ಅಲ್ಲಿ ಮಾತ್ರ 'ಕಾಂತಾರ'- 1 ಎದುರು 'ಧುರಂಧರ್- 2' ಆರ್ಭಟ ನಡೀಲಿಲ್ಲ

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್-2' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. 10 ದಿನಗಳಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಎರಡನೇ ವಾರವೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ. ಇನ್ನು 15 ದಿನ ಈ ಸ್ಪೈ ಥ್ರಿಲ್ಲರ್ ಸಿನಿಮಾ ಕ್ರೇಜ್ ಕಮ್ಮಿ ಆಗುವಂತೆ ಕಾಣ್ತಿಲ್ಲ.

ಕರ್ನಾಟಕದಲ್ಲಿ ಕೂಡ 'ಧುರಂಧರ್-2' ಸಿನಿಮಾ ಹೊಸ ದಾಖಲೆ ಬರೆದಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಕನ್ನಡ ಡಬ್ಬಿಂಗ್ ವರ್ಷನ್ ಕೂಡ ಪ್ರೇಕ್ಷಕರ ಮನಗೆದ್ದಿದೆ. ಉತ್ತರ ಭಾರತ ಬಿಟ್ಟರೆ ದಕ್ಷಿಣದಲ್ಲಿ ಕರ್ನಾಟಕದಲ್ಲೇ ಹೆಚ್ಚು ಗಳಿಕೆ ಕಂಡಿದೆ. ದೇಶವಿದೇಶಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ಧುರಂಧರ್- 2' ಅದೊಂದು ಜಾಗದಲ್ಲಿ ಹಿಂದೆ ಉಳಿದಿದೆ. ಅಲ್ಲಿ 'ಕಾಂತಾರ-1' ಕ್ರೇಜ್ ಮೀರಿಸೋಕು ಸಾಧ್ಯವಾಗಿಲ್ಲ.

Dhurandhar-2 Crosses 1000 Cr but Fails to Match Kantara-1 Craze in Andhra and Telangana

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ 'ಧುರಂಧರ್- 2' ಈಗ(ವಿಕಿಪಿಡಿಯ ಮಾಹಿತಿ ಪ್ರಕಾರ) 4ನೇ ಸ್ಥಾನದಲ್ಲಿದೆ. 'ಧುರಂಧರ್' ಸಿನಿಮಾ 1350 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದನ್ನು ಮೀರಿಸಿ ಸೀಕ್ವೆಲ್ 1402 ಕೋಟಿ ರೂ. ದೋಚಿದೆ. ಶೀಘ್ರದಲ್ಲೇ 'ಪುಷ್ಪ'-2 ಸಿನಿಮಾ ಆಲ್‌ಟೈಮ್ ಕಲೆಕ್ಷನ್(1600-1800 ಕೋಟಿ ರೂ) ದಾಖಲೆ ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ಸುಳಿವು ಸಿಕ್ತಿದೆ. ಆದರೆ ಕರ್ನಾಟಕ ಹೊರತುಪಡಿಸಿ ತಮಿಳುನಾಟು, ಕೇರಳ ಹಾಗೂ ತಮಿಳುನಾಡಿನಲ್ಲಿ 'ಧುರಂಧರ್- 2' ಅಬ್ಬರ ಕೊಂಚ ಕಮ್ಮಿಯಿದೆ.

