For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಜೊತೆ ಡಾಲಿ ಧನಂಜಯ್ ಸಿನಿಮಾ: ಅವಕಾಶ ಸಿಕ್ಕಿದ್ದು ಹೇಗೆ?

  |

  ನಟ ಡಾಲಿ ಧನಂಜಯ್ ನಟನಾ ಪ್ರತಿಭೆ ಎಂಥಹದ್ದು ಎಂಬುದನ್ನು ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. 'ಟಗರು' ಸಿನಿಮಾದಲ್ಲಿ ಡಾಲಿಯಾಗಿ ಮಿಂಚಿರುವ ಧನಂಜಯ್ 'ಅಲ್ಲಮ' ಸಿನಿಮಾದಲ್ಲಿ ಅಲ್ಲಮ ಪ್ರಭುವಾಗಿಯೂ ಪ್ರೇಕ್ಷಕರ ಮನ ಗೆದ್ದಿದ್ದಾರೆ.

  ಅಲ್ಲು ಅರ್ಜುನ್ ಜೊತೆ ನಟಿಸೋ ಅವಕಾಶ ಸಿಕ್ಕಿದ್ದು ಹೇಗೆ ಅನ್ನೋದನ್ನ ಹೇಳಿದ ಡಾಲಿ | Filmibeat Kannada

  ಡಾಲಿ ಧನಂಜಯ್ ನಟನೆಗೆ ಪರಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಲೇ ಇರುತ್ತವೆ. ಈಗಾಗಲೇ 'ಭೈರವಗೀತ' ತೆಲುಗು ಸಿನಿಮಾ ಮಾಡಿರುವ ಧನಂಜಯ್, ಇದೀಗ ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

  ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ಕ್ಕೆ ಡಾಲಿ ಧನಂಜಯ್ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಅವರೇ ಸಾಮಾಜಿಕ ಜಾಲತಾಣ ಲೈವ್‌ ಒಂದರಲ್ಲಿ ಹಂಚಿಕೊಂಡಿದ್ದಾರೆ.

  ಸಿನಿಮಾ ನೋಡಿ ನಟನೆ ಇಷ್ಟಪಟ್ಟಿದ್ದರು ಸುಕುಮಾರ್: ಧನಂಜಯ್

  ಸಿನಿಮಾ ನೋಡಿ ನಟನೆ ಇಷ್ಟಪಟ್ಟಿದ್ದರು ಸುಕುಮಾರ್: ಧನಂಜಯ್

  ಸುಕುಮಾರ್‌, ಡಾಲಿ ಧನಂಜಯ್ ನಟಿಸಿದ್ದ 'ಭೈರವಗೀತ' ಹಾಗೂ 'ಟಗರು' ಸಿನಿಮಾ ನೋಡಿದ್ದರಂತೆ. ಈ ಎರಡೂ ಸಿನಿಮಾದಲ್ಲಿ ನಟಿಸಿರುವ ನಟ ಒಬ್ಬನೇನಾ? ಎಂಬುದೇ ಅವರಿಗೆ ನಂಬಲು ಕಷ್ಟವಾಗಿತ್ತಂತೆ. ಈ ಎರಡೂ ಸಿನಿಮಾಗಳಲ್ಲಿ ಧನಂಜಯ್ ನಟನೆ ಕಂಡು ಇಷ್ಟಪಟ್ಟು 'ಪುಷ್ಪ' ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ ಸುಕುಮಾರ್.

  ಮೊದಲ ಭೇಟಿಯಲ್ಲಿಯೇ ನಾನವರಿಗೆ ಕನೆಕ್ಟ್ ಆದೆ: ಧನಂಜಯ್

  ಮೊದಲ ಭೇಟಿಯಲ್ಲಿಯೇ ನಾನವರಿಗೆ ಕನೆಕ್ಟ್ ಆದೆ: ಧನಂಜಯ್

  'ನನ್ನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಸುಕುಮಾರ್‌ಗೆ ಇಷ್ಟವಾಯಿತಂತೆ. 'ಪುಷ್ಪ' ಸಿನಿಮಾದ ಪಾತ್ರವೊಂದಕ್ಕೆ ನಾನೇ ಬೇಕು ಎಂದು ಕರೆಸಿಕೊಂಡರು. ಮೊದಲ ಭೇಟಿಯಲ್ಲಿಯೇ ನನ್ನನ್ನು ಸಿನಿಮಾದ ಪಾತ್ರಕ್ಕೆ ಓಕೆ ಮಾಡಿದರು. ನಾನೂ ಸಹ ಅವರೊಟ್ಟಿಗೆ ಮೊದಲ ಭೇಟಿಗೆ ಕನೆಕ್ಟ್ ಆದೆ' ಎಂದಿದ್ದಾರೆ ಧನಂಜಯ್.

  ಒಂದೊಳ್ಳೆ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ 'ಪುಷ್ಪ'

  ಒಂದೊಳ್ಳೆ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ 'ಪುಷ್ಪ'

  'ನಾನು ಸುಕುಮಾರ್ ಸಿನಿಮಾಗಳ ಅಭಿಮಾನಿ. ಅವರೊಬ್ಬ ಅದ್ಭುತ ನಿರ್ದೇಶಕ. ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿರುವುದು ಸಹ ಬಹಳ ಖುಷಿಯ ವಿಷಯ. 'ಪುಷ್ಪ' ಒಂದೊಳ್ಳೆ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ. ನಾನೊಬ್ಬ ಒಳ್ಳೆಯ ನಟ ಅನ್ನೋದು ಗಡಿ ದಾಟಿ ಗೊತ್ತಾಗುತ್ತೆ' ಅಂದಿದ್ದಾರೆ ಸುಕುಮಾರ್.

  ಸಿನಿಮಾದಲ್ಲಿ ಖ್ಯಾತ ನಟರ ದಂಡೇ ಇದೆ

  ಸಿನಿಮಾದಲ್ಲಿ ಖ್ಯಾತ ನಟರ ದಂಡೇ ಇದೆ

  'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯ, ಗುಂಪಿನ ಕತೆಯಾಗಿದ್ದು, ಸಿನಿಮಾದಲ್ಲಿ ಧನಂಜಯ್ ಅವರಿಗೆ ಪ್ರಮುಖ ಪಾತ್ರವೊಂದನ್ನು ನೀಡಲಾಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಾಯಕ, ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾದಲ್ಲಿ ಖ್ಯಾತ ನಟರೇ ದಂಡೇ ಇದೆ. ಫಹಾದ್ ಫಾಸಿಲ್, ತಮಿಳಿನ ಚಿಯಾನ್ ವಿಕ್ರಂ ಸಹ ಇದ್ದಾರೆ.

  English summary
  Actor Dhananjay talked about how he selected for movie 'Pushpa'. He said director Sukumar like my acting in Tagaru and Bhairava Geeta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X