ಸದ್ದಿಲ್ಲದೇ ಶೋಭಿತಾ ಜೊತೆ ಮದುವೆಯಾದ ನಾಗಚೈತನ್ಯ ? ವೈರಲ್ ವೀಡಿಯೋದಲ್ಲೇನಿದೆ...?
ಕೆಲವರು ಪ್ರೇಮ ಪಾಶದಲ್ಲಿ ಸಿಲುಕಿ ಕಾಯಾ, ವಾಚಾ, ಮನಸಾ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ, ಮದುವೆಯಾದ ನಂತರ ಪರಸ್ಪರ ಅಸಹನೆ ಮತ್ತು ಅನುಮಾನ ಬೆಳೆಸಿಕೊಳ್ಳುತ್ತಾರೆ. ಆ ನಂತರ ಇನ್ನೂ ಸಾಧ್ಯವೇ ಇಲ್ಲ ಎಂದು ವಿಚ್ಛೇದನ ಪಡೆಯುತ್ತಾರೆ. ಪ್ರೀತಿಸಿ ಮದುವೆಯಾದವರು, ಮದುವೆಯಾಗಲೆಂದೇ ಪ್ರೀತಿಸಿದವರು ಹೀಗೇ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸದ್ಯಕ್ಕೆ ಇಲ್ಲದಿದ್ದರೂ, ಸಮಂತಾ ಅವರಿಂದ ದೂರವಾದ ನಾಗಚೈತನ್ಯ ಸದ್ದು ಗದ್ದಲ ಇಲ್ಲದೇ ಶೋಭಿತಾ ಜೊತೆ ಮದುವೆಯಾದರಾ ಅನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಅದಕ್ಕೆ ಕಾರಣ ವೈರಲ್ ಆದ ಒಂದು ವಿಡಿಯೋ.
ಹೌದು, ಅಸಲಿಗೆ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದಲ್ಲಿ ನಾಗಚೈತನ್ಯ ಮಧುಮಗನಂತೆ ರೆಡಿಯಾಗಿದ್ದಾರೆ. ಇದು ಸಾಲದು ಎಂಬಂತೆ ಹೈದ್ರಾಬಾದ್‌ನ ಪ್ರಮುಖ ರಸ್ತೆಗಳಲ್ಲಿ ತೆರೆದ ಜೀಪಿನಲ್ಲಿ ನಾಗಚೈತನ್ಯ ಅವರ ಮೆರವಣಿಗೆ ಮಾಡಲಾಗಿದೆ.

ಇನ್ನೂ ಸಿಂಗಾರಗೊಂಡಿರುವ ಜೀಪ್ ಎದುರು, ಮದುವೆ ಮನೆಯಲ್ಲಿ ರೆಡಿಯಾದವರಂತೆ ಕೆಲವರು ರೆಡಿಯಾಗಿ ಹೆಜ್ಜೆ ಹಾಕಿದ್ದಾರೆ. ಹೇಗೆ ನೋಡಿದರೂ ಮದುವೆಯ ಸಂಭ್ರಮ ಸಡಗರಕ್ಕೆ ಕೈಗನ್ನಡಿ ಹಿಡಿಯುವಂತೆ ಕಾಣುವ ಈ ವಿಡಿಯೋ ನೋಡುತ್ತಿದ್ದರೆ, ನಾಗಚೈತನ್ಯ ಮದುವೆಯಾಯಿತಾ ಎನ್ನುವ ಅನುಮಾನ ಮೂಡದೇ ಇರದು. ಹೀಗಾಗಿಯೇ ಅಚ್ಚರಿಗೊಂಡ ಅನೇಕರು ಸದ್ಯಕ್ಕೆ ನಾಗ ಚೈತನ್ಯ ಅವರಿಗೆ ಮದುವೆಯಾಗಿದ್ದು ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ವಿಡಿಯೋವನ್ನು ಹಂಚುತ್ತಿದ್ದಾರೆ.
ಆದರೆ, ವಾಸ್ತವದಲ್ಲಿ ಇದು ನಾಗಚೈತನ್ಯ ಅವರ ಮದುವೆ ವಿಡಿಯೋ ಅಲ್ಲ ಬದಲಿಗೆ ಮದುವೆ ಮಳಿಗೆಯ ಉದ್ಘಾಟನೆಯೊಂದರ ವಿಡಿಯೋ. ಈ ಅಂಗಡಿಯಲ್ಲಿ ಮದುವೆಗೆ ಬೇಕಾದ ಪಂಚೆ-ಸೀರೆಗಳೆಲ್ಲವೂ ಸಿಗುತ್ತವೆ. ವಿಭಿನ್ನವಾದ ಆಕರ್ಷಕ ಸೂಟ್, ಶಾರ್ವಾನಿ, ಕುರ್ತಾ ಡಿಸೈನ್‌ಗಳು ಕೂಡ ಇಲ್ಲಿ ಲಭ್ಯ ಇವೆ.