ಆಂಧ್ರ, ತೆಲಂಗಾಣದಲ್ಲಿ ಕೂಡ ದೊಡ್ಡಮಟ್ಟದಲ್ಲಿ 'ಧುರಂಧರ್- 2' ಸಿನಿಮಾ ಬಿಡುಗಡೆಯಾಗಿತ್ತು. ಆದರೆ 2 ವಾರಕ್ಕೆ 25ರಿಂದ 30 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. ತೆಲುಗು ರಾಜ್ಯಗಳಲ್ಲಿ 'ಕಾಂತಾರ- 1' ಚಿತ್ರಕ್ಕೆ ಸಿಕ್ಕಿದ್ದ ರೆಸ್ಪಾನ್ಸ್ ಕೂಡ ಆದಿತಧ್ಯರ್ ಚಿತ್ರಕ್ಕೆ ಸಿಕ್ತಿಲ್ಲ ಎನ್ನಲಾಗ್ತಿದೆ. ಅತಿಯಾದ ವೈಲೆನ್ಸ್ ಇದೆ ಎನ್ನುವ ಕಾರಣಕ್ಕೋ, ತೆಲುಗು ವರ್ಷನ್ ರಿಲೀಸ್ ಆಗಿದ್ದು ತಡವಾಗಿದ್ದಕ್ಕೆ ಈ ರೀತಿ ಆಗಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್ ಸಿನಿಮಾಗಳು ಆಂಧ್ರ, ತೆಲಂಗಾಣದಲ್ಲಿ ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟಿಸಿದ್ದ 'ವಾರ್'-2 ಸಿನಿಮಾ ಕೂಡ ಆಂಧ್ರ, ತೆಲಂಗಾಣದಲ್ಲಿ ಸೋತಿತ್ತು. ತೆಲುಗು ನಟ ತಾರಕ್ ನಟಿಸಿದ್ದು ಕೂಡ ಪ್ರಯೋಜನವಾಗಿರಲಿಲ್ಲ. 80 ಕೋಟಿ ರೂ.ಗೆ ರೈಟ್ಸ್ ಕೊಂಡುಕೊಂಡಿದ್ದ ವಿತರಕರು ಸೋಲನ್ನು ಒಪ್ಪಿಕೊಂಡಿದ್ದರು. 'ಕಾಂತಾರ- 1' ಚಿತ್ರಕ್ಕೆ ಟಿಕೆಟ್ ದರ ಹೆಚ್ಚಿಸಿದ್ದರೂ ತೆಲುಗು ರಾಜ್ಯಗಳಲ್ಲಿ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದರು.

ಕಳೆದ ವರ್ಷ ಅಕ್ಟೋಬರ್ 1ರಂದು ತೆರೆಕಂಡು 'ಕಾಂತಾರ-1' ಸಿನಿಮಾ ದಾಖಲೆ ಬರೆದಿತ್ತು. 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ವರ್ಷದ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿತ್ತು. ಆದರೆ ವರ್ಷದ ಕೊನೆಗೆ ಬಂದಿದ್ದ 'ಧುರಂಧರ್' ಸಿನಿಮಾ ಆ ದಾಖಲೆ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ'-1 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಮಾತ್ರವಲ್ಲ ಸಿನಿರಸಿಕರ ಮನಗೆದ್ದಿತ್ತು.

'ಧುರಂಧರ್-2' ದಾಖಲೆಗಳ ವಿಚಾರಕ್ಕೆ ಬಂದರೆ ಉತ್ತರ ಅಮೆರಿಕಾದಲ್ಲಿ 'ಬಾಹುಬಲಿ-2' ದಾಖಲೆ ಮುರಿದಿದೆ. ಈ ಮೂಲಕ ಉತ್ತರ ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 'ಕೆಜಿಎಫ್-2', 'ಜವಾನ್', 'ಆರ್‌ಆರ್‌ಆರ್' ಸೇರಿ ಸಾಕಷ್ಟು ಸಿನಿಮಾಗಳ ಕಲೆಕ್ಷನ್ ದಾಖಲೆ ಹಿಂದಿಕ್ಕಿದೆ. ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರಲ್ಲ. ಹಾಗಾಗಿ ಇನ್ನು ಒಂದು ತಿಂಗಳು ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಲಿದೆ.

ಕೆಲವರು 2ನೇ ಬಾರಿ, 3ನೇ ಬಾರಿ 'ಧುರಂಧರ್'-2 ಸಿನಿಮಾ ನೋಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಪೈರಸಿ ಕಾಪಿ ಆನ್‌ಲೈನ್‌ನಲ್ಲಿ ಲೀಕ್ ಆಗಿ ವೈರಲ್ ಆಗುತ್ತಿದೆ. ಆದರೂ ದೊಡ್ಡ ಪರದೆಯಲ್ಲೇ ಸಿನಿಮಾ ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ.

More from Filmibeat

Read more about: Dhurandhar 2 kantara chapter 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X