'ಪುಷ್ಪ' ಸಿನಿಮಾದಲ್ಲಿ ಡಾಲಿ ಧನಂಜಯ್ ಅವತಾರ ಹೀಗಿದೆ ನೋಡಿ

By ಫಿಲ್ಮಿಬೀಟ್ ಡೆಸ್ಕ್

ನಟ ಧನಂಜಯ್ ಹುಟ್ಟುಹಬ್ಬ ಇಂದು (ಆಗಸ್ಟ್ 23). ಇದೇ ಸುಸಂದರ್ಭದಲ್ಲಿ ಧನಂಜಯ್ ನಟಿಸಿರುವ ಸಿನಿಮಾಗಳ ಪೋಸ್ಟರ್‌ಗಳು, ಟೀಸರ್‌ಗಳ ಜೊತೆಗೆ ಹೊಸ ಸಿನಿಮಾಗಳ ಘೊಷಣೆ ಸಹ ಆಗಿವೆ.

ಡಾಲಿ ಧನಂಜಯ್ ನಟಿಸಿರುವ ಅತಿ ನಿರೀಕ್ಷಿತ ಸಿನಿಮಾ ತೆಲುಗಿನ 'ಪುಷ್ಪ' ಚಿತ್ರತಂಡ ಧನಂಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಸಿನಿಮಾದಲ್ಲಿನ ಧನಂಜಯ್ ಲುಕ್‌ನ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದೆ.

'ಪುಷ್ಪ' ಸಿನಿಮಾದಲ್ಲಿ ಧನಂಜಯ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದಷ್ಟೆ ಗೊತ್ತಿತ್ತು. ಆದರೆ ಧನಂಜಯ್ ಪಾತ್ರ ಎಂಥಹದ್ದು ಪಾತ್ರದ ಹೆಸರೇನು ಎಂಬುದು ಬಹಿರಂಗಗೊಂಡಿರಲಿಲ್ಲ. ಆದರೆ 'ಪುಷ್ಪ' ಚಿತ್ರತಂಡ ಇಂದು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಧನಂಜಯ್ ಪಾತ್ರದ ಬಗ್ಗೆ ಕೆಲವು ಮಾಹಿತಿಗಳು ಅಡಕವಾಗಿವೆ.

ಕ್ರೂರ ವಿಲನ್ ಪಾತ್ರದಲ್ಲಿ ಧನಂಜಯ್

ಕ್ರೂರ ವಿಲನ್ ಪಾತ್ರದಲ್ಲಿ ಧನಂಜಯ್

'ಪುಷ್ಪ' ಸಿನಿಮಾವು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಧನಂಜಯ್ ಪಕ್ಕಾ ವಿಲನ್‌ ಮಾದರಿಯಲ್ಲಿ ಕಾಣುತ್ತಿದ್ದಾರೆ. ಒಳ್ಳೆಯತನದ ಲವ-ಲೇಶವೂ ಇಲ್ಲದ ವ್ಯಕ್ತಿಯ ಪಾತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ ಎಂಬುದು ಪೋಸ್ಟರ್‌ನಲ್ಲಿನ ಧನಂಜಯ್ ಲುಕ್‌ನಿಂದಲೇ ಗೊತ್ತಾಗುತ್ತಿದೆ. ಸ್ವಭಾವತಃ ಮಿತ ಭಾಷಿ, ಮಾನವೀಯ, ಸರಳ ವ್ಯಕ್ತಿಯಾದ ಧನಂಜಯ್ ಕ್ರೂರ ವಿಲನ್‌ ಪಾತ್ರಕ್ಕೆ ಜೀವ ತುಂಬುವುದು ಕಲೆಗಿರುವ ಸಾಧ್ಯತೆಗಳನ್ನು ಮನನ ಮಾಡಿಸುತ್ತದೆ.

