ಮೆಗಾ ಪ್ರಿನ್ಸ್ ಮದ್ವೆಗೆ ಖರ್ಚಾಗಿದ್ದು ಎಷ್ಟು ಕೋಟಿ? 11 ವರ್ಷಗಳ ಹಿಂದೆಯೇ ನನ್ನ ಮದ್ವೆಗೆ ಚಿರು ಬರ್ತಾರೆ ಎಂದಿದ್ದ ಲಾವಣ್ಯ!
ಟಾಲಿವುಡ್ ಅಂಗಳದಲ್ಲಿ ಶುಭ ಸಮಾರಂಭಗಳ ಪರ್ವ ಶುರುವಾಗಿದೆ. ಮೆಗಾ ಫ್ಯಾಮಿಲಿ ನಟ ವರುಣ್ ತೇಜ್, ನಟಿ ಲಾವಣ್ಯ ತ್ರಿಪಾಠಿ ಕೈ ಹಿಡಿದಿದ್ದಾರೆ. ಇಟಲಿಯಲ್ಲಿ ಈ ಜೋಡಿಯ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿದೆ. ಸಾಕಷ್ಟು ಗಣ್ಯರು ಈ ವಿವಾಹ ಮಹೋತ್ಸವದಲ್ಲಿ ಹಾಜರಿದ್ದರು.
ವರುಣ್- ಲಾವಣ್ಯ ಮದುವೆಯ ಸುಂದರ ಕ್ಷಣಗಳ ಕ್ಯಾಂಡಿಡ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹಳ ಅದ್ಧೂರಿಯಾಗಿ ಈ ಮದುವೆ ನಡೆಸಿರುವುದು ಗೊತ್ತಾಗುತ್ತಿದೆ. ಮದು ಮಗ ವರುಣ್ ಶೆರ್ವಾಣಿ ಮಾದರಿಯ ಎಂಬ್ರಾಯಿಡರಿ ಔಟ್‌ಫಿಟ್‌ನಲ್ಲಿ ಮಿಂಚಿದರೆ ಕೆಂಪು ಬಣ್ಣದ ಸೀರೆಯಲ್ಲಿ ಲಾವಣ್ಯ ಕಂಗೊಳಿಸಿದ್ದಾರೆ. ಚಿರಂಜೀವಿ ಜೊತೆಗೆ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಇಡೀ ಮೆಗಾ ಫ್ಯಾಮಿಲಿ ಸ್ಟಾರ್‌ಗಳೆಲ್ಲಾ ವರುಣ್ ಮದುವೆಗೆ ಹಾಜರಾಗಿ ಶುಭ ಕೋರಿದ್ದಾರೆ.

ಹೈದರಾಬಾದ್‌ನಲ್ಲಿ ಆಪ್ತರು ಹಾಗೂ ಚಿತ್ರರಂಗದವರಿಗಾಗಿ ಆತರಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಟಲಿಯಲ್ಲಿ ನಡೆದ ಮದುವೆಗೆ ಕೆಲವೇ ಆಪ್ತರು ಹಾಗೂ ಸ್ನೇಹಿತರು ಭಾಗಿ ಆಗಿದ್ದರು. ಸಿನಿಮಾ ತಾರೆಯರು ಡೆಸ್ಟಿನೇಷನ್ ವೆಡ್ಡಿಂಗ್ ಬಗ್ಗೆ ಹೆಚ್ಚು ಒಲವು ಹೊಂದಿರುತ್ತಾರೆ. ಭಾರತದಲ್ಲಿ ಜೈಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ಲ್ಯಾನ್ ಮಾಡುತ್ತಾರೆ. ವಿದೇಶ ಅಂದಾಕ್ಷಣ ಎಲ್ಲರಿಗೂ ನೆನಪಾಗುವುದು ಇಟಲಿ. ಕೆಲ ಬಾಲಿವುಡ್ ತಾರೆಯರು ಕೂಡ ಇಟಲಿಯಲ್ಲಿ ಹಸೆಮಣೆ ಏರಿದ್ದರು.
ವರುಣ್ ತೇಜ್, ಲಾವಣ್ಯ ಮದುವೆಗೆ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಸೇರಿ 200 ಮಂದಿ ಭಾಗಿ ಆಗಿದ್ದರು. ಚಿರಂಜೀವಿ ಸಹೋದರ ಮಗಳು ನಿಹಾರಿಕಾ ಮದುವೆಯನ್ನೂ ಬಹಳ ಅದ್ಧೂರಿಯಾಗಿ ನೆರವೇರಿಸಿದ್ದರು. ಇದೀಗ ಮಗನ ಮದುವೆಯನ್ನೂ ಕೂಡ ಕೋಟ್ಯಂತರ ರೂಪಾಯಿ ವ್ಯಯಿಸಿ ಮಾಡಿ ಮುಗಿಸಿದ್ದಾರೆ. ಇಟಲಿಯ ಟಸ್ಕನಿಯಲ್ಲಿರುವ ಬೋರ್ಗೊ ಸ್ಯಾನ್ ಫೆಲಿಸ್ ಹೋಟೆಲ್‌ನಲ್ಲಿ ಈ ಮೆಗಾ ಕಲ್ಯಾಣೋತ್ಸವ ನಡೆದಿದೆ. ಸಂಗೀತ್, ಹಳದಿ, ಮುಹೂರ್ತ, ರಿಸೆಪ್ಷನ್ ಅಂತೆಲ್ಲಾ ಬಹಳ ಅದ್ಧೂರಿಯಾಗಿ ಮದುವೆ ಶಾಸ್ತ್ರಗಳು ನಡೆದಿದೆ.
