'ಪುಷ್ಪ' ಟ್ರೈಲರ್: ಮ್ಯೂಸಿಕ್ ಕದ್ದು ಮಾಡಿದ್ರಾ ದೇವಿಶ್ರೀ? ಕಾಲೆಳೆದ ನೆಟ್ಟಿಗರು
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್ ಅವರ ಲುಕ್, ಗೆಟಪ್ ಕಂಡು ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ. 'ಇದುವರೆಗೂ ಅಲ್ಲು ಅರ್ಜುನ್ ಮಾಡಿರದ ಸಿನಿಮಾ ಇದು, ಪಕ್ಕಾ ಸೂಪರ್ ಹಿಟ್' ಎಂಬ ಅಭಿಪ್ರಾಯ ಮೂಡಿದೆ.
ಆದ್ರೀಗ, ದೇವಿ ಶ್ರೀ ಪ್ರಸಾದ್ ಕೆಲಸದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪುಷ್ಪ ಟೀಸರ್‌ಗೆ ಮ್ಯೂಸಿಕ್ ನೀಡಿರುವ ಡಿಎಸ್‌ಪಿ ಬೇರೆ ಚಿತ್ರಗಳಿಂದ ಮ್ಯೂಸಿಕ್ ಕದ್ದಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಪುಷ್ಪ ಟೀಸರ್‌ನಲ್ಲಿ 50 ಸೆಕೆಂಡ್ ಇಂದ 60 ಸೆಕೆಂಡ್‌ವರೆಗೂ ಬರುವ ಮ್ಯೂಸಿಕ್ ತಲೈವಿ ಟೀಸರ್‌ನಲ್ಲೂ ಇದೆ. ಕಂಗನಾ ರಣಾವತ್ ನಟನೆಯ ತಲೈವಿ ಟೀಸರ್ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಫಸ್ಟ್ ಲುಕ್ ವಿಡಿಯೋದ 50 ಸೆಕೆಂಡ್ ಆದ್ಮೇಲೆ ಬರುವ ಮ್ಯೂಸಿಕ್ ಈಗ ಪುಷ್ಪ ಟೀಸರ್‌ನಲ್ಲಿರುವ ಹಿನ್ನೆಲೆ ಸಂಗೀತವನ್ನು ಹೋಲುತ್ತಿದೆ.

ಇದಷ್ಟೇ ಅಲ್ಲ ಅಕ್ಷಯ್ ಕುಮಾರ್ ನಟಿಸಿರುವ 'ಬೇಬಿ' ಚಿತ್ರದಲ್ಲೂ ಇದೇ ಮ್ಯೂಸಿಕ್ ಇದೆ. ಹಾಗೂ ಆವೆಂಜರ್ ಚಿತ್ರದಲ್ಲೂ ಈ ಬ್ಯಾಕ್ರೌಂಡ್ ಸ್ಕೋರ್ ಬರುತ್ತದೆ. ಆ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪುಷ್ಪ ಟೀಸರ್ ನೋಡಿ ಆರಂಭದಲ್ಲಿ ದೇವಿ ಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಪುಷ್ಪ ಚಿತ್ರಕ್ಕೆ ಡಿಎಸ್‌ಪಿ ಮ್ಯೂಸಿಕ್ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ವಿಮರ್ಶಿಸಲಾಗುತ್ತಿದೆ. ಈ ನಡುವೆ ಇಂತಹದೊಂದು ಆರೋಪ ಸ್ಟಾರ್ ಸಂಗೀತ ನಿರ್ದೇಶಕನ ಮೇಲೆ ಬಂದಿರುವುದು ಬೇಸರದ ಸಂಗತಿ.

ಇನ್ನುಳಿದಂತೆ ಸುಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕಿದ್ದಾರೆ.
Recommended Video
ಸದ್ಯಕ್ಕೆ ನಿಗದಿಯಾಗಿರುವಂತೆ ಆಗಸ್ಟ್ 13ಕ್ಕೆ ಪುಷ್ಪ ಸಿನಿಮಾ ತೆರೆಗೆ ಬರಬೇಕಿದೆ. ಆದರೆ, ಕೊರೊನಾ ಕಾರಣದಿಂದ ಮತ್ತೆ ರಿಲೀಸ್ ದಿನಾಂಕ ಮುಂದೂಡಿದರೂ ಅಚ್ಚರಿ ಇಲ್ಲ.


Click it and Unblock the Notifications