ಈ ಹಿನ್ನೆಲೆ ಮದುವೆಯ ಮಳಿಗೆಯ ಉದ್ಘಾಟನೆ ಸಮಾರಂಭಕ್ಕೆ ಮಧುಮಗನಂತೆಯೇ ರೆಡಿಯಾಗಿ ಬಂದು ನಾಗಚೈತನ್ಯ ಟೇಪ್ ಕತ್ತರಿಸಿದ್ದಾರೆ. ಇನ್ನೂ ಇದೇ ಸಮಯದಲ್ಲಿ ತಮ್ಮ ಮದುವೆಯ ಕುರಿತು ಕೂಡ ಮಾತನಾಡಿರುವ ನಾಗಚೈತನ್ಯ ನಾನು ಸದ್ಯ ತುಂಬಾ ಖುಷಿಯಾಗಿದ್ದೇನೆ, ಶೀಘ್ರದಲ್ಲಿಯೇ ನನ್ನ ಮದುವೆ ನಡೆಯಲಿದೆ. ಮದುವೆಯ ದಿನಾಂಕವನ್ನು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದು ಹೇಳಿದ್ದಾರೆ ಎಂದು 123 ತೆಲುಗು ವೆಬ್ ಸೈಟ್ ವರದಿ ಮಾಡಿದೆ.
ಅಂದ್ಹಾಗೇ ನಾಗಚೈತನ್ಯ ಅವರ ಈ ವಿಡಿಯೋ ಸಮಂತಾ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಮದುವೆಯ ಉಡುಪು ಧರಿಸಿ, ಈ ತರ ಮೆರವಣಿಗೆಯನ್ನು ಮಾಡುವ ಮೂಲಕ ಸಮಂತಾ ಅವರ ಹೊಟ್ಟೆಯನ್ನು ನಾಗಚೈತನ್ಯ ಬೇಕು ಬೇಕೆಂದೇ ಉರಿಸುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಸಮಂತಾ ಅವರ ಭಕ್ತಗಣ ವ್ಯಕ್ತಪಡಿಸುತ್ತಿದೆ. ಇನ್ನೂ ಕೆಲವರು ನಾಗಚೈತನ್ಯ ಅವರ ಈ ನಡೆಯನ್ನು ಠೀಕಿಸಿದ್ದು ಇದು ಮದುವೆ ಮಳಿಗೆ ಉದ್ಘಾಟನೆಯ ಕಾರ್ಯಕ್ರಮ ಅಲ್ಲ, ಸಮಂತಾ ಅವರ ಬೇಸರ ಹತಾಶೆಯನ್ನು ಇನ್ನೂ ಹೆಚ್ಚು ಮಾಡಲು ನಾಗಚೈತನ್ಯ ಹಮ್ಮಿಕೊಂಡಿರುವ ಕಾರ್ಯಕ್ರಮ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಉಳಿದಂತೆ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಹೊಸ ಬದುಕಿಗೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.ಹೈದ್ರಾಬಾದ್ ಅಥವಾ ರಾಜಸ್ಥಾನದಲ್ಲಿ ಮದುವೆಯ ಸ್ಥಳವನ್ನು ಹುಡುಕುತ್ತಿದ್ದಾರೆ ಎಂಬ ವರದಿಯನ್ನು ಕೂಡ ತೆಲುಗು ಮಾಧ್ಯಮಗಳು ವರದಿ ಮಾಡಿವೆ


Click it and Unblock the Notifications











