For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ತೆಲುಗು ಸಿನಿಮಾದಲ್ಲಿ ನಟರಾಕ್ಷಸ ಧನಂಜಯ್

  |

  ನಟ ಧನಂಜಯ್ ಕನ್ನಡದಲ್ಲಿ ಸಾಲು-ಸಾಲು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರ ಪ್ರತಿಭೆ ಮೆಚ್ಚಿ ಪರಭಾಷೆಗಳಿಂದಲೂ ಸತತ ಆಫರ್‌ಗಳು ಬರುತ್ತವೇ ಇವೆ.

  ಈಗಾಗಲೇ ತೆಲುಗು ಸಿನಿಮಾ ಒಂದರಲ್ಲಿ ನಟಿಸಿರುವ ಧನಂಜಯ್, ಪುಷ್ಪಾ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಮತ್ತೊಂದು ತೆಲುಗು ಸಿನಿಮಾದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದಾರೆ ಧನಂಜಯ್.

  ತೆಲುಗು ಖ್ಯಾತ ನಿರ್ಮಾಪಕರೊಬ್ಬರ ಪುತ್ರ ನಾಯಕನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದ್ದಾರಂತೆ. ಅದರಲ್ಲಿಯೂ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  ಅಲ್ಲು ಅರ್ಜುನ್ ನಟಿಸುತ್ತಿರುವ ಪುಷ್ಪಾ ಸಿನಿಮಾದಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ವಿಲನ್ ಆಗಿ ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಸಹ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ನಟಿಸಬೇಕಿದ್ದ ಪಾತ್ರ ವಿಕ್ರಂ ಪಾಲಾಗಿದೆ.

  ಕನ್ನಡದಲ್ಲಿಯೂ ಧನಂಜಯ್ ಸಾಕಷ್ಟು ಬ್ಯುಸಿಯಾಗಿದ್ದಾರೆ. ರತ್ನನ್ ಪರ್ಪಂಚ, ಶಿವರಾಜ್ ಕುಮಾರ್ ಜೊತೆಗೆ ಶಿವಣ್ಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಧನಂಜಯ್.

  English summary
  Kannada actor Dhananjay acting in another Telugu movie. He is part of Pushpa Telugu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X