For Quick Alerts
  ALLOW NOTIFICATIONS  
  For Daily Alerts

  10 ವರ್ಷಗಳ ಬಳಿಕ ಮತ್ತೆ ಬಿಡುಗಡೆಯಾಗ್ತಿದೆ 3 ಸಿನಿಮಾ; ಹೇಗಿದೆ ಬುಕಿಂಗ್?

  |

  2012ರ ಸಮಯದಲ್ಲಿ ವೈ ದಿಸ್ ಕೊಲವೆರಿ ಡಿ ಎಂಬ ಹಾಡಿನ ಮೂಲಕ ಇಡೀ ದೇಶ ವ್ಯಾಪಿ ಗುರುತಿಸಿಕೊಂಡಿದ್ದ ಧನುಷ್ ಮತ್ತು ಶ್ರುತಿ ಹಾಸನ್ ಅಭಿನಯದ 3 ಚಿತ್ರ ಇದೀಗ ಮರು ಬಿಡುಗಡೆಯಾಗುತ್ತಿದೆ. 2012ರ ಮಾರ್ಚ್ 30ರಂದು ತೆರೆಕಂಡಿದ್ದ 3 ಚಿತ್ರಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಆರ್ ಧನುಷ್ ಅವರ ನಿರ್ದೇಶನವಿತ್ತು.

  ಶಾಲೆಯಲ್ಲಿ ಶುರುವಾಗುವ ನಾಯಕ ಮತ್ತು ನಾಯಕಿ ನಡುವಿನ ಪ್ರೀತಿ ಮದುವೆ ಹಾಗೂ ಸುಖ ಸಂಸಾರಕ್ಕೆ ತಿರುಗಿ ನಂತರ ನಾಯಕ ನಟ ಖಿನ್ನತೆಗೆ ಒಳಗಾಗಿ ನರಳಾಡಿ ಆತ್ಮ ಹತ್ಯೆಗೆ ಶರಣಾಗುವ ಕಥೆಯನ್ನು ಹೊಂದಿದ್ದ ಈ ಚಿತ್ರ ಆಗಿನ ಸಮಯಕ್ಕೆ ಮಿಶ್ರಪ್ರತಿಕ್ರಿಯೆ ಪಡೆದುಕೊಂಡ ಕಾರಣ ನಿರೀಕ್ಷಿಸಿದ ಯಶಸ್ಸನ್ನು ಕಾಣುವಲ್ಲಿ ವಿಫಲವಾಗಿತ್ತು.

  ಫೋಟೋ ವೈರಲ್: ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್ಫೋಟೋ ವೈರಲ್: ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

  ಚಿತ್ರಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ 3 ಚಿತ್ರವನ್ನು ಮೆಚ್ಚಿಕೊಂಡು ಇದೊಂದು ಆಲ್ ಟೈಮ್ ಕ್ಲಾಸಿಕ್ ಸಿನಿಮಾ ಎಂದು ಹೊಗಳಿದವರು ಸಹ ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಅದರಲ್ಲಿಯೂ ಇತ್ತೀಚಿಗೆ ಸಾಮಾಜಿಕ ಜಾಲತಾಣದ ಯುಗ ಆರಂಭವಾದ ನಂತರವಂತೂ '3 ಮೂವಿ ಲವರ್ಸ್' ಎಂಬ ವಿಶೇಷ ಬಳಗವೇ ಹುಟ್ಟಿಕೊಂಡಿತ್ತು.

  ಈ ಚಿತ್ರವನ್ನು ಪದೇ ಪದೇ ಮೊಬೈಲ್ ಹಾಗೂ ಟಿವಿಯಲ್ಲಿ ವೀಕ್ಷಿಸುತ್ತಿದ್ದ ಚಿತ್ರದ ಪ್ರೇಮಿಗಳು ಇಂತಹ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುವ ಅವಕಾಶ ಸಿಗಲಿಲ್ಲ ಎಂಬ ಬೇಸರದಲ್ಲಿದ್ದರು.

  Dhanush and Shruti Haasans 3 movie Telugu version re releasing on 8th September

  ಅಂತಹ '3 ಮೂವಿ ಲವರ್ಸ್'ಗೆ ಇದೀಗ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಿಬಂದಿದೆ. ಅದು ಕೂಡ ಕೇವಲ ತೆಲುಗು ಸಿನಿಪ್ರೇಕ್ಷಕರಿಗೆ ಮಾತ್ರ ಈ ಅವಕಾಶ ದೊರಕಿದೆ. ಈ ಚಿತ್ರದ ತೆಲುಗು ಡಬ್ಬಿಂಗ್ ಅನ್ನು ನಾಳೆ ( ಸೆಪ್ಟೆಂಬರ್ 8 ) ತೆಲುಗು ರಾಜ್ಯಗಳಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಹೈದರಾಬಾದ್ ನಗರ ಒಂದರಲ್ಲಿಯೇ 60ಕ್ಕೂ ಹೆಚ್ಚು ಪ್ರದರ್ಶನಗಳು ಆಯೋಜನೆಗೊಂಡಿವೆ. ಹೀಗೆ ಈ ಚಿತ್ರ ರೀ ರಿಲೀಸ್ ಆಗುತ್ತಿರುವುದರ ಕುರಿತು ಸಹ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲ ಪ್ರದರ್ಶನಗಳ ಟಿಕೆಟ್ ಸೋಲ್ಡ್ ಔಟ್ ಕೂಡ ಆಗುತ್ತಿದೆ.

  English summary
  Dhanush and Shruti Haasan's 3 movie Telugu version re releasing on 8th September. Read on
  Wednesday, September 7, 2022, 23:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X