ಸದ್ದಿಲ್ಲದೇ ನಡೆಯಿತಾ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ ಸಮಾರಂಭ ? ವೈರಲ್ ಫೋಟೊದ ಅಸಲಿಯತ್ತೇನು ?

By ಫಿಲ್ಮಿಬೀಟ್ ಡೆಸ್ಕ್

ಅರುಂಧತಿ, ದೇವಸೇನಾ, ಭಾಗಮತಿ ರೀತಿಯ ಅದ್ಬುತ ಪಾತ್ರಗಳಿಗೆ ಜೀವತುಂಬಿ ಅನೇಕರ ಹೃದಯವನ್ನ ಗೆದ್ದವರು ಅನುಷ್ಕಾ ಶೆಟ್ಟಿ. ಮೊದಲಿಂದನೂ ವುಮೆನ್ ಓರಿಯೆಂಟೆಡ್ ಸಿನಿಮಾಗಳಿಗೆ ಮೊದಲ ಆದ್ಯತೆಯನ್ನ ನೀಡುತ್ತಾ ಬಂದ ಅನುಷ್ಕಾ ಶೆಟ್ಟಿ ಅವರ ಮದುವೆಯ ಕುರಿತು ಅವರ ಹೆತ್ತವರು ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅಭಿಮಾನಿಗಳಿಗಂತೂ ಈ ವಿಚಾರದಲ್ಲಿ ವಿಪರೀತವಾಗಿ ತಲೆ ಬಿಸಿಯಾಗಿದೆ.

ಅದರಲ್ಲಿಯೂ ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಮದುವೆ ಮಾಡಿಸಬೇಕೆಂದು ಶಪಥವನ್ನು ಮಾಡಿರುವ ಒಂದು ದೊಡ್ಡ ವರ್ಗವೇ ಇದೆ. ಪ್ರಭಾಸ್ ಮತ್ತು ಅನುಷ್ಕಾ ಭೇಟಿಯಾಗುವುದನ್ನೇ ಕಾಯುವ ಇವರು ಇನ್ನೇನು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದ್ವೆ ನಡೆದೇ ಹೋಯಿತು ಎನ್ನುವಂತೆ ಆಗಾಗ ಡಿಜಿಟಲ್ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸುತ್ತಾರೆ. ಚರ್ಚೆಯನ್ನು ಮಾಡುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸದ್ಯ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Did Prabhas get engaged to Anushka Shetty Here s the truth behind the viral engagement photo

ಹೌದು, ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಿಶ್ಚಿತಾರ್ಥ ಸಮಾರಂಭದ ಫೋಟೊ ವೈರಲ್ ಆಗುತ್ತಿದೆ. ಫೋಟೊ ನೋಡಿದ ಅನೇಕರು ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಎಂಗೇಜ್‌ಮೆಂಟ್ ಸಮಾರಂಭ ಯಾವಾಗ ನೆರವೇರಿತು ಎಂದು ಹುಬ್ಬೇರಿಸುತ್ತಿದ್ದಾರೆ. ಇನ್ನು ಕೆಲವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡರಾ ಹೇಗೆ ? ಎಂದು ತಮಗೆ ತಾವೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದಾರೆ.

ಆದರೆ, ವಾಸ್ತವದಲ್ಲಿ ಹರಿದಾಡುತ್ತಿರುವ ಈ ಭಾವಚಿತ್ರ ನಕಲಿ. ಎಐ ತಂತ್ರಜ್ಞಾನದ ಸಹಾಯದಿಂದ ಯಾರೋ ಈ ಫೋಟೊವನ್ನು ಸೃಷ್ಟಿಸಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ ಸಮಾರಂಭ ನಡೆದಂತೆ ತೋರಿಸಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರದ್ದು ಹೇಳಿ ಮಾಡಿಸಿದ ಜೋಡಿ ಇಬ್ಬರು ನಿಜಜೀವನದಲ್ಲಿ ನಿಜಕ್ಕೂ ಮದುವೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಜೋಡಿಯನ್ನು ಇಷ್ಟಪಡುವ ಅಭಿಮಾನಿಗಳಿಗೆ ಫೋಟೊ ಖುಷಿಯನ್ನು ನೀಡಿದೆ. ಇದರ ನಡುವೆ ಎಐ ತಂತ್ರಜ್ಞಾನದ ಸದುಪಯೋಗ ಮತ್ತು ದುರುಪಯೋಗದ ಕುರಿತು ಚರ್ಚೆ ಕೂಡ ನಡೆಯುತ್ತಿದೆ.

ಅಂದ್ಹಾಗೇ ಎಐ ತಂತ್ರಜ್ಞಾನದ ಸಹಾಯದಿಂದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರ ನಿಶ್ಚಿತಾರ್ಥದ ಫೋಟೊವನ್ನು ಇದೇ ಮೊದಲ ಬಾರಿ ಸೃಷ್ಟಿಸಲಾಗಿಲ್ಲ. ಈ ಹಿಂದೆ ಕೂಡ ಅನೇಕ ಬಾರಿ ತಮ್ಮ ತಮ್ಮ ಕಲ್ಪನೆಗೆ ಅನುಸಾರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ನಿಶ್ಚಿತಾರ್ಥ ಸಮಾರಂಭವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಸಾಲಿಗೆ ಈಗ ಈ ಫೋಟೊ ಕೂಡ ಸೇರಿಕೊಂಡಿದೆ.

ಇನ್ನುಳಿದಂತೆ ಅನುಷ್ಕಾ ಶೆಟ್ಟಿ ಅಭಿನಯದ ಘಾಟಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಹಲವು ಬಾರಿ ಪ್ರಭಾಸ್ ಚಿತ್ರದ ಸೆಟ್‌ಗೆ ಭೇಟಿ ಕೊಟ್ಟಿದ್ದರು. ಆಗಲೂ ಕೂಡ ಇವರಿಬ್ಬರ ನಡುವಿನ ಸಂಬಂಧದ ಕುರಿತು ಟಾಲಿವುಡ್‌ನಲ್ಲಿ ಚರ್ಚೆ ನಡೆದಿತ್ತು. ಇನ್ನೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ.ಆ ಪೈಕಿ ಪೌಜಿ ಚಿತ್ರ ಒಂದಾದರೆ ರಾಜಾ ಸಾಬ್ ಚಿತ್ರದ ಬಿಡುಗಡೆ ಮತ್ತೊಂದು. ಏಪ್ರಿಲ್ ಹತ್ತರಂದು ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಇನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಕೂಡ ಪ್ರಭಾಸ್ ಕೈಯಲ್ಲಿದ್ದು ಕಲ್ಕಿ 2 ಚಿತ್ರವನ್ನು ಕೂಡ ಪ್ರಭಾಸ್ ಇನ್ನೂ ಮಾಡಬೇಕಿದೆ. ಇದೆಲ್ಲದರ ನಡುವೆ ಸಲಾರ್ 2 ಕೂಡ ತೆರೆಗೆ ಬರಬೇಕಿದೆ.

More from Filmibeat

Read more about: anushka shetty prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X