ಮಾತುಕತೆ ನಡೆಸಿದೆ. ಈ ಕಾರ್ಯಕ್ರಮದ ಪ್ರೋಮೊ ರಿಲೀಸ್ ಆಗಿದ್ದು ಇಂಟ್ರೆಸ್ಟಿಂಗ್ ಆಗಿ ಇರಲಿದೆ ಅನ್ನೋದು ಗೊತ್ತಾಗಿದೆ. ಅದಕ್ಕೆ ಕಾರಣ ವಿಜಯ್ ದೇವರಕೊಂಡ ಬಗೆಗಿನ ಒಂದು ಸೀಕ್ರೇಟ್.
ಈವಾರ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ಅನ್‌ಸ್ಟಾಪೆಬಲ್ ಟಾಕ್ ಶೋಗೆ ಲೈಗರ್ ತಂಡ ವಿಶೇಷ ಮೆರುಗನ್ನು ನೀಡಿದೆ. ಈ ಸಂಚಿಕೆಯಲ್ಲಿ ಸಾಕಷ್ಟು ಕಾಮಿಡಿ ಕೂಡ ಇರಲಿದೆ. ಹೌದು ನಂದಮೂರಿ ಬಾಲಕೃಷ್ಣ ಅವರ ಈ ಟಾಕ್ ಶೊನಲ್ಲಿ ಈ ಬಾರಿ ನಗುವಿಗೆ ಕಾರಣವಾಗೋದು ವಿಜಯ್ ದೇವರಕೊಂಡ. ಯಾಕಂದ್ರೆ ವಿಜಯ್ ದೇವರಕೊಂಡ ಬಗೆಗಿನ ಒಂದು ಸೀಕ್ರೇಟ್, ಹೆಚ್ಚಾಗಿ ಯಾರಿಗೂ ಗೊತ್ತಿರದ ಒಂದು ಮಾಹಿತಿಯನ್ನು ನಂದಮೂರಿ ಬಾಲಕೃಷ್ಣ ರಿವೀಲ್ ಮಾಡಿದ್ದಾರೆ. ಅದೇನು ಅಂತ ಮುಂದೆ ಓದಿ.
ಅನ್‌ಸ್ಟಾಪೆಬಲ್ ಕಾರ್ಯಕ್ರಮದ ಈ ವಾರದ ಸಂಚಿಕೆಯಲ್ಲಿ ಲೈಗರ್ ಚಿತ್ರದ ನಾಯಕ ವಿಜಯ್ ದೇವರಕೊಂಡ, ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಭಾಗಿಯಾಗಲಿದ್ದಾರೆ. ಈ ಸಂಚಿಕೆಯ ಚಿತ್ರೀಕರಣ ಮುಗಿದಿದ್ದು ಪ್ರೋಮೊ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ನಂದಮೂರಿ ಬಾಲಕೃಷ್ಣ ವಿಜಯ್ ದೇವರಕೊಂಡ ಬಗೆಗಿನ ಸೀಕ್ರೆಟ್ ಒಂದನ್ನು ಬಯಲು ಮಾಡಿರೋದು ಗೊತ್ತಾಗಿದೆ. ಅದೇನು ಅಂದರೇ ವಿಜಯ್ ದೇವರಕೊಂಡ ಅವರು ಮೊದಲು ಬಾಲನಟನಾಗಿ ಬಣ್ಣ ಹಚ್ಚಿರುವ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಲಾಗಿದೆ. ಈ ಬಗ್ಗೆ ವಿಜಯ್ ದೇವರಕೊಂಡ ಕೂಡ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ನಂದಮೂರಿ ಬಾಲಕೃಷ್ಣ ಅವರು ಒಂದು ವೀಡಿಯೋ ಪ್ಲೆ ಮಾಡುತ್ತಾರೆ. ಅದರಲ್ಲಿ ಯುವಕನೊಬ್ಬ ಡೈಲಾಗ್ ಹೇಳುತ್ತಾನೆ. ಅದು ಬೇರೆ ಯಾರು ಅಲ್ಲ ವಿಜಯ್ ದೇವರಕೊಂಡ. ಆಗ ಎಲ್ಲರಿಗೂ ಗೊತ್ತಾಗುತ್ತೆ ವಿಜಯ್ ಬಾಲನಟನಾಗಿ ಮೊದಲು ಚಿತ್ರರಂಗಕ್ಕೆ ಎಂಟ್ರಿ ಆಗಿರೋದು ಎಂದು. ಈ ಬಗ್ಗೆ ಪ್ರತಿಕ್ರೀಯಿಸಿದ ನಿರ್ದೇಶಕ ಪೂರಿ ಜಗನ್ನಾಥ್, ಈ ಬಗ್ಗೆ ನನಗೆ ಗೊತ್ತೆ ಇಲ್ಲಾ ಎನ್ನುತ್ತಾರೆ. ಹಾಗೇ ಈ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ "ನಾನು ಪುಟ್ಟಪರ್ತಿಯ ವಸತಿ ಶಾಲೆಯಲ್ಲಿ ಓದುತ್ತಿದ್ದೆ. ಅಲ್ಲಿ ಶಿರಡಿ ಸಾಯಿ ಪಾರ್ತಿ ಸಾಯಿ ದಿವ್ಯ ಕಥಾ ಎಂಬ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಸ್ವಲ್ಪ ದುಂಡುಮುಖದ ಮತ್ತು ಸ್ಪಷ್ಟವಾಗಿ ಡೈಲಾಗ್ ಹೇಳಬಲ್ಲ ಹುಡುಗರನ್ನು ತಂಡ ಹುಡುಕುತಿತ್ತು. ಆಗ ಅವರ ಕಣ್ಣಿಗೆ ನಾನು ಬಿದ್ದಿದ್ದೆ. ಹೀಗಾಗಿ ನನ್ನ ಬಳಿಯೂ ಸಣ್ಣ ಡೈಲಾಗ್ ಹೇಳಿಸಿದ್ದಾರೆ.ಮತ್ತು ಅಲ್ಲಿ ನಟಿಸಿರುವವನು ನಾನು ಆದರೆ ಧ್ವನಿ ನನ್ನದಲ್ಲಾ" ಎಂದಿದ್ದಾರೆ.
ಇನ್ನು ಈ ಶಿರಡಿ ಸಾಯಿ ಪಾರ್ಥಿ ಸಾಯಿ ದಿವ್ಯ ಕಥಾ ವಿಜಯ್ ದೇವರಕೊಂಡ ಅವರ ಮೊದಲು ನಟನಾಗಿ ಕಾಣಿಸಿಕೊಂಡಿರುವ ಧಾರಾವಾಹಿಯಾಗಿದ್ದು, 2000ನೇ ಇಸವಿಯಲ್ಲಿ ಪ್ರಸಾರವಾಗುತ್ತಿತ್ತು ಎಂಬ ಬಗ್ಗೆ ನೆನಪಿಸಿಕೊಳ್ಳಬಹುದಾಗಿದೆ. ಈ ಸಂಚಿಕೆಯೂ ಈ ವಾರದ ಕೊನೆಯಲ್ಲಿ ಪ್ರಸಾರವಾಗಲಿದೆ. ಇದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಹಾಗೇ ಅಖಂಡ ಸಿನಿಮಾದ ವಿಜಯದಿಂದ ಬೀಗುತ್ತಿರುವ ನಂದಮೂರಿ ಬಾಲಕೃಷ್ಣ ಅವರು ಸಿನಿಮಾ ರಂಗದಲ್ಲಿ ಸದ್ದು ಮಾಡುವಾಗಲೇ, ಓಟಿಟಿಯಲ್ಲಿ ಅವರು ನಿರೂಪಣೆ ಮಾಡುತ್ತಿರುವ ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ ಶೋ ಕೂಡಾ ಜನಪ್ರಿಯತೆಯನ್ನು ಪಡೆಯುವ ಜೊತೆಗೆ ಯಶಸ್ಸನ್ನೂ ಸಹಾ ಪಡೆದುಕೊಳ್ಳುತ್ತಿದೆ. ನಟ ಬಾಲಕೃಷ್ಣ ಅವರು ಈ ಟಾಕ್ ಶೋ ಗಾಗಿ ಬಹು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ನಟ ಬಾಲಕೃಷ್ಣ ಅವರು ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಿರ್ವಹಿಸುತ್ತಿರುವ ಟಾಕ್ ಶೋ ಓಟಿಟಿ ಪ್ಲಾಟ್ ಫಾರಂ ನಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಟಾಲಿವುಡ್ ನ ದಿಗ್ಗಜರೆಲ್ಲಾ ಅತಿಥಿಗಳಾಗಿ ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ನಟ ಬಾಲಕೃಷ್ಣ ಅವರು ತಮ್ಮದೇ ಆದ ರೀತಿಯಲ್ಲಿ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ ಈ ಶೋ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