ಧನಂಜಯ್ ನಿರ್ವಹಿಸುತ್ತಿರುವ ಪಾತ್ರದ ಸೂಕ್ಷ್ಮ ಪರಿಚಯ

ಧನಂಜಯ್ ನಿರ್ವಹಿಸುತ್ತಿರುವ ಪಾತ್ರದ ಸೂಕ್ಷ್ಮ ಪರಿಚಯ

'ಪುಷ್ಪ' ಸಿನಿಮಾದಲ್ಲಿ ಧನಂಜಯ್ ಹೆಸರು ಜಾಲಿ ರೆಡ್ಡಿ. ಕನ್ನಡದಲ್ಲಿ ಡಾಲಿ ಧನಂಜಯ್ ಆಗಿ ಹೆಸರಾಗಿರುವ ನಟ 'ಪುಷ್ಪ' ಬಿಡುಗಡೆ ನಂತರ ತೆಲುಗು ರಾಜ್ಯಗಳಲ್ಲಿ 'ಜಾಲಿ ರೆಡ್ಡಿ'ಯಾಗಿ ಗುರುತಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೈಗೆ ಮಲ್ಲಿಗೆ ಸುತ್ತಿಕೊಂಡು, ಬೆರಳ ನಡುವೆ ಸಿಗರೇಟು ಸಿಗಿಸಿಕೊಂಡು ಅಮಲು ತುಂಬಿದ ಕಣ್ಣಲ್ಲಿ ಕ್ರೂರತನವೂ ಇಣುಕುವಂತೆ ನೋಡುತ್ತಿರುವ ನೋಟ ಧನಂಜಯ್ ನಿರ್ವಹಿಸುತ್ತಿರುವ ಪಾತ್ರದ ಸೂಕ್ಷ್ಮ ಪರಿಚಯ ಮಾಡಿಕೊಡುತ್ತಿದೆ.

ಧನಂಜಯ್ ನಟಿಸುತ್ತಿರುವ ಎರಡನೇ ಸಿನಿಮಾ 'ಪುಷ್ಪ'

ಧನಂಜಯ್ ನಟಿಸುತ್ತಿರುವ ಎರಡನೇ ಸಿನಿಮಾ 'ಪುಷ್ಪ'

'ಪುಷ್ಪ' ಸಿನಿಮಾವು ಧನಂಜಯ್‌ರ ಎರಡನೇ ತೆಲುಗು ಸಿನಿಮಾ. ಈ ಹಿಂದೆ 'ಭೈರವ ಗೀತ' ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. 'ಪುಷ್ಪ' ಸಿನಿಮಾದ ಬಗ್ಗೆ ಧನಂಜಯ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಈ ಹಿಂದೆ ಮಾತನಾಡಿದ್ದ ಧನಂಜಯ್, ''ನಿರ್ದೇಶಕ ಸುಕುಮಾರ್ ನನ್ನ 'ಟಗರು' ಸಿನಿಮಾ ನೋಡಿದ್ದರು. 'ಭೈರವ ಗೀತ' ಸಹ ನೋಡಿದ್ದರು. ನನ್ನ ನಟನೆ ಇಷ್ಟವಾಗಿ ಕರೆಸಿಕೊಂಡರು. ಮೊದಲ ನೋಟದಲ್ಲಿಯೇ ನನ್ನನ್ನು 'ಪುಷ್ಪ' ಸಿನಿಮಾದ ಪಾತ್ರಕ್ಕೆ ಆಯ್ಕೆ ಮಾಡಿದರು'' ಎಂದಿದ್ದರು ಧನಂಜಯ್.

ರಶ್ಮಿಕಾ ಮಂದಣ್ಣ ನಾಯಕಿ, ಕಿಶೋರ್ ಸಹ ಅಭಿನಯ

ರಶ್ಮಿಕಾ ಮಂದಣ್ಣ ನಾಯಕಿ, ಕಿಶೋರ್ ಸಹ ಅಭಿನಯ

'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ನಾಯಕ ನಟನಾಗಿ ನಟಿಸುತ್ತಿದ್ದರೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾದಲ್ಲಿ ಕನ್ನಡಿಗ ಕಿಶೋರ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದ ವಿಲನ್ ಮಲಯಾಳಂ ಅದ್ಭುತ ನಟ ಫಹಾದ್ ಫಾಸಿಲ್. ಸಿನಿಮಾವನ್ನು ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದಾರೆ. ಈ ಹಿಂದೆ 'ಆರ್ಯಾ', 'ರಂಗಸ್ಥಳಂ', 'ನಾನ್ನಕು ಪ್ರೇಮತೊ' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. 'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆದಾರನ ಕುರಿತ ಕತೆಯಾಗಿದ್ದು, ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ. 'ಪುಷ್ಪ' ಸಿನಿಮಾದ ಮೊದಲ ಭಾಗವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Actor Dhananjay acting as Jolly Reddy in Allu Arjun Starer Pushpa Movie; Poster Released on Dhananjay's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X