For Quick Alerts
  ALLOW NOTIFICATIONS  
  For Daily Alerts

  BIG NEWS: ಡ್ರಗ್ಸ್ ಪ್ರಕರಣದಲ್ಲಿ ನಟ ಮಹೇಶ್ ಬಾಬು ಪತ್ನಿ ಹೆಸರು!?

  |

  ಡ್ರಗ್ಸ್ ಪ್ರಕರಣದ ಭೂತ ಚಿತ್ರರಂಗದ ಹೆಗಲೇರಿದೆ. ಬಾಲಿವುಡ್‌ನಲ್ಲಿ ಮೊದಲಿಗೆ ಪ್ರಾರಂಭವಾದ ಡ್ರಗ್ಸ್ ಪ್ರಕರಣ ನಂತರ ಸ್ಯಾಂಡಲ್‌ವುಡ್ ಈಗ ಪಕ್ಕದ ತೆಲುಗು ಸಿನಿಮಾರಂಗಕ್ಕೂ ಕಾಲಿಟ್ಟಿದೆ.

  ತೆಲುಗು ಸಿನಿಮಾ ಉದ್ಯಮದಲ್ಲಿಯೂ ಡ್ರಗ್ಸ್ ಚರ್ಚೆ ಜೋರಾಗಿ ನಡೆಯುತ್ತಿದ್ದು, ಆರಂಭದಲ್ಲಿ ಶ್ರೀರೆಡ್ಡಿ ಮತ್ತು ಇತರೆ ಕೆಲವು ವಿವಾದಿಂದಲೇ ಗುರುತಾಗಿರು ನಟ-ನಟಿಯರು 'ತೆಲುಗು ಸಿನಿರಂಗದಲ್ಲಿ ಡ್ರಗ್ಸ್ ವ್ಯಸನಿಗಳು ಇದ್ದಾರೆ' ಎಂದಿದ್ದರು.

  ಇದೀಗ ತೆಲುಗು ಸಿನಿಮಾಉದ್ಯಮದ ದೊಡ್ಡ ಸ್ಟಾರ್ ನ ಪತ್ನಿಯ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ. ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಡ್ರಗ್ಸ್‌ ಗಾಗಿ ಬೇಡಿಕೆ ಇಟ್ಟಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ.

  ಜಯಾ ಸಾಹಾ ವಾಟ್ಸ್‌ಆಪ್‌ ಚಾಟ್‌ ಕುರಿತು ತನಿಖೆ

  ಜಯಾ ಸಾಹಾ ವಾಟ್ಸ್‌ಆಪ್‌ ಚಾಟ್‌ ಕುರಿತು ತನಿಖೆ

  ಸುಶಾಂತ್ ಸಿಂಗ್ ಮಾಜಿ ವ್ಯವಸ್ಥಾಪಕ ಜಯ ಸಾಹಾ ಮೊಬೈಲ್‌ ಮೂಲಕ ಸಾಕಷ್ಟು ಮಾಹಿತಿ ಎನ್‌ಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಜಯಾ ಸಾಹಾ ವಾಟ್ಸ್‌ಆಪ್ ಮೂಲಕ ದೀಪಿಕಾ ಪಡುಕೋಣೆ ಹಾಗೂ ಆಕೆಯ ವ್ಯವಸ್ಥಾಪಕಿ ಕರಿಶ್ಮಾ ಪ್ರಕಾಶ್ ಹೆಸರು ಹೊರಗೆ ಬಂದಿದೆ.

  'ಎಂಡಿ' ಮಾದಕ ವಸ್ತುವಿಗೆ ಬೇಡಿಕೆ ಇಟ್ಟಿದ್ದ ನಮ್ರತಾ?

  'ಎಂಡಿ' ಮಾದಕ ವಸ್ತುವಿಗೆ ಬೇಡಿಕೆ ಇಟ್ಟಿದ್ದ ನಮ್ರತಾ?

