ಖುಷಿ ಟ್ರೈಲರ್ ಪ್ಲೇ ಮಾಡಿದಾಗ ಚಿತ್ರಮಂದಿರದಿಂದ ಹೊರನಡೆದರೇ ನಾಗ ಚೈತನ್ಯ? ನಟ ಹೇಳಿದ್ದೇನು?

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನ ತೆಗೆದುಕೊಂಡಾಗಿನಿಂದ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ಇತ್ತೀಚೆಗೆ ನಟಿ ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದು ಕೂಡ ಇಬ್ಬರ ನಡುವಿನ ವದಂತಿಗಳಿಗೆ ಮತ್ತಷ್ಟು ಬಿಸಿ ಹಚ್ಚಿದೆ.

ಥಿಯೇಟರ್‌ ಒಂದರಲ್ಲಿ ಖುಷಿ ಸಿನಿಮಾದ ಟ್ರೈಲರ್ ಪ್ರಸಾರವಾಗುತ್ತಿದ್ದಂತೆ ನಾಗ ಚೈತನ್ಯ ಸಿಟ್ಟಿನಿಂದ ಹೊರನಡೆದಿದ್ದಾರೆ ಎಂಬ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ತಮ್ಮ ಮಾಜಿ ಪತ್ನಿ ಸಮಂತಾ ಅವರ ಹೊಸ ಚಿತ್ರ ಖುಷಿ ಟ್ರೇಲರ್ ಅನ್ನು ಥಿಯೇಟರ್ ಪ್ಲೇ ಮಾಡಿದ ಕಾರಣ, ಅದನ್ನು ನೋಡಲಾಗದೇ ಅವರ ಹೊರನಡೆದಿದ್ದಾರೆ ಎಂದು ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.

samantha-s-kushi-trailer

ಇದೆಲ್ಲಾ ಸುಳ್ಳು ಎಂದ ನಾಗ ಚೈತನ್ಯ!

ಈ ವದಂತಿಗಳು ಕಾಳ್ಗಿಚ್ಚಿನಂತೆ ಎಲ್ಲೆಡೆ ವೈರಲ್ ಆಗಿದ್ದವು. ಆದರೆ, ಇದೆಲ್ಲಾ ನಿಜವಲ್ಲ ಎಂದು ಮಾಹಿತಿ ದೊರೆತಿದೆ. ನಟ ನಾಗ ಚೈತನ್ಯ ಅವರೇ ಈ ವದಂತಿಗಳನ್ನು ಅಲ್ಲಗಳೆದಿದ್ದು, ಮಾಧ್ಯಮಗಳ ವರದಿಗಳು ಬರೀ ಸುಳ್ಳು ಎಂದು ಹೇಳಿದ್ದಾರೆ.

ಖುಷಿ ಟ್ರೇಲರ್ ಪ್ಲೇ ಆಗುತ್ತಿದ್ದ ಥಿಯೇಟರ್‌ನಿಂದ ಹೊರನಡೆದಿರುವ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ನಾಗ ಚೈತನ್ಯ ಸ್ಪಷ್ಟನೆ ನೀಡಿದ್ದಾರೆ. ಟೈಮ್ಸ್ ನೌ ಜೊತೆಗಿನ ಸಂವಾದದಲ್ಲಿ "ಇದು ಸಂಪೂರ್ಣ ಸುಳ್ಳು. ಕೆಲವು ತೆಲುಗು ವೆಬ್‌ಸೈಟ್‌ಗಳು ಈ ವದಂತಿಯನ್ನು ಪ್ರಾರಂಭಿಸಿವೆ. ನಾನು ಈಗಾಗಲೇ ಲೇಖನವನ್ನು ಸರಿಪಡಿಸಲು ನಾನು ಅವರಿಗೆ ವಿನಂತಿಸಿದ್ದೇನೆ. ಇದು ಸಂಪೂರ್ಣ ಆಧಾರರಹಿತ " ಎಂದು ಹೇಳಿದ್ದಾರೆ.

samantha-s-kushi-trailer

ನಾಗ ಚೈತನ್ಯ ಮತ್ತು ಸಮಂತಾ

ಈ ಹಿಂದೆ, ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂವಾದದಲ್ಲಿ, ನಾಗ ಚೈತನ್ಯ ಅವರು ಸಮಂತಾ ರುತ್ ಪ್ರಭು ಅವರ ವಿಚ್ಛೇದನದ ಬಗ್ಗೆ ಮಾತನಾಡಿದ್ದರು. "ನಾವು ಬೇರ್ಪಟ್ಟು ಎರಡು ವರ್ಷಗಳಿಗಿಂತ ಹೆಚ್ಚು ಕಾಲವಾಗಿದೆ. ಕಾನೂನು ಬದ್ಧವಾಗಿ ವಿಚ್ಛೇದನ ಪಡೆದು ಒಂದು ವರ್ಷವಾಗಿದೆ. ನ್ಯಾಯಾಲಯ ನಮಗೆ ವಿಚ್ಛೇದನ ನೀಡಿದೆ. ನಾವಿಬ್ಬರೂ ನಮ್ಮ ಜೀವನದಲ್ಲಿ ಮುಂದೆ ಹೋಗಿದ್ದೇವೆ. ನಮ್ಮ ಜೀವನದ ಬಗ್ಗೆ ನಮಗೆ ಗೌರವವಿದೆ. ಸಮಂತಾ ಸುಂದರ ವ್ಯಕ್ತಿತ್ವದವರು, ಎಲ್ಲಾ ಸಂತೋಷ ಪಡೆಯಲು ಅವರು ಅರ್ಹರು" ಎಂದು ಮನದುಂಬಿ ಹರಸಿದ್ದರು.

ಕಳೆದ ವರ್ಷ ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ,"ನಾವಿಬ್ಬರೂ ಹೊರಬಂದು ನಮ್ಮ ಹೇಳಿಕೆಗಳನ್ನು ನೀಡಿದ್ದೇವೆ. ನಾವಿಬ್ಬರೂ ಒಬ್ಬರ ಮೇಲೆ ಒಬ್ಬರು ಅಪಾರ ಗೌರವ ಇಟ್ಟುಕೊಂಡಿದ್ದೇವೆ. ಸಮಂತಾ ಏನು ಮಾಡುತ್ತಿದ್ದಾರೆ ಎಂದು ನಾನು ಯಾವಾಗಲೂ ನೋಡುತ್ತೇನೆ. ಆಕೆಯ ಬಗ್ಗೆ ಯಾವಾಗಲೂ ಹೆಚ್ಚಿನ ಗೌರವವಿದೆ. ಜನರು ತಮ್ಮ ಪತ್ರಿಕೆಗಳ ಅಂಕಣಗಳನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ" ಎಂದು ಹೇಳಿದ್ದರು.

More from Filmibeat

English summary
Naga Chaitanya reacted over Samantha’s Kushi trailer rumors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X