ನಟಿಸುವಾಗ ಮೋಸ ಮಾಡಿ ಸಿಕ್ಕಿಬಿದ್ರಾ ಅಕ್ಷಯ್ ಕುಮಾರ್? ವೀಡಿಯೋ ಡಿಲೀಟ್

ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಒಂದೇ ವಾರಕ್ಕೆ ಸಿನಿಮಾ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುತ್ತಿದೆ. ಪ್ರಭಾಸ್, ಅಕ್ಷಯ್‌ ಕುಮಾರ್, ಮೋಹನ್ ಲಾಲ್ ರೀತಿಯ ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿದ್ರು ಚಿತ್ರ ಗೆಲ್ಲಲಿಲ್ಲ.

'ಬೇಡರ ಕಣ್ಣಪ್ಪ', 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರಗಳಲ್ಲಿ ಇರುವ ಕಣ್ಣಪ್ಪನ ಕಥೆಯನ್ನೇ ಹೊರ ರೀತಿಯಲ್ಲಿ ಈ ಚಿತ್ರದಲ್ಲಿ ಹೇಳಿದ್ದಾರೆ. ಟೈಟಲ್ ರೋಲ್‌ನಲ್ಲಿ ವಿಷ್ಣು ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದರು. ಇನ್ನು ಶಿವನಾಗಿ ಅಕ್ಷಯ್‌ ಕುಮಾರ್ ಹಾಗೂ ಪಾರ್ವತಿಯಾಗಿ ಕಾಜಲ್ ಅಗರ್‌ವಾಲ್ ನಟಿಸಿದ್ದಾರೆ. ವಿಷ್ಣು ನಟನೆಗೆ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.

Did Akshay Kumar Use a Teleprompter in Kannappa Viral Video Sparks Controversy

ರುದ್ರನಾಗಿ ಪ್ರಭಾಸ್ ನಟನೆ ಚಿತ್ರದ ಹೈಲೆಟ್. ಯಂಗ್ ರೆಬಲ್ ಸ್ಟಾರ್‌ಗಾಗಿ ಕೆಲವರು ಸಿನಿಮಾ ನೋಡಲು ಬಯಸಿದ್ದು ಇದೆ. ಕಿರಾಟನಾಗಿ ಮೋಹಲ್ ಲಾಲ್ ಚಿತ್ರದಲ್ಲಿ ಮಿಂಚಿದ್ದಾರೆ. ಅದ್ಯಾಕೋ ಅಕ್ಷಯ್‌ ಕುಮಾರ್ ಪದೇ ಪದೆ ಟ್ರೋಲ್ ಆಗುತ್ತಿದ್ದಾರೆ. ಇದೀಗ ಕಣ್ಣಪ್ಪ ಚಿತ್ರದಲ್ಲಿ ನಟಿಸುವಾಗ ಡೈಲಾಗ್ ಹೇಳಲು ಅಕ್ಷಯ್ ಕುಮಾರ್ ಸರ್ಕಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಡೈಲಾಗ್ ನೆನಪಿಟ್ಟುಕೊಂಡು ಹೇಳುವ ಬದಲು ಟೆಲಿಪ್ರಾಂಪ್ಟರ್ ನೋಡಿ ಡೈಲಾಗ್ ಓದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಚಿತ್ರದ ಸನ್ನಿವೇಶವೊಂದರ ವೀಡಿಯೋ ತುಣಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಕ್ಷಯ್ ಕುಮಾರ್ ಪುಸ್ತಕ ಓದುವಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಣ್ಣುಗಳನ್ನು ತಿರುಗಿಸುವುದು ನೋಡಿದರೆ ಅರ್ಥವಾಗುತ್ತದೆ. ಇದನ್ನು ತೋರಿಸಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನೆಚ್ಚಿನ ನಟನ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ.