  ಜಾಯಾ ಸಾಹಾ ಜೊತೆಗೆ ನಮ್ರತಾ ಶಿರೋಡ್ಕರ್ ಸಹ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ. ಹಿಂದೊಮ್ಮೆ ನಮ್ರತಾ ಮುಂಬೈ ಗೆ ಭೇಟಿ ನೀಡಿದ್ದಾಗ, ಜಯಾ ಸಾಹಾ ಅವರೊಂದಿಗೆ ಮಾತನಾಡಿ ಸಿಂಥೆಟಿಕ್ ಡ್ರಗ್ಸ್ ಆದ 'ಎಂಡಿ' ಗೆ ಬೇಡಿಕೆ ಇಟ್ಟಿದ್ದರು ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ನಮ್ರತಾ ಶಿರೋಡ್ಕರ್ ಹೆಸರನ್ನು ಜಯಾ ಸಾಹಾ, ಎನ್‌ಸಿಬಿ ಮುಂದೆ ಹೇಳಿದ್ದಾರೆ ಎನ್ನಲಾಗುತ್ತಿದೆ.

  ನಮ್ರತಾ ಹೆಸರು 'ಎನ್‌' ಎಂದು ಸೇವ್ ಮಾಡಿದ್ದ ಸಾಹಾ?

  ನಮ್ರತಾ ಹೆಸರು 'ಎನ್‌' ಎಂದು ಸೇವ್ ಮಾಡಿದ್ದ ಸಾಹಾ?

  ಜಯಾ ಸಾಹಾ, ದೀಪಿಕಾ ಪಡುಕೋಣೆ ಹೆಸರನ್ನು ಡಿ ಎಂತಲೂ ಆಕೆಯ ವ್ಯವಸ್ಥಾಪಕಿ ಹೆಸರನ್ನು 'ಕೆ' ಎಥಲೂ ಸೇವ್ ಮಾಡಿಕೊಂಡಿದ್ದ, ಅಂತೆಯೇ ನಮ್ರತಾ ಹೆಸರನ್ನು ಎನ್ ಎಂಥಲೂ ಸೇವ್ ಮಾಡಿಕೊಂಡಿದ್ದ ಎನ್ನಲಾಗಿದೆ. ಎನ್ ಎನ್ನುವುದು ನಮ್ರತಾ ಅವರ ಹೆಸರೇ ಎಂಬ ಬಗ್ಗೆ ಎನ್‌ಸಿಬಿ ಅಧಿಕೃತ ಮಾಹಿತಿ ನೀಡಬೇಕಿದೆ.

  ಪಾಪ, Prem ಅವತ್ತು ಪಟ್ಟ ಕಷ್ಟ ಅಷ್ಟಿಷ್ಟಲ್ಲ | Filmibeat Kannada
  ಅಭಿನಯದಿಂದ ದೂರ ಉಳಿದಿರುವ ನಮ್ರತಾ

  ಅಭಿನಯದಿಂದ ದೂರ ಉಳಿದಿರುವ ನಮ್ರತಾ

  ನಟ ಮಹೇಶ್ ಬಾಬು ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಭಾರತೀಯ ಸಿನಿಮಾ ರಂಗದಲ್ಲಿಯೇ ಪ್ರಖ್ಯಾತ ನಟ. ನಮ್ರತಾ ಶಿರೋಡ್ಕರ್ ಸಹ ನಟಿಯಾಗಿದ್ದವರು. ಮಹೇಶ್ ಬಾಬು ಜೊತೆಗೆ ವಿವಾಹದ ನಂತರ ಅಭಿನಯದಿಂದ ದೂರ ಉಳಿದಿದ್ದಾರೆ ನಮ್ರತಾ.

  English summary
  Mahesh Babu's Wife Namratha Shirodkar's name emerging in Drugs case. Media saying She contacted Jaya Saha for MD drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X