'ಪುಷ್ಪ'- 3 ಐಟಂ ಸಾಂಗ್‌ನಲ್ಲಿ ಕುಣಿಯೋದ್ಯಾರು? ಸಮಂತಾ, ಶ್ರೀಲೀಲಾ ಬಳಿಕ ಯಾರಿಗೆ ಅವಕಾಶ?

ತೆಲುಗಿನ 'ಪುಷ್ಪ' ಸರಣಿ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸರಣಿಯ 3ನೇ ಸಿನಿಮಾ ಬಗ್ಗೆಯೂ ಈಗಾಗಲೇ ಸುಳಿವು ಸಿಕ್ಕಿದೆ. ಆದರೆ ಯಾವಾಗ ಸಿನಿಮಾ ಶುರುವಾಗಿ ತೆರೆಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ. 50 ದಿನ ಪೂರೈಸಿರುವ 'ಪುಷ್ಪ'-2 ಸಿನಿಮಾ ಈಗಾಗಲೇ 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದೆ.

'ಪುಷ್ಪ' ಸರಣಿ ಚಿತ್ರಗಳ ಗೆಲುವಿನಲ್ಲಿ ಸಂಗೀತದ ಪಾಲು ದೊಡ್ಡದಿದೆ. ದೇವಿಶ್ರೀ ಪ್ರಸಾದ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಮೊದಲ ಭಾಗದ ಸಾಂಗ್ಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೀಕ್ವೆಲ್ ಸಾಂಗ್ಸ್ ಕೂಡ ತಕ್ಕಮಟ್ಟಿಗೆ ಹಿಟ್ ಆಗಿತ್ತು. ಆದರೆ 'ಊ ಅಂಟಾವ' ಸಾಂಗ್ ಕ್ರೇಜ್ ಮರೆಯುವಂತಿಲ್ಲ. ಅದಕ್ಕೆ ಸಮಂತಾ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು.

Devi Sri Prasad the musician wishes for Janhvi Kapoor to star in an item song in Pushpa 3

ಸೀಕ್ವೆಲ್‌ನಲ್ಲಿ 'ಕಿಸ್ಸಿಕ್' ಸಾಂಗ್ ಬಂದಿತ್ತು. ಶ್ರೀಲೀಲಾ ಕೂಡ ಡ್ಯಾನ್ಸಿಂಗ್ ನಂಬರ್‌ಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಆದರೂ 'ಊ ಅಂಟಾವ' ಮ್ಯಾಜಿಕ್ ರಿಪೀಟ್ ಆಗಲಿಲ್ಲ. ಸದ್ಯ 'ಪುಷ್ಪ'-3 ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಯಾರು ಕುಣಿಯುತ್ತಾರೆ? ಎನ್ನುವ ಬಗ್ಗೆ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಸ್ವತಃ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟಾಲಿವುಡ್ ರಾಕ್‌ಸ್ಟಾರ್ ಮಾತನಾಡಿದ್ದಾರೆ.

"ಪುಷ್ಪ-2 ಚಿತ್ರದ ಐಟಂ ಸಾಂಗ್‌ನಲ್ಲಿ ಯಾರೇ ಕುಣಿದರೂ ನ್ಯಾಷನಲ್ ಲೆವೆಲ್‌ನಲ್ಲಿ ಗಮನ ಸೆಳೆಯುತ್ತಾರೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ಆದರೆ ಆ ಹಾಡಿಗೆ ಶ್ರೀಲೀಲಾ ಒಳ್ಳೆ ಆಯ್ಕೆ ಅಂತ ನಾನು ಮೊದಲೇ ನಿರ್ಮಾಪಕರಿಗೆ ಹೇಳಿದ್ದೆ. ಕಾರಣ ಆಕೆ ಅದ್ಭುತ ಡ್ಯಾನ್ಸರ್" ಎಂದು ದೇವಿಶ್ರೀ ಪ್ರಸಾದ್ ಹೇಳಿದ್ದಾರೆ.