ಅಕ್ಷಯ್‌ ಕುಮಾರ್ ಬಾಲಿವುಡ್ ನಟ. ಹಾಗಾಗಿ ಅವರಿಗೆ ತೆಲುಗು ಡೈಲಾಗ್ ನೆನಪಿಟ್ಟುಕೊಂಡು ಹೇಳುವುದು ಕಷ್ಟವಾಗಬಹುದು. ಅದಕ್ಕೆ ಟೆಲಿಪ್ರಾಂಪ್ಟರ್ ನೋಡಿ ಹೇಳಿರಬಹುದು. ಅದರಲ್ಲಿ ತಪ್ಪು ಹುಡುಕುವ ಅವಶ್ಯಕತೆ ಇಲ್ಲ ಎಂದು ಅಕ್ಷಯ್ ಪರ ಕೆಲವರು ಬ್ಯಾಟ್ ಬೀಸಿದ್ದಾರೆ. ಆದರೆ ಬಹುತೇಕ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. 30 ವರ್ಷಗಳಿಂದ ಚಿತ್ರರಂಗದಲ್ಲಿದ್ದು ಸಣ್ಣ ಡೈಲಾಗ್ ನೆನಪಿಟ್ಟುಕೊಳ್ಳಲು ಆಗುವುದಿಲ್ಲವೇ? ಸುಮ್ಮನೆ ನಿವೃತ್ತಿ ಘೋಷಿಸಿ ಅಕ್ಷಯ್‌ ಕುಮಾರ್ ಎಂದು ಕಿಚಾಯಿಸುತ್ತಿದ್ದಾರೆ.

ಸದ್ಯ ವೈರಲ್ ಆಗಿದ್ದ ವೀಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ. ಅಕ್ಷಯ್ ಕುಮಾರ್ ಡೈಲಾಗ್ ಹೇಳಲು ಟೆಲಿಪ್ರಾಂಪ್ಟರ್ ಬಳಸುತ್ತಾರೆ ಎನ್ನುವ ಆರೋಪ ಕೇಳಿಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 'ಸರ್ಫಿರಾ' ಚಿತ್ರದ ದೃಶ್ಯವೊಂದರಲ್ಲಿ ಕೂಡ ಇದೇ ರೀತಿ ಟೆಲಿಪ್ರಾಂಪ್ಟರ್ ನೋಡುತ್ತಾ ಡೈಲಾಗ್ ಹೇಳಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

'ಕಣ್ಣಪ್ಪ' ಚಿತ್ರವನ್ನು ಮಂಚು ವಿಷ್ಣು ತಂದೆ ಮೋಹನ್ ಬಾಬು ನಿರ್ಮಾಣ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ದಿನ ಕೇವಲ 9 ಕೋಟಿ ರೂ. ಮಾತ್ರ ಗಳಿಕೆ ಕಂಡಿತ್ತು. ಪ್ರಭಾಸ್ ಹಾಗೂ ಮೋಹನ್ ಲಾಲ್ ಯಾವುದೇ ಸಂಭಾವನೆ ಪಡೆಯದೇ ಈ ಚಿತ್ರದಲ್ಲಿ ನಟಿಸಿದ್ದರು. ಅಕ್ಷಯ್ ಕುಮಾರ್ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಬಾಲಿವುಡ್‌ನಲ್ಲಿ ಅಕ್ಷಯ್‌ ಕುಮಾರ್ ಕ್ರೇಜ್ ಕಮ್ಮಿ ಆಗಿದೆ. ಆದರೂ ಹಿಟ್ ಸಿನಿಮಾಗಳಲ್ಲಿ ಖಿಲಾಡಿ ನಟಿಸುತ್ತಿದ್ದಾರೆ. ಈ ವರ್ಷ ಅಕ್ಕಿ ನಟಿಸಿದ 3 ಸಿನಿಮಾಗಳು ಬಂದು ಹೋಗಿದೆ. ಸೆಪ್ಟೆಂಬರ್ 19ರಂದು 'ಜಾಲಿ ಎಲ್‌ಎಲ್‌ಬಿ- 3' ಸಿನಿಮಾ ತೆರೆಗೆ ಬರಲಿದೆ. ಇನ್ನು 'ಭೂತ್ ಭಂಗ್ಲಾ', 'ವೆಲ್‌ಕಮ್‌ ಟು ದಿ ಜಂಗಲ್', 'ಹೇರಾ ಪೇರಿ- 3', 'ವೇದಾತ್ ಮರಾಠೆ ವೀರ್ ದೌಡ್ಲೆ ಸಾತ್' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Manchu Vishnu's 'Kannappa' shows Akshay Kumar allegedly reading Telugu dialogues from a teleprompter,
Read more about: akshay kumar bollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X