'ಪುಷ್ಪ' ಚಿತ್ರಕ್ಕಾಗಿ ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ: ದೇವಿಶ್ರೀ ಪ್ರಸಾದ್

ಈ ವಾರದ ದೊಡ್ಡ ಸಿನಿಮಾ ಅಂದರೆ ಅದು ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿರುವ 'ಪುಷ್ಪ'. ಈ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಹಾಡು, ಟೀಸರ್, ಟ್ರೇಲರ್‌ಗಳು ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿವೆ. ಈಗ ಸಿನಿಮಾ ರಿಲೀಸ್‌ ಆಗುವುದೊಂದೇ ಬಾಕಿ.

ಈ ವರ್ಷದ ಅಂತ್ಯಕ್ಕೆ ಪುಷ್ಪ ಸಿನಿಮಾ ಸಿನಿರಸಿಕರಿಗೆ ಮಸ್ತ್‌ ಟ್ರೀಟ್‌ ಕೊಡಲಿದೆ. ಡಿಸೆಂಬರ್ 17 ರಂದು ಪುಷ್ಪ ರಿಲೀಸ್‌ ಆಗಲಿದೆ. ಇದೇ ಕಾರಣಕ್ಕೆ ಚಿತ್ರ ತಂಡ ಅಬ್ಬರದ ಪ್ರಚಾರ ಕೈಗೊಂಡಿದೆ. ಹೈದ್ರಾಬಾದ್, ಚೆನ್ನೈನಲ್ಲಿ ಈಗಾಗಲೇ ಪ್ರಚಾರದ ಕಾರ್ಯ ಮುಗಿದಿದೆ. ಇನ್ನೂ ಒಂದಷ್ಟು ಕಡೆಗಳಲ್ಲಿ ಪುಷ್ಪ ಪ್ರಚಾರದ ಯೋಜನೆ ಹಾಕಿಕೊಂಡಿದೆ.

ಈ ನಡುವೆ ಸಿನಿಮಾದ ಬಗ್ಗೆ ಒಂದಷ್ಟು ಕುತೂಹಲಕಾರಿ ವಿಚಾರಗಳು ಹೊರ ಬಂದಿವೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು ಎಂದಿದ್ದಾರೆ.

ಅಲ್ಲು ಅರ್ಜುನ್‌ ಅಭಿನಯಕ್ಕೆ ನ್ಯಾಷನಲ್‌ ಅವಾರ್ಡ್: ದೇವಿಶ್ರೀ ಪ್ರಸಾದ್

ಅಲ್ಲು ಅರ್ಜುನ್‌ ಅಭಿನಯಕ್ಕೆ ನ್ಯಾಷನಲ್‌ ಅವಾರ್ಡ್: ದೇವಿಶ್ರೀ ಪ್ರಸಾದ್

ಸುಕುಮಾರ್‌ ನಿರ್ದೇಶನದ 'ಪುಷ್ಪ' ಚಿತ್ರದ ಮೇಲೆ ಮೊದಲಿನಿಂದಲೂ ಸಾಕಷ್ಟು ನಿರೀಕ್ಷೆ ಇದೆ. ಆದರೆ ಈಗ ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್. ಹೌದು ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆದ ದೇವಿಶ್ರೀ ಪ್ರಸಾದ್ ಅಲ್ಲು ಅರ್ಜುನ್ ಪುಷ್ಪರಾಜ್‌ ಪಾತ್ರದ ಬಗ್ಗೆ ಕುತೂಹಲ ಮೂಡುವ ವಿಚಾರಗಳನ್ನು ಹೇಳಿದ್ದಾರೆ. "ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಕೊಡಬೇಕು" ಎಂದಿದ್ದಾರೆ. ಸದ್ಯಕ್ಕೆ ಚಿತ್ರ ತಂಡ ರಿವೀಲ್ ಮಾಡಿರುವ ದೃಶ್ಯ ತುಣುಕುಗಳಲ್ಲಿ ಪುಷ್ಪ ರಾಜ್‌ ಒಬ್ಬ ಕಾಡುಗಳ್ಳ ಎನ್ನುವುದು ಗೊತ್ತಾಗುತ್ತದೆ. ಆದರೆ ಸಿನಿಮಾದಲ್ಲಿ ಅದನ್ನು ಮೀರಿದ್ದು ಏನೋ ಇದೆ ಎನ್ನುವುದನ್ನು ದೇವಿಶ್ರೀ ಪ್ರಸಾದ್‌ ರಿವೀಲ್‌ ಮಾಡಿದ್ದಾರೆ. ಅಲ್ಲು ಅರ್ಜುನ್‌ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು ಎಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣ ಆಗಿದೆ.

ಚಿತ್ರದಲ್ಲಿದೆ ಒಂದು ಅತ್ಯದ್ಭುತ ಸಾಹಸ ದೃಶ್ಯ!

ಚಿತ್ರದಲ್ಲಿದೆ ಒಂದು ಅತ್ಯದ್ಭುತ ಸಾಹಸ ದೃಶ್ಯ!