ಇನ್ನು ದೇವಿಶ್ರೀ ಪ್ರಸಾದ್ ಸಂಗೀತದ ಐಟಂ ಸಾಂಗ್‌ಗಳಲ್ಲಿ ಸ್ಟಾರ್ ನಟಿಯರು ಹೆಜ್ಜೆ ಹಾಕಿ ಸಕ್ಸಸ್‌ ಕಂಡಿದ್ದಾರೆ. 'ಜನತಾ ಗ್ಯಾರೇಜ್' ಚಿತ್ರದಲ್ಲಿ ಕಾಜಲ್ ಅಗರ್‌ವಾಲ್, 'ರಂಗಸ್ಥಳಂ' ಚಿತ್ರದಲ್ಲಿ ಪೂಜಾ ಹೆಗ್ಡೆ, 'ಪುಷ್ಪ' ಚಿತ್ರದಲ್ಲಿ ಸಮಂತಾ, 'ಪುಷ್ಪ-2' ಚಿತ್ರದಲ್ಲಿ ಶ್ರೀಲೀಲಾ ಲಿಸ್ಟ್‌ನಲ್ಲಿದ್ದಾರೆ. ಅವರೆಲ್ಲಾ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಸ್ಪೆಷಲ್ ಸಾಂಗ್‌ಗೆ ಕುಣಿದು ಗೆದ್ದರು ಎಂದು ಡಿಎಸ್‌ಪಿ ತಿಳಿಸಿದ್ದಾರೆ.

Devi Sri Prasad the musician wishes for Janhvi Kapoor to star in an item song in Pushpa 3

'ಪುಷ್ಪ'- 3 ಚಿತ್ರದ ಬಗ್ಗೆಯೂ ದೇವಿಶ್ರೀ ಪ್ರಸಾದ್ ಪ್ರಸ್ತಾಪಿಸಿದ್ದಾರೆ. ಆ ಚಿತ್ರದಲ್ಲಿ ಯಾರು ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಬಹುದು ಎನ್ನುವ ಪ್ರಶ್ನೆಗೆ "ಅದು ಸಾಂಗ್‌ ಮೇಲೆ ಡಿಪೆಂಡ್ ಆಗುತ್ತದೆ. ನಿರ್ಮಾಪಕ, ನಿರ್ದೇಶಕರದ್ದೇ ಅಂತಿಮ ತೀರ್ಮಾಣ ಆಗಿರುತ್ತದೆ. ಸಾಂಗ್‌ಗೆ ತಕ್ಕಂತೆ ಆಯ್ಕೆ ಮಾಡುತ್ತಾರೆ. ನನಗೆ ವೈಯಕ್ತಿಕವಾಗಿ ಸಾಯಿ ಪಲ್ಲವಿ ಡ್ಯಾನ್ಸ್ ಅಂದರೆ ಬಹಳ ಇಷ್ಟ. ನಾನು ಆಕೆಯ ದೊಡ್ಡ ಅಭಿಮಾನಿ. ಜಾನ್ವಿ ಕಪೂರ್ ಕೂಡ ಒಳ್ಳೆ ಡ್ಯಾನ್ಸರ್. ಆಕೆಯ ಸಾಂಗ್ಸ್ ನೋಡಿದ್ದೀನಿ. ಆಕೆಯ ತಾಯಿ ಶ್ರೀದೇವಿ ಅವರಲ್ಲಿದ್ದ ಗ್ರೇಸ್ ಇದೆ. 'ಪುಷ್ಪ- 3' ಚಿತ್ರದ ಐಟಂ ಸಾಂಗ್‌ಗೆ ಜಾನ್ವಿ ಒಳ್ಳೆ ಆಯ್ಕೆ ಆಗಬಹುದು ನನ್ನ ಅಭಿಪ್ರಾಯ" ಎಂದು ದೇವಿಶ್ರೀ ವಿವರಿಸಿದ್ದಾರೆ.

ಅಂದಹಾಗೆ 'ಪುಷ್ಪ'- 3 ಚಿತ್ರದಲ್ಲಿ ಯಾರು ನಟಿಸುತ್ತಾರೆ? ಯಾರು ಆಕ್ಷನ್ ಕಟ್ ಹೇಳ್ತಾರೆ? ಯಾವಾಗ ಶುರು ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. 'ಪುಷ್ಪ'- 2 ಕ್ಲೈಮ್ಯಾಕ್ಸ್‌ನಲ್ಲಿ ಕತೆ ಮುಂದುವರೆಸುವುದಕ್ಕೆ ಲಿಂಕ್ ಕೊಟ್ಟು ಬಿಡಲಾಗಿದೆ. ಮುಂದಿನ ಭಾಗದಲ್ಲಿ ವಿಜಯ್ ದೇವರಕೊಂಡ ವಿಲನ್ ಆಗಿ ಅಬ್ಬರಿಸುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ. ಸುಕುಮಾರ್ ಬದಲು ಬೇರೆ ಯಾರಾದರೂ ಆಕ್ಷನ್ ಕಟ್ ಹೇಳ್ತಾರಾ? ಕಾದು ನೋಡಬೇಕಿದೆ.

More from Filmibeat

English summary
Musician Devi Sri Prasad hopes this actress will feature in an item song for the film Pushpa 3;
Read more about: tollywood pushpa janhvi kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X