ಮದುವೆಗೆ ಬಂದ ಅತಿಥಿಗಳಿಗೆ ವಾಸ್ತವ್ಯದ ವ್ಯವಸ್ಥೆ, ಊಟೋಪಚಾರ, ಮದುವೆ ಶಾಸ್ತ್ರಗಳು, ಕುಟುಂಬಸ್ಥರಿಗೆ ಉಡುಗೆ ತೊಡುಗೆ ಅಂತೆಲ್ಲಾ ಬರೋಬ್ಬರಿ 10 ಕೋಟಿ ರೂ. ಖರ್ಚು ಮಾಡಿ ನಾಗಬಾಬು ಮಗನ ಮದುವೆ ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಟಾಲಿವುಡ್‌ನಲ್ಲಿ ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ. ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇಟಲಿಯಲ್ಲಿ ನಡೆದ ಮದುವೆಗೆ ಭಾಗಿ ಆಗಲು ಸಾಧ್ಯವಾಗದವರು ಈ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನು ವರುಣ್ - ಲಾವಣ್ಯ ಮದುವೆ ಫೋಟೊವನ್ನು ನಟ ಚಿರಂಜೀವಿ ಹಂಚಿಕೊಂಡಿದ್ದರು. ಮಡದಿ, ಮಗ, ಸೊಸೆ, ಮೊಮ್ಮೊಗಳ ಸಮೇತ ಚಿರು ಮದುವೆ ಸಮಾರಂಭದಲ್ಲಿ ಭಾಗಿ ಆಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನು ಇದೆಲ್ಲದರ ನಡುವೆ ಲಾವಣ್ಯ ನಟನೆಯ ಹಳೇ ಸಿನಿಮಾ ಡೈಲಾಗ್ ವೈರಲ್ ಆಗುತ್ತಿದೆ. ಅದು ಲಾವಣ್ಯ ನಟಿಸಿದ ಮೊದಲ ಸಿನಿಮಾ 'ಅಂದಾಲ ರಾಕ್ಷಸಿ' ಡೈಲಾಗ್.
'ಅಂದಾಲ ರಾಕ್ಷಸಿ' ಚಿತ್ರದ ಸನ್ನಿವೇಶವೊಂದರಲ್ಲಿ ಚಿಕ್ಕ ಹುಡುಗಿ ಬಂದು ಚಿತ್ರದ ನಾಯಕಿ ಲಾವಣ್ಯ ಬಳಿ "ಅಕ್ಕ ನಿನ್ನ ಮದುವೆಗೆ ಚಿರಂಜೀವಿ ಬರ್ತಾರಂತೆ ಹೌದಾ? ಎಂದು ಕೇಳುತ್ತದೆ. ಬಹಳ ನೋವಿನಲ್ಲಿರುವ ನಾಯಕಿ ಹೌದು ಎಂದು ಹೇಳಿ ಸುಮ್ಮನಾಗುತ್ತಾಳೆ. ಆ ಹುಡುಗಿ ಚಿರಂಜೀವಿ ಮದುವೆಗೆ ಬರ್ತಾರೆ, ಗ್ಯಾಂಗ್ ಲೀಡರ್ ಎನ್ನುತ್ತಾ ಹೋಗುತ್ತದೆ. ಆ ಸಿನಿಮಾ ಡೈಲಾಗ್ ರೀತಿಯೇ ಈಗ ಲಾವಣ್ಯ ಮದುವೆಗೆ ಚಿರು ಬಂದಿದ್ದಾರೆ. ಇದು ಕಾಕತಾಳೀಯ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಲಾವಣ್ಯ ತ್ರಿಪಾಠಿ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 'ಮಿಸ್ಟರ್' ಎನ್ನುವ ಚಿತ್ರದಲ್ಲಿ ವರುಣ್- ಲಾವಣ್ಯ ಮೊದಲಿಗೆ ನಟಿಸಿದ್ದರು. ಆ ಸಮಯದಲ್ಲೇ ಇಬ್ಬರ ನಡುವೆ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಲಿ ಬಿದ್ದಿದ್ದರು. ಬಳಿಕ 'ಅಂತರಿಕ್ಷ 9000' ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸಿದ್ದರು. ಇದೀಗ ಪೋಷಕರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ.


Click it and Unblock the Notifications