ಇನ್ನು ಹೆಚ್ಚಿನದಾಗಿ ಪುಷ್ಪ ಸಿನಿಮಾದ ಬಗ್ಗೆ ಮಾತನಾಡಿದ ದೇವಿಶ್ರೀ ಪ್ರಸಾದ್, ಈ ಚಿತ್ರದ ಸಾಹಸ ದೃಶ್ಯದ ಬಗ್ಗೆ ಮಾತನಾಡಿ ಮತ್ತೊಂದು ಸುಳಿವು ಬಿಟ್ಟು ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಿನಿಮಾದಲ್ಲಿರುವ ಅದ್ಭುತ ಸಾಹಸ ದೃಶ್ಯದ ಬಗ್ಗೆ ಅವರು ಮಾತನಾಡಿದ್ದಾರೆ. "ಪುಷ್ಪ ಸಿನಿಮಾದಲ್ಲಿ ಒಂದು ಅದ್ಭುತ ಸಾಹಸ ದೃಶ್ಯ ಇದೆ. ಇದು ಇತ್ತೀಚಿನ ಚಿತ್ರಗಳಲ್ಲಿ ಹೊಸದು" ಎಂದಿದ್ದಾರೆ ದೇವಿ ಶ್ರೀ ಪ್ರಸಾದ್ ಹೇಳಿರುವ ಈ ಮಾತುಗಳು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿವೆ.

'RRR' ಅಬ್ಬರದ ಪ್ರಚಾರದ ಮುಂದೆ ಮಂಕಾಯ್ತಾ 'ಪುಷ್ಪ'?

'RRR' ಅಬ್ಬರದ ಪ್ರಚಾರದ ಮುಂದೆ ಮಂಕಾಯ್ತಾ 'ಪುಷ್ಪ'?

ಇನ್ನು ಬಹುನಿರೀಕ್ಷೆಯ ಸಿನಿಮಾಗಳ ಸಾಲಲ್ಲಿ ಆರ್‌ಆರ್‌ಆರ್‌ ಮೊದಲು ನಿಲ್ಲುತ್ತದೆ. ಆರ್ಆರ್‌ಆರ್‌ ರಿಲೀಸ್‌ಗೆ ಇನ್ನು ಸಮಯ ಇದೆ. ಆರ್‌ಆರ್‌ಆರ್‌ ಚಿತ್ರಕ್ಕೂ ಮುನ್ನ ಪುಷ್ಪ ತೆರೆಗೆ ಬರಲಿದೆ. ಆದರೆ ಪುಷ್ಪಗಿಂದ ಮೊದಲು ಆರ್‌ಆರ್‌ಆರ್‌ ಚಿತ್ರದ ಪ್ರಚಾರ ಕಾರ್ಯಗಳು ಬಲು ಅಬ್ಬರದಿಂದ ಸಾಗಿವೆ. ಇತ್ತೀಚೆಗೆ ಹೆಚ್ಚಿನ ಪ್ರಚಾರ ಮಾಡಿದ ಆರ್‌ಆರ್‌ಆರ್‌ ಚೆನ್ನೈ, ಮುಂಬೈ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರಚಾರ ಮಾಡಿ ಮುನ್ನೆಲೆಗೆ ಬಂದಿತ್ತು. ಆದರೆ ಪುಷ್ಪ ಸಿನಿಮಾದ ರಿಲೀಸ್ ಹತ್ತಿರ ಇದ್ದರು ಸಿನಿಮಾ ತಂಡ ಸುಮ್ಮನೆ ಇತ್ತು. ಈಗ ಕೊನೆ ಗಳಿಗೆಯಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡಿದೆ.

ಅಲ್ಲು ಅರ್ಜುನ್‌ಗೆ ಅತಿ ಮುಖ್ಯವಾದ 'ಪುಷ್ಪ'!

ಅಲ್ಲು ಅರ್ಜುನ್‌ಗೆ ಅತಿ ಮುಖ್ಯವಾದ 'ಪುಷ್ಪ'!

ನಟ ಅಲ್ಲು ಅಅರ್ಜುನ್‌ ಸಿನಿಮಾ ಜರ್ನಿಗೆ 'ಪುಷ್ಪ' ತುಂಬಾನೆ ಮುಖ್ಯ. ಈ ಚಿತ್ರ ಎರಡು ಭಾಗಗಳಲ್ಲಿ ಬರ್ತಿದೆ. ಮೊದಲ ಭಾಗದ ಯಶಸ್ಸಿನ ಮೇಲೆ ಎರಡನೇ ಭಾಗ ನಿಂತಿದೆ. ಜೊತೆಗೆ 'ಅಲಾವೈಕುಂಠ ಪುರಮುಲೋ' ಚಿತ್ರದ ದೊಡ್ಡ ಯಶಸ್ಸಿನ ಬಳಿಕ ಬರ್ತಾ ಇರುವ ಸಿನಿಮಾ ಇದೆ. ಹಾಗಾಗಿ ಅಲ್ಲು ಅರ್ಜುನ್ ಆ ಚಿತ್ರವನ್ನು ಮೀರಿಸುವ ಅನಿವಾರ್ಯತೆ ಎದುರಾಗಿದೆ. ಪ್ರಚಾರದ ಹೊರತಾಗಿ ಸಿನಿಮಾ ತಂಡಕ್ಕೆ ಚಿತ್ರದ ಮೇಲೆ ಹೆಚ್ಚಿನ ಭರವಸೆ ಇದೆ. ಸುಕುಮಾರ್‌ ನಿರ್ದೇಶನ ಕೂಡ ಚಿತ್ರದ ಶಕ್ತಿಯಾಗಿ ನಿಲ್ಲಲಿದೆ.

More from Filmibeat

English summary
Devi Sri Prasad Predicts A National Award To Allu Arjun And He Talk About A Action Scean,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X